Vivo X90 Pro : ವಿವೋ X90 ಪ್ರೊ’ ಫೋನ್ ಮಾರುಕಟ್ಟೆಯಲ್ಲಿ | ಖರೀದಿಗೆ ಮುಗಿಬಿದ್ದ ಜನ!
ಜಾಗತಿಕ ಮಾರುಕಟ್ಟೆಯಲ್ಲಿ ಸ್ಮಾರ್ಟ್ಫೋನ್ಗಳಿಗೆ ಇದ್ದಷ್ಟು ಬೇಡಿಕೆ ಬೇರೆ ಯಾವುದೇ ಸಾಧನಗಳಿಗಿಲ್ಲ. ಈ ಹೊಸವರ್ಷದಲ್ಲಿ ಈಗಾಗಲೇ ಸಾಕಷ್ಟು ಹೊಸ ಹೊಸ ಸ್ಮಾರ್ಟ್‌ಫೋನ್‌ಗಳನ್ನು ಟೆಕ್ ಕಂಪೆನಿಗಳು ಬಿಡುಗಡೆ ಮಾಡಿವೆ. ಒಂದೊಂದು ಬ್ರಾಂಡ್’ನ ಹೊಸ ಹೊಸ ಸ್ಟೈಲಿಶ್ ಮಾದರಿಯ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತಲಿದ್ದು, ಇದೀಗ ಈ ಪಟ್ಟಿಗೆ ಮತ್ತೊಂದು ಸ್ಮಾರ್ಟ್’ಫೋನ್ ಸೇರ್ಪಡೆ ಆಗಿದೆ. ಜನಪ್ರಿಯ ಮೊಬೈಲ್ ಕಂಪನಿಯಾದ ವಿವೋ ಕಂಪೆನಿಯು ವಿವೋ X90 ಸ್ಮಾರ್ಟ್‌ಫೋನ್ ಸರಣಿಯನ್ನು ಅನಾವರಣ ಮಾಡಿದೆ. ಈ ಸರಣಿಯು ವಿವೋ X90, ವಿವೋ X90 ಪ್ರೊ, ವಿವೋ X90 ಪ್ರೊ ಪ್ಲಸ್ ಮಾಡೆಲ್‌ಗಳನ್ನು ಒಳಗೊಂಡಿದೆ. ಬಜೆಟ್ ಬೆಲೆಯಲ್ಲಿ ಉತ್ತಮ ಗುಣಮಟ್ಟವುಳ್ಳ ಈ ಹೊಸ ಸ್ಮಾರ್ಟ್’ಫೋನ್’ಗಳ ಬೆಲೆ, ಲಭ್ಯತೆ ಫೀಚರ್’ಗಳ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಪ್ರತಿಷ್ಠಿತ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ವಿವೋ, ಈಗಾಗಲೇ ವಿವೋ X ಸರಣಿಯಲ್ಲಿ ಹಲವು ಸ್ಮಾರ್ಟ್‌ಫೋನ್ ಮಾಡೆಲ್‌ಗಳನ್ನು ಬಿಡುಗಡೆ ಮಾಡಿದೆ. ಅದೇ ಸರಣಿಯಲ್ಲಿ ನೂತನವಾಗಿ ವಿವೋ X90 ಸ್ಮಾರ್ಟ್‌ಫೋನ್ ಸರಣಿಯನ್ನು ಗ್ಲೋಬಲ್ ಮಾರುಕಟ್ಟೆಗೆ ಪರಿಚಯಿಸಿದೆ. ಈ ಹೊಸ ಸ್ಮಾರ್ಟ್’ಫೋನ್ ಆಕರ್ಷಕ ಫಿಚರನ್ನೊಳಗೊಂಡಿದ್ದು, ಗ್ರಾಹಕರ ಕಣ್ಮನ ಸೆಳೆಯಲು ತಯಾರಾಗಿ ನಿಂತಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದೆ. ಹಾಗೆಯೇ ಈ ಫೋನ್’ನ ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಅಲ್ಲದೆ 120W ಸಾಮರ್ಥ್ಯದ ಫ್ಲಾಶ್ ಚಾರ್ಜ್ ಸೌಲಭ್ಯವನ್ನು ಪಡೆದಿದೆ.
ವಿವೋ X90 ಪ್ರೊ ಫೋನ್ 6.78 ಇಂಚಿನ ಅಲ್ಟ್ರಾ ವಿಷನ್ AMOLED ಡಿಸ್‌ಪ್ಲೇಯನ್ನು ಪಡೆದಿದ್ದು, ಇದು 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಸ್ಕ್ರೀನ್ ಕರ್ವ್ ಮಾದರಿಯ ರಚನೆಯನ್ನು ಒಳಗೊಂಡಿದ್ದು, ಹೋಲ್-ಪಂಚ್ ಕಟೌಟ್ ವಿನ್ಯಾಸದಲ್ಲಿದೆ. ವಿವೋ X90 ಪ್ರೊ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 9200 ಚಿಪ್‌ಸೆಟ್ ಪ್ರೊಸೆಸರ್ ಪವರ್‌ನಲ್ಲಿ ಕಾರ್ಯನಿರ್ವಹಣೆ ಮಾಡಲಿದೆ. ಹಾಗೆಯೇ ಇದು ಆಂಡ್ರಾಯ್ಡ್ 13 ಓಎಸ್ ಸಪೋರ್ಟ್ ಅನ್ನು ಪಡೆದಿದೆ. ಅಲ್ಲದೇ 12GB RAM + 256GB ಸ್ಟೋರೇಜ್ ವೇರಿಯಂಟ್ ಆಯ್ಕೆಯನ್ನು ಪಡೆದಿದೆ.
ಇನ್ನು ವಿವೋ X90 ಪ್ರೊ ಫೋನ್ ನ ಕ್ಯಾಮರ ಫೀಚರ್ ನೋಡುವುದಾದರೆ, ಇದು ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 12 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದ್ದು, ತೃತೀಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ.
ವಿವೋ X90 ಪ್ರೊ ಫೋನ್ 4870mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದ್ದು, 120W ಸಾಮರ್ಥ್ಯದ ಫ್ಲಾಶ್ ಚಾರ್ಜ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ 50W ಸಾಮರ್ಥ್ಯದಲ್ಲಿ ವಯರ್‌ಲೆಸ್ ಚಾರ್ಜಿಂಗ್ ಸಪೋರ್ಟ್ ಆಯ್ಕೆ ಪಡೆದಿಕೊಂಡಿದೆ. IP64 ಸೌಲಭ್ಯ ಸಹ ಈ ಫೋನ್ ಪಡೆದಿದೆ.
ವಿವೋ ಸಂಸ್ಥೆಯು ನೂತನ ವಿವೋ X90 ಫೋನ್ ಸರಣಿಯನ್ನು ಭಾರತ, ಹಾಂಗ್ ಕಾಂಗ್, ತೈವಾನ್, ಯುನೈಟೆಡ್ ಕಿಂಗ್‌ಡಮ್, ಜರ್ಮನಿ, ಫ್ರಾನ್ಸ್, ಇಟಲಿ, ಸ್ಪೇನ್, ಪೋಲೆಂಡ್, ಆಸ್ಟ್ರಿಯಾ, ರೊಮೇನಿಯಾ, ಕ್ರೊಯೇಷಿಯಾ, ಗ್ರೀಸ್, ಥೈಲ್ಯಾಂಡ್, ಮಲೇಷ್ಯಾ ಮತ್ತು ಕೆಲವು ಇತರ ಮಾರುಕಟ್ಟೆಗಳಲ್ಲಿ ಲಾಂಚ್ ಮಾಡಿದೆ. ಅಂದಹಾಗೆ ದೇಶಿಯ ಮಾರುಕಟ್ಟೆಯಲ್ಲಿ ವಿವೋ X90 ಪ್ರೊ ಫೋನ್ ಫೋನಿನ ಬೆಲೆ ಎಷ್ಟಿರಲಿದೆ ಎನ್ನುವ ಬಗ್ಗೆ ಇನ್ನು ಸ್ಪಷ್ಟವಾಗಿ ತಿಳಿದಿಲ್ಲವಾದರೂ, ಸುಮಾರು 99,162ರೂ. ಗಳ ಆಸುಪಾಸಿನಲ್ಲಿ ಇರಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ.