Spices Can Help Digestion: ದಿನನಿತ್ಯದ ಅಡುಗೆಯಲ್ಲಿ ಈ ಮಸಾಲೆ ಪದಾರ್ಥ ಸೇರಿಸಿ ಚಮತ್ಕಾರ ಗಮನಿಸಿ!

ಭಾರತದಲ್ಲಿ ಬೆಳೆಯುವ ಮಸಾಲೆ ಪದಾರ್ಥಗಳಿಗೆ ವಿಶ್ವದೆಲ್ಲೆಡೆ ಹೆಚ್ಚಿನ ಬೇಡಿಕೆಯಿದೆ. ನಮ್ಮಲ್ಲಿನ ಹಲವಾರು ಆಹಾರ ಪದಾರ್ಥಗಳನ್ನು ಹಲವಾರು ದೇಶಗಳು ಆಮದು ಮಾಡಿಕೊಂಡು ತಮ್ಮ ದಿನನಿತ್ಯ ಅಡುಗೆಗಳಲ್ಲಿ ಬಳಸಿಕೊಂಡು ಸವಿಯುತ್ತಾರೆ ಇದು ನಮಗೆ ತಿಳಿದಿರುವ ವಿಚಾರ.

ಆದರೆ ಅತಿಯಾದರೆ ಯಾವುದು ಯೋಗ್ಯವಲ್ಲ ಹೌದು ನಾವು ಅಡುಗೆ ತಯಾರು ಮಾಡುವಾಗ ಬಳಸುವ ಮಸಾಲೆ ಪದಾರ್ಥಗಳು ಒಂದು ಮಿತಿಯಲ್ಲಿದ್ದರೆ ಮಾತ್ರ ಅಡುಗೆ ಸ್ವಾದಭರಿತವಾಗಿ ಮತ್ತು ನಮ್ಮ ಆರೋಗ್ಯ ಅಚ್ಚುಕಟ್ಟಾಗಿ ಉಳಿಯುತ್ತದೆ ಇಲ್ಲವಾದರೆ ಅತಿ ಹೆಚ್ಚು ಮಸಾಲೆ ಪದಾರ್ಥಗಳನ್ನು ಬಳಕೆಮಾಡಿ ಅಡುಗೆ ತಯಾರು ಮಾಡಿ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಹೊಟ್ಟೆಯ ಭಾಗದಲ್ಲಿ ಹುಣ್ಣುಗಳು ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆ ಉಂಟಾಗುತ್ತದೆ. ಕೆಲವರಿಗೆ ಹೊಟ್ಟೆ ಕೆಟ್ಟು ಹೋಗಿ ಕರುಳಿನ ಭಾಗಕ್ಕೂ ಕೂಡ ಅತಿ ಹೆಚ್ಚಿನ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ನಾಲಿಗೆ ಮೇಲಿನ ಪದರಕ್ಕೆ ಹಾನಿಯಾಗುವ ಸಾಧ್ಯತೆ ಕೂಡ ಇದೆ.

ಸದ್ಯ ಈ ಎಲ್ಲಾ ಸಮಸ್ಯೆಗಳ ಹೊರತಾಗಿ ಈ ಕೆಳಗಿನ ಮಸಾಲೆಗಳನ್ನು ಬಳಸಿದಾಗ ಅಡುಗೆ ರುಚಿಕರವಾಗಿಸುವುದಲ್ಲದೆ, ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತದೆ. ಹೌದು ಕೆಲವು ಮಸಾಲೆಗಳನ್ನು ಆಹಾರದಲ್ಲಿ ಬಳಸುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಬನ್ನಿ ಅಂತಹ ಮಸಾಲೆ ಪದಾರ್ಥ ಯಾವುದೆಂದು ತಿಳಿಯೋಣ.

  • ಸಾಸಿವೆ : ಸಾಸಿವೆ ಕಾಳುಗಳಲ್ಲಿ ನಾರಿನ ಅಂಶ ಅಧಿಕವಾಗಿದ್ದು ನಿಮ್ಮ ಕರುಳಿನ ಚಲನೆಯನ್ನು ಉತ್ತಮವಾಗಿಸಿ ನಿಮ್ಮ ದೇಹಕ್ಕೆ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತವೆ. ಅತಿ ಮುಖ್ಯವಾಗಿ ವಯಸ್ಸಾದವರಲ್ಲಿ ಕಾಡುವ ಮಲಬದ್ಧತೆ ಸಮಸ್ಯೆಗೆ ಸಾಸಿವೆಯಲ್ಲಿ ಪರಿಹಾರ ಸಿಗುತ್ತದೆ. ನಮ್ಮ ಪ್ರತಿ ದಿನದ ಆಹಾರ ಪದ್ಧತಿಯಲ್ಲಿ ದಿನ ನಿತ್ಯ ಸಾಸಿವೆ ಕಾಳುಗಳ ಬಳಕೆ ಮಾಡುತ್ತಾ ಬಂದರೆ, ಇದರಲ್ಲಿರುವ ವಿಟಮಿನ್ ‘ ಎ ‘, ವಿಟಮಿನ್ ‘ ಕೆ ‘ ಮತ್ತು ವಿಟಮಿನ್ ‘ ಸಿ ‘ ಅಂಶ ನಮ್ಮಲ್ಲಿ ವಯಸ್ಸಾಗುವ ಪ್ರಕ್ರಿಯೆಯನ್ನು ಮುಂದಕ್ಕೆ ಹಾಕುತ್ತದೆ.
  • ಸೋಂಪು : ಸೋಂಪುನ್ನು ಅನೇಕ ರೀತಿಯ ಅಡುಗೆಯಲ್ಲಿ ಬಳಸಲಾಗುತ್ತದೆ. ಈ ಮಸಾಲೆ ಅಡುಗೆಯ ರುಚಿಯನ್ನು ಹೆಚ್ಚಿಸುವುದಲ್ಲದೆ, ಜೀರ್ಣ ಕ್ರಿಯೆಯನ್ನು ಕೂಡಾ ಸುಧಾರಿಸುತ್ತದೆ.
  • ಜೀರಿಗೆ : ಜೀರಿಗೆ ಬಳಕೆಯಿಂದ ಆಹಾರದ ಘಮ ಹೆಚ್ಚುವುದು ಮಾತ್ರವಲ್ಲ, ರುಚಿಯೂ ಹೆಚ್ಚುತ್ತದೆ. ಇದರೊಂದಿಗೆ ಜೀರಿಗೆಯು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಆದ್ದರಿಂದ ಯಾವುದೇ ರೀತಿಯ ಅಡುಗೆ ಮಾಡಿದರೂ ಅದರಲ್ಲಿ ಜೀರಿಗೆ ಸೇರಿಸುವುದನ್ನು ಮರೆಯಬೇಡಿ.
  • ಓಮ ಕಾಳು : ಓಮ ಕಾಳು ಹೊಟ್ಟೆಯ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ತೂಕವನ್ನು ಕಡಿಮೆ ಮಾಡಲು ಮತ್ತು ಶೀತದಿಂದ ಪರಿಹಾರಕ್ಕಾಗಿ ಓಮ ಕಾಳನ್ನು ಬಳಸಲಾಗುತ್ತದೆ. ಯಾವುದೇ ಮಸಾಲೆಯುಕ್ತ ಆಹಾರವನ್ನು ತಯಾರಿಸುತ್ತಿದ್ದರೆ ಅದರಲ್ಲಿ ಒಮಕಾಳನ್ನು ಸೇರಿಸಿ. ಇದು ಎಲ್ಲಾ ರೀತಿಯ ಮಸಾಲೆಗಳು ಮತ್ತು ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.
  • ಇಂಗು : ಹೊಟ್ಟೆ ನೋವು, ಗ್ಯಾಸ್, ಅಜೀರ್ಣದಂತಹ ಸಮಸ್ಯೆಗಳನ್ನು ತೊಡೆದು ಹಾಕಲು ಇಂಗು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ಪ್ರತಿ ಅಡುಗೆಯಲ್ಲಿ ಇಂಗನ್ನು ಬಳಸುವಂತೆ ಸೂಚಿಸಲಾಗುತ್ತದೆ.
  • ಅರಿಸಿನ: ಇದು ಉಪಶಮನಕಾರಿ ಆ್ಯಂಟಿಆಕ್ಸಿಡೆಂಟ್‌ಗಳನ್ನು ಹೊಂದಿದ್ದು, ಹೃದ್ರೋಗ, ಅಲ್ಝಮೇರ್‌ ಹಾಗೂ ಕ್ಯಾನ್ಸರ್‌ಗೆ ರಾಮಬಾಣ ಆಗಿದೆ. ಜೀರಿಗೆ ಹಾಗೂ ಸಾಸಿವೆಯಲ್ಲಿರುವ ಕರ್ಕ್ಯುಮಿನ್‌ ಅರಿಸಿನದಲ್ಲಿದ್ದು, ಮೂಳೆ ಮುರಿತ, ಜಜ್ಜುಗಾಯ, ಊತದಲ್ಲಿ ಉರಿಯೂತ ಉಂಟು ಮಾಡುವ ಕಿಣ್ವವನ್ನು ನಿವಾರಿಸುವ ಗುಣ ಇದರಲ್ಲಿದೆ.

ಹೌದು ಈ ಮೇಲಿನ ಮೊದಲಾದವುಗಳನ್ನು ಆಹಾರದಲ್ಲಿ ಬಳಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಬಹುದು ಮತ್ತು ಅಡುಗೆಯನ್ನು ಸಹ ರುಚಿಕರಗೊಳಿಸಿ ಸ್ವಾದಿಸಬಹುದಾಗಿದೆ.

Leave A Reply

Your email address will not be published.