Karnataka Excise Department Recruitment 2023 | ಅಬಕಾರಿ ಇಲಾಖೆಯಲ್ಲಿ ಉದ್ಯೋಗ ; ಒಟ್ಟು ಹುದ್ದೆ-1100

ಉದ್ಯೋಗಕ್ಕಾಗಿ ಹುಡುಕಾಡುತ್ತಿರುವವರಿಗೆ ಕರ್ನಾಟಕ ಅಬಕಾರಿ ಇಲಾಖೆಯಲ್ಲಿ ಉದ್ಯೋಗವಕಾಶವಿದ್ದು, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಈ ಕುರಿತು ಅಬಕಾರಿ ಇಲಾಖೆ ಸಚಿವ ಕೆ.ಗೋಪಾಲಯ್ಯ ಮಾಹಿತಿ ನೀಡಿದ್ದು, “ರಾಜ್ಯ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದುಕೊಂಡುವ ಅಬಕಾರಿ ಇಲಾಖೆಯ ಬಲವರ್ಧನೆ ಸರಕಾರ ಪ್ರಾಧ್ಯಾತೆ ನೀಡಿದೆ. ಈ ವರ್ಷ 29000 ಕೋಟಿ ರೂ ಆದಾಯ ಗುರಿ ನೀಡಿದ್ದು, ಈವರೆಗೆ 19897 ಕೋಟಿ ರೂ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 17225 ಕೋಟಿ ರೂ. ಸಂಗ್ರಹವಾಗಿತ್ತು” ಎಂದು ತಿಳಿಸಿದ್ದಾರೆ.

ಇಲಾಖೆ ಹೆಸರು : ಕರ್ನಾಟಕ ಅಬಕಾರಿ ಇಲಾಖೆ (Karnataka Excise Department)
ಪೋಸ್ಟ್‌ಗಳ ಸಂಖ್ಯೆ : 1100 ಹುದ್ದೆಗಳು
ಕಾನ್ಸ್ಟೇಬಲ್ : 1000 ಹುದ್ದೆಗಳು
ಸಬ್ ಇನ್ಸ್‌ಪೆಕ್ಟರ್ : 100 ಹುದ್ದೆಗಳು
ಹುದ್ದೆಯ ಹೆಸರು : ಕಾನ್ಸ್ಟೇಬಲ್, ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು
ಅರ್ಜಿ ಸಲ್ಲಿಸುವ ವಿಧಾನ : ಆನ್‌ಲೈನ್

ಶೈಕ್ಷಣಿಕ ಅರ್ಹತೆ ವಿವರ :
ಕರ್ನಾಟಕ ಅಬಕಾರಿ ಇಲಾಖೆಯ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, 12ನೇ ತರಗತಿ ಹಾಗೂ ಪದವಿಯಲ್ಲಿ ಉತ್ತೀರ್ಣರಾಗಿರಬೇಕು.

ಸಂಬಳ ವಿವರ :
ಅಬಕಾರಿ ಪೇದೆ ಹುದ್ದೆಗೆ : ರೂ. 21400 – 42000/-
ಅಬಕಾರಿ ನಿರೀಕ್ಷಕರು ಹುದ್ದೆಗೆ : ರೂ. 37900 – 70850/-

ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : ಶೀಘ್ರದಲ್ಲೇ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಶೀಘ್ರದಲ್ಲೇ

Leave A Reply

Your email address will not be published.