Budget 2023: ರೈತರೇ ಪ್ರಧಾನಮಂತ್ರಿ ಪ್ರಣಾಮ್ ಯೋಜನೆಯ ಭರಪೂರ ಲಾಭ ಪಡೆಯಿರಿ | ಈ ಯೋಜನೆಯ ಮಹತ್ವವೇನು ಇಲ್ಲಿ ವಿವರಿಸಲಾಗಿದೆ!

ಕೃಷಿ ಚಟುವಟಿಕೆಗಳಲ್ಲಿ ರಾಸಾಯನಿಕ ರಸಗೊಬ್ಬರಗಳ ಬದಲಿಗೆ ಪರ್ಯಾಯ ಪೋಷಕಾಂಶಗಳ ಬಳಕೆಗೆ ಉತ್ತೇಜನ ನೀಡಲು ಮತ್ತು ಬೆಳೆಯ ಇಳುವರಿ ಹೆಚ್ಚಿಸಲು ಕೇಂದ್ರ ಸರ್ಕಾರ ಹೊಸ ಯೋಜನೆಯೊಂದನ್ನು ರೂಪಿಸಿದ್ದು ಈ ಯೋಜನೆಯ ಹೆಸರೇ ‘ಪ್ರಧಾನ ಮಂತ್ರಿ ಪ್ರೊಮೋಷನ್ ಆಫ್ ಅಲ್ಟರ್ನೇಟ್ ನ್ಯೂಟ್ರಿಯೆಂಟ್ಸ್ ಫಾರ್ ಅಗ್ರಿಕಲ್ಚರ್ ಮ್ಯಾನೇಜ್‌ಮೆಂಟ್ ಅಥವಾ ಪಿಎಂ ಪ್ರಣಾಮ್’ (ಪ್ರಧಾನ ಮಂತ್ರಿ-ಪರ್ಯಾಯ ಪೌಷ್ಟಿಕ ಮತ್ತು ಕೃಷಿ ನಿರ್ವಹಣೆಯ ಉತ್ತೇಜನ) ಯೋಜನೆ ಆಗಿದೆ.

ಸದ್ಯ ‘ಪಿಎಂ ಪ್ರಣಾಮ್’ ಅಥವಾ ”ಪ್ರಧಾನ ಮಂತ್ರಿ-ಪರ್ಯಾಯ ಪೌಷ್ಟಿಕ ಮತ್ತು ಕೃಷಿ ನಿರ್ವಹಣೆಯ ಉತ್ತೇಜನ (PM-PRANAM) ಯೋಜನೆ’ಯು ಕೃಷಿ ವಲಯದಲ್ಲಿ ಬದಲಾವಣೆ ತರಲಿದ್ದು ರೈತರ ಆದಾಯವನ್ನು ಹೆಚ್ಚಿಸಲಿದೆ ಈ ಪ್ರಯುಕ್ತ ಬುಧವಾರ ಅಂದರೆ ಇಂದು ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದೊಡ್ಡ ಯೋಜನೆಯನ್ನು ಘೋಷಿಸಿದ್ದಾರೆ. ಈ ಪ್ರಧಾನಮಂತ್ರಿ ಪ್ರಣಾಮ್ ಯೋಜನೆ ಇದರಲ್ಲಿ ಪರ್ಯಾಯ ರಸಗೊಬ್ಬರಗಳನ್ನು ಉತ್ತೇಜಿಸಲು ರಾಜ್ಯಗಳನ್ನು ಪ್ರೋತ್ಸಾಹಿಸಲಾಗುವುದು ಮತ್ತು ಪರ್ಯಾಯ ಪೋಷಕಾಂಶಗಳನ್ನು ಉತ್ತೇಜಿಸಲು ಪ್ರಯತ್ನಗಳನ್ನು ಮಾಡಲಾಗುವುದು ಎಂದು ತಿಳಿಸಲಾಗಿದೆ.

ಈ ಯೋಜನೆಯಿಂದಾಗಿ ರೈತರು ರಸಗೊಬ್ಬರಗಳ ಬಳಕೆಯನ್ನು ಕಡಿಮೆ ಮಾಡಲು ರಾಜ್ಯಗಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಲಕ್ಷಗಟ್ಟಲೆ ಯುವಕರಿಗೆ ಕೌಶಲ್ಯ ಒದಗಿಸಲು 20 ಸ್ಕಿಲ್ ಇಂಡಿಯಾ ಇಂಟರ್‌ನ್ಯಾಶನಲ್ ಸೆಂಟರ್‌ಗಳನ್ನು ಸ್ಥಾಪಿಸಲಾಗುವುದು ಮತ್ತು ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ 4.0 ಅನ್ನು ಸಹ ಪ್ರಾರಂಭಿಸಲಾಗುವುದು ಎಂದು ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಯುವಕರಿಗೆ ಉದ್ಯೋಗ ಯೋಗ್ಯ ಕೌಶಲ್ಯ ತರಬೇತಿ ನೀಡಲು ಸರ್ಕಾರವು 2021 ರಲ್ಲಿ ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆಯ ಮೂರನೇ ಹಂತವನ್ನು ಪ್ರಾರಂಭಿಸಿದ್ದು ಸರ್ಕಾರ ಯುವಕರಿಗೆ 300 ಕೌಶಲ್ಯ ಕೋರ್ಸ್‌ಗಳನ್ನು ಒದಗಿಸಿದ್ದು ಮುಂದೆ ಹೆಚ್ಚಿನ ಅವಕಾಶ ಕಲ್ಪಿಸಿ ಕೊಡಲಾಗುವುದು ಎಂದು ತಿಳಿಸಲಾಗಿದೆ.

ವಾಹನ ಜಂಕ್ ನೀತಿ ಏಪ್ರಿಲ್ 1 ರಿಂದ ಜಾರಿಗೆ ಬರಲಿದ್ದು ಮತ್ತು ಮಾಲಿನ್ಯಕ್ಕೆ ಕಾರಣವಾಗುವ ಹಳೆಯ ಸರ್ಕಾರಿ ವಾಹನಗಳನ್ನು ರದ್ದುಗೊಳಿಸಲು ಸರ್ಕಾರ ಹಣ ಬಿಡುಗಡೆ ಮಾಡುತ್ತಿದೆ ಎಂದು ತಿಳಿಸಿದರು.

ಅಲ್ಲದೆ ಸದ್ಯ ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರವು 50 ಸ್ಥಳಗಳನ್ನು ಆಯ್ಕೆ ಮಾಡುತ್ತದೆ ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ.

ಜೊತೆಗೆ ಒಂದು ಜಿಲ್ಲೆ ಒಂದು ಉತ್ಪನ್ನ (ODOP) ಮತ್ತು ಭೌಗೋಳಿಕ ಸೂಚಕ (GI) ಉತ್ಪನ್ನಗಳನ್ನು ಮಾಲ್‌ಗಳಲ್ಲಿ ಪ್ರಚಾರ ಮಾಡಲಾಗುತ್ತದೆ ಮತ್ತು ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಯೂನಿಟಿ ಮಾಲ್‌ಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳನ್ನು ಪ್ರೋತ್ಸಾಹಿಸಲಾಗುವುದು ಎಂದು ಹಣಕಾಸು ಸಚಿವರು ಮಾಹಿತಿ ನೀಡಿದ್ದಾರೆ.

ಸದ್ಯ ಬಜೆಟ್ ಮಂಡನೆ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಮೇಲಿನ ಪ್ರಮುಖ ಯೋಜನಾ ಮಾಹಿತಿ ತಿಳಿಸಿದರು.

Leave A Reply

Your email address will not be published.