ಶಾಸಕರು ಹಾಗೂ ನಾಯಕರ ವಿರುದ್ಧ ಗರಂ ಆದ ಅಮಿತ್ ಶಾ | ನಿಮ್ಮ ನೋಡಿ ಮತ ಹಾಕಲ್ಲ, ಮೋದಿ, ಕಮಲ ಚಿಹ್ನೆ ನೋಡಿ ಮತ ಹಾಕುತ್ತಾರೆ

ಮಂಗಳೂರು : ಪುತ್ತೂರಿನ ಕಾರ್ಯಕ್ರಮ ಮುಗಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳೂರಿನಲ್ಲಿ ಬಿಜೆಪಿ ಪದಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಈ ಸಭೆಯಲ್ಲಿ ನಾಯಕರು ತುಟಿಬಿಚ್ಚಿಲ್ಲ, ಪದಾಧಿಕಾರಿಗಳು ಶಾಸಕರು ಹಾಗೂ ನಾಯಕರ ವಿರುದ್ಧ ಗರಂ ಅಮಿತ್ ಶಾ ಆಗಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ರಾಜ್ಯ ಬಿಜೆಪಿ ನಾಯಕರ ನೋಡಿ ಮತ ಹಾಕಲ್ಲ, ಮೋದಿ ಹಾಗೂ ಕಮಲ ಚಿಹ್ನೆ ನೋಡಿ ಮತ ಹಾಕುತ್ತಾರೆ ಎಂದು ಪದಾಧಿಕಾರಿಗಳ ಸಭೆಯಲ್ಲಿ ಅಮಿತ್ ಶಾ ಹೇಳಿದ್ದಾರೆ. ಮೀಟಿಂಗ್ ಕುರಿತ ಮಹತ್ವದ ಮಾಹಿತಿ ಇಲ್ಲಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಭರ್ಜರಿ ರಣತಂತ್ರಗಳನ್ನು ರೂಪಿಸಿರುವ ಬಿಜೆಪಿ ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಸಿ ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ.

ಬಿಜೆಪಿಯ ಶಿವಮೊಗ್ಗ, ಮಂಗಳೂರು ವಿಭಾಗಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸಿ, ನಾಯಕರಿಗೆ ಚುನಾವಣೆ ಸಂಬಂಧಿಸಿ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ ಕಟೀಲ್ , ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಸೇರಿ ಪ್ರಮುಖ ನಾಯಕರು ಉಪಸ್ಥಿತರಿದ್ದರು.

”ಅಮಿತ್ ಶಾ ಅವರು ಎರಡು ವಿಭಾಗಗಳ ಆರು ಜಿಲ್ಲೆಗಳ 33 ಕ್ಷೇತ್ರಗಳನ್ನು ಗೆಲ್ಲುವ ಸೂತ್ರ ಸೂಚ್ಯವಾಗಿ ನೀಡಿದ್ದಾರೆ. ಸಿದ್ದತೆ ಆರಂಭಿಸಲು ಹೇಳಿದ್ದಾರೆ‌ ಎನ್ನಲಾಗಿದೆ.

ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಪಕ್ಷದ ಬಲವರ್ಧನೆಯಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ ಅಮಿತ್ ಶಾ ಅವರು ,ಸಂಸದ ಶಾಸಕ ಸ್ಥಾನದ ಜತೆಗೆ ಚುನಾವಣೆಗೂ ಕೆಲಸ ಮಾಡಬೇಕು.ನಿಮಗೆ ಆಗದಿದ್ದರೆ ಕಾರ್ಯಕರ್ತರಿದ್ದಾರೆ.ನಾವು ಕಾರ್ಯಕರ್ತರಿಗೆ ಟಿಕೇಟ್ ನೀಡುತ್ತೇವೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ ಎನ್ನಲಾಗಿದೆ.

ಶಿವಮೊಗ್ಗ ,ಮಂಗಳೂರು ಈ ಎರಡು ವಿಭಾಗಗಳ ಆರು ಜಿಲ್ಲೆಗಳನ್ನು ಒಳಗೊಂಡಂತೆ 118 ಮಂದಿ ಪ್ರಮುಖರ ಸಭೆ ನಡೆಸಿರುವ ಅಮಿತ್ ಶಾ ಅವರು ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು ನೀಡುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಪ್ರತಿ ಮನೆಯನ್ನು ಕೇಂದ್ರೀಕರಿಸಿ ಪ್ರಚಾರ ಆರಂಭಿಸಬೇಕು. ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸಿ ಕಾರ್ಯೋನ್ಮುಖವಾಗುವಂತೆ ಅವರು ಸೂಚನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಯಲ್ಲಿನ ಸದ್ಯದ
ರಾಜಕೀಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದ ಅವರು ಬಿಜೆಪಿಗೆ ಅಧಿಕ ಸ್ಥಾನ ಬರುವಲ್ಲಿ ಕಾರ್ಯಕರ್ತರನ್ನು ಸಜ್ಜುಗೊಳಿಸುವುದರೊಂದಿಗೆ ಮನೆ ಮನೆ ಭೇಟಿಗೆ ಪ್ರಧಾನ
ಆದ್ಯತೆ ನೀಡುವಂತೆ ಸಲಹೆ ನೀಡಿದ್ದಾರೆ.

ಸರಕಾರದ ಸಾಧನೆಯನ್ನು ಮುಂದಿರಿಸಿ ಜನತೆಯ ಬಳಿ ತೆರಳುವಂತೆ ಅವರು ಸೂಚಿಸಿದ್ದಾರೆ.

ಅಮಿತ್ ಶಾ ಜತೆ ಪಕ್ಷದ ಪದಾಧಿಕಾರಿಗಳು ಮಾತ್ರ ಮಾತನಾಡಿದ್ದು,ಜನಪ್ರತಿನಿಧಿಗಳು ತುಟಿ ಬಿಚ್ಚಿಲ್ಲ ಎನ್ನಲಾಗಿದೆ.ಮಂಗಳೂರು ಹಾಗೂ ಶಿವಮೊಗ್ಗ ವಿಭಾಗದ ಆರು ಜಿಲ್ಲೆಗಳ ಶಾಸಕರು ,ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Leave A Reply

Your email address will not be published.