Rishabh Pant: ಭೀಕರ ಕಾರು ಅಪಘಾತದ ನಂತರ ತನ್ನ ಮೊದಲ ಫೋಟೋ ಹಂಚಿಕೊಂಡ ರಿಷಭ್ ಪಂತ್ | ಈಗ ಹೇಗಿದ್ದಾರೆ ನೋಡಿ!

ರಿಷಬ್‌ ಪಂತ್‌ ಭಾರತದ ಸ್ಫೋಟಕ ಬ್ಯಾಟ್ಸ್‌ಮ್ಯಾನ್‌. ಇತ್ತೀಚೆಗಷ್ಟೇ ಭೀಕರ ಕಾರು ಅಪಘಾತದಲ್ಲಿ ನಲುಗಿ ಹೋಗಿದ್ದ ಈ ಬ್ಯಾಟ್ಸ್‌ ಮ್ಯಾನ್‌ ಬಹಳ ದಿನಗಳ ಬಳಿಕ ತಮ್ಮ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಪಘಾತದ ನಂತರ, ಭಾರತ ತಂಡದ ಬ್ಯಾಟ್ಸ್‌ಮನ್ ರಿಷಬ್ ಪಂತ್ ಮೊದಲ ಬಾರಿಗೆ ತಮ್ಮ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ರಿಷಬ್ ಪಂತ್ ಊರುಗೋಲಲ್ಲಿ ನಡೆಯುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು. ಅವರ ಒಂದು ಕಾಲಿಗೆ ಗಾಯವಾಗಿದೆ.

https://twitter.com/RishabhPant17/status/1624030516210184192/photo/1?ref_src=twsrc%5Etfw%7Ctwcamp%5Etweetembed%7Ctwterm%5E1624030516210184192%7Ctwgr%5E499577d289317b3aa4df50504eff13208bcf46da%7Ctwcon%5Es1_&ref_url=https%3A%2F%2Fzeenews.india.com%2Fhindi%2Fzeesalaam%2Fcricket%2Frishabh-pant-shared-photos-on-social-media-first-time-after-accident-smzs%2F1566581

ಕಳೆದ ವರ್ಷ ರಿಷಬ್ ಪಂತ್ ಕಾರು ಅಪಘಾತಕ್ಕೆ ಒಳಗಾಗಿದ್ದು, ಅಪಘಾತದಲ್ಲಿ ಅವರು ಸಾಕಷ್ಟು ನೊಂದಿದ್ದರು ಕೂಡಾ. ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ದೊಡ್ಡ ಮಟ್ಟದಲ್ಲಿ ಇದು ಸುದ್ದಿ ಕೂಡಾ ಆಗಿತ್ತು.

ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಫೋಟೋವನ್ನು ಹಂಚಿಕೊಂಡಿರುವ ರಿಷಬ್ ಪಂತ್, “ಒಂದು ಹೆಜ್ಜೆ ಮುಂದೆ, ಒಂದು ಹೆಜ್ಜೆ ಬಲಶಾಲಿ, ಒಂದು ಹೆಜ್ಜೆ ಉತ್ತಮ” ಎಂದು ಬರೆದಿದ್ದಾರೆ. ರಿಷಬ್ ಪಂತ್ ಊರುಗೋಲಿನ ಸಹಾಯದಿಂದ ನಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರಿಗೆ ಒಂದು ಕಾಲಿನಲ್ಲಿ ಊತವಿರುವ ಹಾಗೆ ಕಾಣುತ್ತಿದೆ. ಅದರ ಮೇಲೆ ಬ್ಯಾಂಡೇಜ್ ಕೂಡ ಕಟ್ಟಲಾಗಿದೆ.

ಕಳೆದ ವರ್ಷ ಡಿಸೆಂಬರ್ 30 ರಂದು ರಿಷಬ್ ಪಂತ್ ಕಾರು ಅಪಘಾತಕ್ಕೊಳಗಾಗಿದ್ದರು. ದೆಹಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಅಪಘಾತದ ನಂತರ ಅವರ ಕಾರಿಗೆ ಬೆಂಕಿ ಹೊತ್ತಿಕೊಂಡಿದೆ. ಸ್ಥಳೀಯರ ಸಹಾಯದಿಂದ ಪಂತ್ ಅವರನ್ನು ರೂರ್ಕಿಯ ಆಸ್ಪತ್ರೆಗೆ ದಾಖಲಿಸಲಾಯಿತು. ಇದರ ನಂತರ ಅವರನ್ನು ಡೆಹ್ರಾಡೂನ್‌ಗೆ ಸ್ಥಳಾಂತರಿಸಲಾಗಿತ್ತು.

ರಿಷಬ್‌ ಪಂತ್‌ ಅತ್ಯುತ್ತಮ ಬ್ಯಾಟ್ಸ್‌ಮನ್. ಅವರು ಇಲ್ಲಿಯವರೆಗೆ 33 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 2271 ರನ್ ಗಳಿಸಿದ್ದಾರೆ. ಪಂತ್ 30 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 865 ರನ್ ಗಳಿಸಿದ್ದಾರೆ. ಪಂತ್ 66 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 987 ರನ್ ಗಳಿಸಿದ್ದಾರೆ.

Leave A Reply

Your email address will not be published.