ನೀವೂ ಕೂಡ ಊದುಬತ್ತಿ ಹಚ್ಚುತ್ತೀರಾ? | ಹಾಗಿದ್ರೆ ನಿಮಗೂ ಇದೆ ಈ ಅಪಾಯ!
ಯಾವುದೇ ದೇವರ ಪೂಜೆಗಳಲ್ಲಿ ಊದುಬತ್ತಿಯನ್ನು ಹಚ್ಚುತ್ತಾರೆ. ಇದು ಪಾಸಿಟಿವ್ ವೈಬ್ ನೀಡುತ್ತದೆ ಎಂಬ ನಂಬಿಕೆ. ಅಲ್ಲದೆ ದೈವಿಕ ಭಾವವನ್ನು ಉಂಟುಮಾಡುತ್ತದೆ. ಹೀಗಾಗಿ ಹೆಚ್ಚಿನ ಕಾರ್ಯಗಳಲ್ಲಿ ಊದುಬತ್ತಿಯನ್ನು ಬಳಸುತ್ತಾರೆ. ಆದರೆ, ಈ ಊದುಬತ್ತಿ ಹೊಗೆ ಆರೋಗ್ಯಕ್ಕೆ ಎಷ್ಟು ಸೂಕ್ತ ಎಂಬುದು ನಿಮಗೆ ತಿಳಿದಿದೆಯೇ?
ಹೌದು. ಈ ಕುರಿತು ಸಂಶೋಧನೆಯೊಂದು ನಡೆದಿದ್ದು, ಊದುಬತ್ತಿ ಎಷ್ಟು ಅಪಾಯಕಾರಿ ಎಂಬುದನ್ನು ಬಹಿರಂಗ ಪಡಿಸಿದೆ. ಈ ಹೊಗೆಯಲ್ಲಿ ಅಂಶಗಳೊಂದಿಗೆ ಹೃದಯಕ್ಕೆ ಹಾನಿಯಾಗುವ ವಸ್ತುಗಳಿವೆ ಎಂಬುದನ್ನು ಈ ಅಧ್ಯಯನ ಖಚಿತಪಡಿಸಿದೆ. ಹಾಗಾಗಿ ಊದು ಬತ್ತಿ ಹಚ್ಚುವ ಮೊದಲು ಎಚ್ಚರ ವಹಿಸಿ. ಸಾಧ್ಯವಾದಷ್ಟು ಅದರ ಹೊಗೆಯಿಂದ ದೂರವಿರಲು ಪ್ರಯತ್ನಿಸಿ. ವಿಶೇಷ ದಿನಗಳಂದು ಮಾತ್ರ ಅಗರಬತ್ತಿ ಹಚ್ಚುವ ಪರಿಪಾಠ ಬೆಳೆಸಿಕೊಳ್ಳಿ.
ಊದುಬತ್ತಿಯಿಂದ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಇದು ಶ್ವಾಸಕೋಶದ ಒಳ ಪ್ರವೇಶಿಸಿ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದ ಅಸ್ತಮಾದಂತ ಸಮಸ್ಯೆಗಳೂ ಉಲ್ಬಣಗೊಳ್ಳಬಹುದು. ಇದರ ನಿರಂತರ ಬಳಕೆಯಿಂದ ಕಣ್ಣುಗಳ ಅಲರ್ಜಿಯೂ ಕಾಣಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ ಹೈಡ್ರೋಕಾರ್ಬನ್ ಅಸ್ತಮಾ, ಕ್ಯಾನ್ಸರ್ ಮತ್ತು ಕೆಮ್ಮು, ತಲೆನೋವಿನಂತ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ ಊದುಬತ್ತಿ ಹೊಗೆಯಿಂದ ದೂರ ಉಳಿಯೋದು ಸೂಕ್ತ.