ತಿಂಗಳಿಡೀ ಮೂರು ಹೊತ್ತು ಬರೀ ಪಿಜ್ಜಾ ತಿಂದೇ ಬದುಕಿದನೀ ಪುಣ್ಯಾತ್ಮ! ತಿಂಗಳಾಂತ್ಯಕ್ಕೆ ತೂಕ ಕಡಿಮೆ ಮಾಡ್ಕೊಂಡು, ಒಳ್ಳೆ ಫಿಟ್ ಕೂಡ ಆದ!!
ಆತ ತಿಂಗಳಿಡೀ ಬೇರೆನನ್ನೂ ತಿನ್ನದೆ, ಬರೀ ಪಿಜ್ಜಾ, ಬರ್ಗರ್ ತಿಂದೇ ಬದುಕಿದ್ದಾನೆ. ಅಪರೂಪಕ್ಕೆಂದು ಪಿಜ್ಜಾ, ಬರ್ಗರ್ ತಿಂದ್ರೆನೇ ಊದಿ ಒಡೆಯುವಂತೆ ಬೆಳೆಯುವ ಜನರ ನಡುವೆ ಈ ಭೂಪ ಮಾತ್ರ ತೂಕ ಇಳಿಸಿಕೊಂಡು, ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ್ದಾನೆ. ಅಷ್ಟೇ ಅಲ್ಲ ಇದರಿಂದ ತನ್ನ ಸ್ನಾಯುಗಳನ್ನೂ ಗಟ್ಟಿಮಾಡಿಕೊಂಡಿದ್ದಾನೆ!
ಹೌದು, ಪಿಜ್ಜಾ ಅಂದ್ರೆ ಹಲವರಿಗದು ಅತ್ಯಂತ ಪ್ರಿಯವಾದ ಆಹಾರ. ಅದರಲ್ಲಿರುವ ಗರಿಗರಿಯಾದ ಕ್ರಸ್ಟ್, ಕರಗಿದ ಚೀಸ್ ಮತ್ತು ಸುವಾಸನೆಯ ಮೇಲೋಗರಗಳ ಸಂಯೋಜನೆಯು ಬಾಯಲ್ಲಿ ನೀರೂರಿಸುತ್ತದೆ. ಪ್ರತೀ ದಿನವೂ ಇದನ್ನು ಆನ್ಲೈನ್ ಅಲ್ಲಿ ಆರ್ಡರ್ ಮಾಡಿ ತರಿಸಿ ತಿನ್ನುವವರು ಇದ್ದಾರೆ. ಕೆಲವರು ಇದನ್ನು ಊಟದ ನೆಪದಲ್ಲೇ ಸೇವಿಸುತ್ತಾರೆ. ಆದ್ರೆ ಡಯೆಟ್‌ನಲ್ಲಿರೋರು, ತೂಕ ಹೆಚ್ಚಾಗುತ್ತೆ ಅನ್ನೋ ಭಯ ಇರೋರು ಇಂಥಾ ಜಂಕ್‌ಫುಡ್‌ಗಳಿಂದ ದೂರವಿರುತ್ತಾರೆ. ಆದ್ರೆ ಇಲ್ಲೊಬ್ಬ ಆಸಾಮಿ ತಿಂಗಳಲ್ಲಿ ಮೂವತ್ತು ದಿನಾನೂ ಪಿಜ್ಜಾ ತಿಂದುಕೊಂಡೇ ಭರ್ಜರಿ ತೂಕ ಇಳಿಸಿಕೊಂಡಿದ್ದಾನೆ. ಕೇಳೋಕೆ ಅಚ್ಚರಿ ಅನಿಸಿದರೂ ಇದು ನಿಜ!
ಯಸ್, Ladbible ಪ್ರಕಾರ ಇತ್ತೀಚೆಗೆ, ಉತ್ತರ ಐರ್ಲೆಂಡ್‌ನ ವ್ಯಕ್ತಿಯೊಬ್ಬರು 30 ದಿನಗಳ ಚಾಲೆಂಜ್‌ನಲ್ಲಿ ದಿನಕ್ಕೆ ಮೂರು ಬಾರಿ ಪಿಜ್ಜಾ ತಿನ್ನುವ ಮೂಲಕ ತೂಕವನ್ನು ಕಳೆದುಕೊಂಡರು. ರಿಯಾನ್ ಮರ್ಸರ್ ಎಂಬ ವ್ಯಕ್ತಿ 30-ದಿನಗಳ ಸವಾಲಿನ ಸಮಯದಲ್ಲಿ, ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟದ ನಡುವೆ ದಿನಕ್ಕೆ 10 ಸ್ಲೈಸ್ ಪಿಜ್ಜಾವನ್ನು ತಿನ್ನುತ್ತಿದ್ದರು. ಆದರೆ ಅವರು ಕೊಬ್ಬಿನ್ನು ಪಡೆಯುವ ಬದಲಿಗೆ ಹೆಚ್ಚಿನ ಸ್ನಾಯುಗಳನ್ನು ಗಳಿಸಿದರು!
ತಾವೇ ಹಾಕಿಕೊಂಡ ಸವಾಲಿನ ಸಮಯದಲ್ಲಿ, ಮರ್ಸರ್ ಪಿಜ್ಜಾವನ್ನು ಹೊರತುಪಡಿಸಿ ಬೇರೆಲ್ಲಾ ಆಹಾರವನ್ನು ತ್ಯಜಿಸಲು ನಿರ್ಧರಿಸಿದರು. ಕ್ಯಾಲೋರಿ ಕೊರತೆ ಮತ್ತು ಆರೋಗ್ಯದ ಬಗ್ಗೆ ಒಂದು ಅಂಶವನ್ನು ಸಾಬೀತುಪಡಿಸಲು ಅವರು ಎಲ್ಲಾ ರೀತಿಯ ಜಂಕ್ ಫುಡ್ ಮತ್ತು ಫಾಸ್ಟ್ ಫುಡ್ ಟೇಕ್‌ಅವೇಗಳನ್ನು ತಿನ್ನುವುದನ್ನು ನಿಲ್ಲಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಅವರು ‘ನಾನು ಕ್ಯಾಲೋರಿಗಳು ಮತ್ತು ಕೊಬ್ಬಿನ ನಷ್ಟವನ್ನು ಮಾತ್ರ ಹೈಲೈಟ್ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದೆ. ಇದಕ್ಕಾಗಿ ನೆಚ್ಚಿನ ಆಹಾರವನ್ನು ಬಿಟ್ಟುಬಿಡಬೇಕಿಲ್ಲ ಎಂದು ಜನರಿಗೆ ಹೇಳಬೇಕಿತ್ತು. ಪಲಿತಾಂಶಗಳನ್ನು ಪಡೆಯಲು ನಾವು ನಮ್ಮ ನೆಚ್ಚಿನ ಆಹಾರಗಳನ್ನು ನಿರ್ಬಂಧಿಸಬೇಕಾಗಿಲ್ಲ ಮತ್ತು ಹೆಚ್ಚಿನ ಜನರು ತಮ್ಮದೇ ಆದ ಆಹಾರವನ್ನು ತಯಾರಿಸಲು ಪ್ರೋತ್ಸಾಹಿಸಲು ನಾನು ಬಯಸುತ್ತೇನೆ” ಎಂದು ಹೇಳಿದರು.
ಅಲ್ಲದೆ ತಾವು ತಿನ್ನುತ್ತಿದ್ದ ಪಿಜ್ಜಾ ಕುರಿತು ವಿವರಿಸಿದ ಇವರು ‘ಪಿಜ್ಜಾ ನನ್ನ ಸಾರ್ವಕಾಲಿಕ ಅಚ್ಚುಮೆಚ್ಚಿನ ಆಹಾರಗಳಲ್ಲಿ ಒಂದಾಗಿದೆ, ಹಾಗಾಗಿ ನಾನು ಎಲ್ಲಾ ತಿಂಗಳು ಅದನ್ನು ತಿನ್ನುವುದನ್ನು ಆನಂದಿಸಿದೆ, ಆದರೂ ನನಗೆ ಕೆಲವು ವ್ಯತ್ಯಾಸಗಳನ್ನು ನೀಡಲು ನಾನು ವಿವಿಧ ರೀತಿಯ ಪಿಜ್ಜಾಗಳನ್ನು ಸೇವಿಸಿದ್ದೇನೆ. ದಿನಕ್ಕೆ ಎರಡು ಪಿಟ್ಟಾ ಪಿಜ್ಜಾಗಳು ಮತ್ತು ಒಂದು ದೊಡ್ಡ ಹಿಟ್ಟಿನ-ಆಧಾರಿತ ಪಿಜ್ಜಾವನ್ನು ನಾನು ತಿನ್ನುತ್ತಿದ್ದೆ. ಇದು ದಿನಕ್ಕೆ ಸರಿಸುಮಾರು 10 ಸ್ಲೈಸ್‌ಗಳಿಗೆ ಸಮನಾಗಿರುತ್ತದೆ. ಅಲ್ಲದೆ ಹಣಕ್ಕೆ ಸಂಬಂಧಿಸಿದಂತೆ, ಪಿಜ್ಜಾಗಳಿಖೆ ನಾನು ಕೇವಲ 10 ಯೂರೋಗಳಷ್ಟು ವೆಚ್ಚಮಾಡುತ್ತಿದ್ದೆ. ದಿನಕ್ಕೆ ಸುಮಾರು 885.8 ರೂ.ಗಳಷ್ಟು ಹಣವನ್ನು ಉಳಿಸಲು ತಾನು ಯಶಸ್ವಿಯಾಗಿದ್ದೇನೆ’ ಎಂದು ರಿಯಾನ್ ಹೇಳಿಕೊಂಡಿದ್ದಾರೆ.