Train Engine Rule : ರೈಲು ನಿಂತರೂ ರೈಲಿನ ಎಂಜಿನ್ ಬಂದ್ ಆಗೋದಿಲ್ಲ | ಯಾಕೆ ಗೊತ್ತಾ? ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ

Share the Article

ವಾಹನಗಳಲ್ಲಿ ಪ್ರಯಾಣ ಬೆಳೆಸಿದ್ರೆ ಎಲ್ಲಾದರೂ ಒಂದು ಕಡೆ ವಾಹನ ನಿಲ್ಲಿಸಲೇಬೇಕು. ಬಸ್, ಕಾರು, ಬೈಕ್‌ ಇವೆಲ್ಲವನ್ನೂ ನಿಲ್ಲಿಸುವಾಗ ಅದರ ಎಂಜಿನ್‌ ಆಫ್ ಆಗಿರುತ್ತದೆ. ಆದರೆ ನಿಮಗೊಂದು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ. ಏನು ಗೊತ್ತಾ? ಯಾವುದೇ ನಿಲ್ದಾಣ ಬಂದರೂ ಸಹ ರೈಲಿನ ಇಂಜಿನ್ ಬಂದ್ ಆಗುವುದಿಲ್ಲ. ರೈಲು ನಿಂತರೆ ಎಂಜಿನ್ ಆಫ್ ಆಗುವುದಿಲ್ಲ. ಯಾಕಿರಬಹುದು? ಏನು ಕಾರಣ? ನೋಡೋಣ.

ಬೇರೆ ವಾಹನಗಳಂತೆ ರೈಲಿನ ಎಂಜಿನ್ ಅನ್ನು ಸ್ವಿಚ್ ಆಫ್ ಮಾಡಲು ಸಾಧ್ಯವಿಲ್ಲ. ಡೀಸೆಲ್ ಎಂಜಿನ್ ಅನ್ನು ಸ್ವಲ್ಪ ಸಮಯದವರೆಗೆ ಸ್ಥಗಿತಗೊಳಿಸಲು ಆಗದ ರೀತಿಯಲ್ಲಿ ನಿರ್ಮಿಸಲಾಗಿದೆ. ಡೀಸೆಲ್ ಎಂಜಿನ್ ತಂತ್ರಜ್ಞಾನವನ್ನು ಬಹಳ ಸಂಕೀರ್ಣವೆಂದು ಪರಿಗಣಿಸಲಾಗಿದೆ.

ರೈಲು ನಿಲ್ದಾಣದಲ್ಲಿ ಎಷ್ಟೇ ಹೊತ್ತು ರೈಲು ನಿಂತರೂ ಲೊಕೊ ಪೈಲಟ್ ಇಂಜಿನ್ ಆನ್ ಮಾಡಿರುತ್ತಾನೆ. ರೈಲು ನಿಲ್ಲಿಸಿದಾಗ ರೈಲ್ವೇ ಇಂಜಿನ್ ಬ್ರೇಕ್ ಒತ್ತಡವನ್ನು ಕಳೆದುಕೊಳ್ಳುತ್ತದೆ. ಅದರಿಂದಾಗಿ ರೈಲು ನಿಂತಾಗ ಸೀಟಿಯಂತಹ ಸದ್ದು ಕೇಳಿಸುತ್ತದೆ. ಆ ಸದ್ದು ಬ್ರೇಕ್ ಒತ್ತಡವನ್ನು ಬಿಡುಗಡೆ ಮಾಡಲಾಗಿದೆ ಎಂದು ಸೂಚಿಸುತ್ತದೆ. ಆಗ ಈ ಒತ್ತಡ ನಿರ್ಮಾಣ ಆಗಲು ಸ್ವಲ್ಪ ಸಮಯವಾಗುತ್ತದೆ.

ಒಂದು ನಿಲ್ದಾಣದಲ್ಲಿ ಒತ್ತಡ ನಿರ್ಮಾಣ ಆಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಅಂದ್ರೆ, ಪ್ರತಿ ನಿಲ್ದಾಣದಲ್ಲಿ ರೈಲಿನ ಇಂಜಿನ್ ನಿಲ್ಲಿಸಿದರೆ, ಬ್ರೇಕ್ ಒತ್ತಡವನ್ನು ನಿರ್ಮಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ರೈಲಿನ ಇಂಜಿನ್ ನಿಲ್ಲಿಸಿದ ನಂತರ ಅದನ್ನು ಮತ್ತೆ ಪ್ರಾರಂಭಿಸುವುದು ತುಂಬಾನೇ ಕಷ್ಟ. ರೈಲಿನ ಎಂಜಿನ್ ಅನ್ನು ನಿಲ್ಲಿಸಲು ಮತ್ತು ಅದನ್ನು ಮತ್ತೆ ಪ್ರಾರಂಭಿಸಲು ಸುಮಾರು 20 ನಿಮಿಷಗಳವರೆಗೆ ಸಮಯ ಹಿಡಿಯುತ್ತದೆ.

ಇನ್ನೊಂದು ತಿಳಿದುಕೊಳ್ಳಬೇಕಾದ ವಿಚಾರವೆಂದರೆ, ರೈಲ್ವೇ ಎಂಜಿನ್ ಅನ್ನು ನಿಲ್ಲಿಸುವುದರಿಂದ, ಇಂಜಿನ್ ವ್ಯವಸ್ಥೆಯೂ ವಿಫಲಗೊಳ್ಳುವ ಅಪಾಯವಿದೆ. ಯಾಕೆ ಹೀಗೆ? ಅಂದ್ರೆ ಡೀಸೆಲ್ ಎಂಜಿನ್‌ನಲ್ಲಿ ಬ್ಯಾಟರಿಯನ್ನು ಅಳವಡಿಸಲಾಗಿದೆ. ಅದು ರೈಲಿನ ಎಂಜಿನ್ ಅನ್ನು ಪ್ರಾರಂಭಿಸಿದಾಗ ಮಾತ್ರ ಚಾರ್ಜ್ ಆಗುತ್ತದೆ. ಹಾಗಾಗಿ ಪ್ರತಿ ನಿಲ್ದಾಣದಲ್ಲಿ ರೈಲ್ವೆಯ ಇಂಜಿನ್ ಕಾರ್ಯನಿರ್ವಹಿಸುತ್ತಿರುತ್ತದೆ. ಈ ಕಾರಣದಿಂದ ರೈಲಿನ ಇಂಜಿನ್ ಬಂದ್ ಆಗುವುದಿಲ್ಲ.

Leave A Reply