ಬಾಂಗ್ಲಾ -ಪಾಕಿಸ್ತಾನದ ಈ ಜೋಡಿ ತಮ್ಮ ಮಗುವಿಗೆ ಇಟ್ಟ ಹೆಸರು ʼಇಂಡಿಯಾʼ ! ಅಭಿಮಾನದಿಂದ ಅಲ್ಲ, ಕಾರಣ ಬೇರೆನೇ ಇದೆ!

ಬಾಂಗ್ಲಾ ಮತ್ತು ಪಾಕಿಸ್ತಾನದ ಜೋಡಿಯೊಂದು ತಮ್ಮ ಮಗುವಿಗೆ ʼಇಂಡಿಯಾʼ ಎಂದು ಹೆಸರಿಟ್ಟಿದ್ದಾರೆ. ಏನಿದು ವಿಶೇಷವಾಗಿದೆ ಹೆಸರು, ದೇಶದ ಹೆಸರು ಏಕೆ ಇಟ್ಟಿರಬಹುದು ಎಂದು ಯೋಚಿಸುತ್ತಿದ್ದೀರಾ? ಇದು ಅಭಿಮಾನದಿಂದ ಇಟ್ಟಿರುವ ಹೆಸರಲ್ಲ. ಹಾಗಾದ್ರೆ ಕಾರಣ ಏನಿರಬಹುದು ನೋಡೋಣ.

ಸಣ್ಣ ಮಕ್ಕಳು ಅಪ್ಪ ಅಮ್ಮನ ಮಧ್ಯೆ ಮಲಗೋದು ಸಾಮಾನ್ಯ. ಹಾಗೇ ಈ ಜೋಡಿಯ ಮಗು ಕೂಡ ಅವರ ಮಧ್ಯೆ ಮಲಗುತ್ತಿತ್ತು. ಈ ಕಾರಣಕ್ಕೆ ಮಗುವಿಗೆ ‘ಇಂಡಿಯಾ’ ಎಂದು ಹೆಸರಿಟ್ಟಿದ್ದಾರಂತೆ ಈ ದಂಪತಿ. ಭೌಗೋಳಿಕವಾಗಿ ಬಾಂಗ್ಲಾದೇಶ ಹಾಗೂ ಪಾಕಿಸ್ಥಾನದ ಮಧ್ಯೆ ಭಾರತ ಬರುತ್ತದೆ. ಈ ಜೋಡಿ ಬಾಂಗ್ಲಾ ಹಾಗೂ ಪಾಕಿಸ್ತಾನದವರು ಹಾಗಾಗಿ ತಮಗೆ ಹುಟ್ಟುವ ಮಗುವಿಗೆ ಇಂಡಿಯಾ ಎಂದು ಹೆಸರಿಟ್ಟಿದ್ದೇವೆ ಎಂದು ದಂಪತಿ ಹೇಳಿಕೊಂಡಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಹಂಚಿಕೊಂಡಿದ್ದು, ವಿಭಿನ್ನ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದಂಪತಿ ತಮ್ಮ ಮಧ್ಯೆ ಮಲಗುವ ಮಗನ ಫೋಟೋವನ್ನು ಪೋಸ್ಟ್ ಮಾಡಿದ್ದು, ಜೊತೆಗೆ ಕೆಲವು ಸಾಲುಗಳನ್ನು ಬರೆದಿದ್ದಾರೆ. ನಾನು ಹಾಗೂ ನನ್ನ ಪತ್ನಿ ಬೇಗಂ ನಮ್ಮ ಮೊದಲ ಮಗು ಇಬ್ರಾಹಿಂ ಆತ ಚಿಕ್ಕ ಮಗುವಾಗಿದ್ದಾಗ ಆತನನ್ನು ನಮ್ಮ ಜೊತೆಯಲ್ಲೇ ಮಲಗಿಸಿಕೊಳ್ಳುವ ಮೂಲಕ ಸಣ್ಣ ತಪ್ಪು ಮಾಡಿದೆವು. ಹೊಸದಾಗಿ ಪೋಷಕರಾದ ಎಲ್ಲರಿಗೂ ಮಗುವಿನ ಬಗ್ಗೆ ಅತೀವ ಕಾಳಜಿ ಇರುತ್ತದೆ. ಹಾಗಾಗಿ ನಾವು ಆತನನ್ನು ನಮ್ಮ ಜೊತೆಯೇ ಮಲಗಿಸಿಕೊಳ್ಳುತ್ತಿದ್ದೆವು. ಈಗ ನಾವು ಅವನಿಗೆ ಮಲಗಲು ಪ್ರತ್ಯೇಕ ವ್ಯವಸ್ಥೆ ಮಾಡಿದ್ದರೂ ಕೂಡ ಆತ ನಮ್ಮ ಮಧ್ಯೆಯೇ ಮಲಗುತ್ತಾನೆ ಎಂದು ಹೇಳಿದ್ದಾರೆ. ನಾನು ಪಾಕಿಸ್ತಾನಿ ಹಾಗೂ ನನ್ನ ಪತ್ನಿ ಬಾಂಗ್ಲಾದೇಶದವಳು ಆಗಿರೋದ್ರಿಂದ ನಾವು ನನ್ನ ಮಗ ಇಬ್ರಾಹಿಂಗೆ ಹೊಸ ಹೆಸರನ್ನು ಇಟ್ಟಿದ್ದೇವೆ. ಇಂಡಿಯಾ ಈಗ ನನ್ನ ಜೀವನದಲ್ಲಿ ಸಾಕಷ್ಟು ಹುಚ್ಚು ಸಮಸ್ಯೆಗೆ ಕಾರಣವಾಗಿದೆ ಎಂದು ಆತ ಮಗನ ಬಗ್ಗೆ ತಮಾಷೆಯ ರೂಪದಲ್ಲಿ ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದ್ದು, ಹಲವಾರು ವಿಭಿನ್ನ ರೀತಿಯ ಕಾಮೆಂಟ್ ಮಾಡಿದ್ದಾರೆ. ಕೆಲವು ಪೋಷಕರು ತಮ್ಮದು ಅಂತಹದೇ ಪರಿಸ್ಥಿತಿ ಎಂದು ತೋಡಿಕೊಂಡಿದ್ದಾರೆ. ಭಾರತೀಯರು ಕೂಡ ಇದಕ್ಕೆ ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ಪೋಟೋ ಸಖತ್ ವೈರಲ್ ಆಗಿದೆ.

https://m.facebook.com/story.php?story_fbid=pfbid0fgbbMryrXnuNGQ5sWHGJjw1zuAo7J6nzyFR6k6RpdoH4iCg8JK4KV5ZgiAJjY7KZl&id=100044590022263&scmts=scwsplos

Leave A Reply

Your email address will not be published.