Vivo Smartphone: ವಿವೋ ವೈ100 ಸ್ಮಾರ್ಟ್​​ಫೋನ್ ಫೀಚರ್ಸ್​ ಲೀಕ್‌ ! ಹೇಗಿದೆ ಗೊತ್ತಾ?

ಭಾರತೀಯ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಈಗೀಗ ಮೊಬೈಲ್​ಗಳ ಬಿಡುಗಡೆ ಸಂಖ್ಯೆ ಏರಿಕೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಸ್ಮಾರ್ಟ್​ಫೋನ್​ಗಳಿಗೆ ಇದ್ದಷ್ಟು ಬೇಡಿಕೆ ಬೇರೆ ಯಾವುದೇ ಸಾಧನಗಳಿಗಿಲ್ಲ. ಅದೇ ರೀತಿ ಟೆಕ್ ಕಂಪೆನಿಗಳು ಸಹ ಹೊಸ ಹೊಸ ಸ್ಮಾರ್ಟ್​​ಫೋನ್​ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುತ್ತದೆ. ಹೌದು ವಿವೋ ಕಂಪೆನಿಯಿಂದ ಇದೀಗ ಹೊಸ ಸ್ಮಾರ್ಟ್​​ಫೋನ್​ ಭಾರತದ ಮಾರುಕಟ್ಟೆಗೆ ಲಗ್ಗೆಯಿಡುತ್ತಿದ್ದು ಇದನ್ನು ವಿವೋ ವೈ100 ಎಂದು ಹೆಸರಿಸಲಾಗಿದೆ. ಈ ಸ್ಮಾರ್ಟ್​​ಫೋನ್​ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿದ್ದು, ಬಿಡುಗಡೆಗೆ ಮೊದಲೇ ಇದರ ಕೆಲವೊಂದು ಫೀಚರ್ಸ್​ಗಳು ಲೀಕ್ ಆಗಿದೆ.

ಹೌದು ವಿವೋ ವೈ100 ಸ್ಮಾರ್ಟ್​​ಫೋನ್​ನ ವಿಶೇಷತೆ ತಿಳಿಯೋಣ ಬನ್ನಿ :

  • ವಿವೋ ವೈ100 ಇದು 6 ಇಂಚಿನ ಫುಲ್​​ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಅನ್ನು ಒಳಗೊಂಡಿರಲಿದೆ. ಹಾಗೆಯೇ ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಸಾಂದ್ರತೆಯು 440 ಪಿಕ್ಸೆಲ್‌ ಆಗಿರಲಿದೆ ಎಂದು ವರದಿಯಾಗಿದೆ. ವಿವೋ ವೈ100 ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಮುಖ್ಯ ಕ್ಯಾಮೆರಾವನ್ನು ಒಳಗೊಂಡಿರಲಿದೆ. ಹಾಗೆಯೇ 8 ಮೆಗಾ ಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಮತ್ತು 2 ಮೆಗಾ ಪಿಕ್ಸೆಲ್ ಮೂರನೇ ಕ್ಯಾಮೆರಾವನ್ನು ಒಳಗೊಂಡಿರಲಿದೆ.
  • ವಿವೋ ಕಂಪೆನಿಯಿಂದ ಮುಂಬರು ವಿವೋ ವೈ100 ಸ್ಮಾರ್ಟ್​​ಫೋನ್​ 6ಜಿಬಿ ರ್‍ಯಾಮ್ ಮತ್ತು 128ಜಿಬಿ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಹೊಂದಿರಲಿದ್ದು, ಈ ವೇರಿಯಂಟ್‌ನ ಬೆಲೆಯು 27,000 ರೂಪಾಯಿಗಳಷ್ಟು ಬೆಲೆಯನ್ನು ನಿಗದಿ ಮಾಡಲಾಗಿದೆ ಎಂದು ಎನ್ನಲಾಗಿದೆ. ಇನ್ನು ಈ ಫೋನ್ ಮೀಡಿಯಾ ಟೆಕ್‌ ಡೈಮೆನ್ಸಿಟಿ 900 ಎಸ್​ಓಸಿ ಪ್ರೊಸೆಸರ್‌ ಹೊಂದಿರುವುದು ಬಹುತೇಕ ಖಚಿತ ಎನ್ನಲಾಗಿದೆ.
  • ವಿವೋ ವೈ100 ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 900 ಎಸ್​​ಓಸಿ ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದೆ ಎಂದು ಗ್ಯಾರಂಟಿಯಾಗಿದೆ. ಈ ಚಿಪ್‌ಸೆಟ್ 2.4GHz ಗರಿಷ್ಠ ವೇಗ ಪಡೆದಿರುವ ಸಾಧ್ಯತೆ ಇವೆ ಎನ್ನಲಾಗಿದೆ. ಇದರೊಂದಿಗೆ ಆಂಡ್ರಾಯ್ಡ್‌ 13 ಓಎಸ್ ಜೊತೆಗೆ ಫನ್​ಟಚ್​ ಓಎಸ್​ 13 ಸಪೋರ್ಟ್‌ ಸಹ ಇರಲಿದೆ ಎಂದು ವರದಿಯಾಗಿದೆ. ಇನ್ನು ಇದಕ್ಕೆ ಪೂರಕವಾಗಿ 8 ಜಿಬಿ ರ್‍ಯಾಮ್ ಸ್ಟೋರೇಜ್ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಸದ್ಯ ಈ ಸ್ಮಾರ್ಟ್​​ಫೋನ್​ನ ಬಿಡುಗಡೆಗೆ ಜನರು ಕಾತುರದಿಂದ ಇದ್ದು ಈ ಫೋನ್ ಹೆಚ್ಚಿನ ಮಾರಾಟ ಆಗುವ ಸಾಧ್ಯತೆ ಇದೆ.

Leave A Reply

Your email address will not be published.