‘ಯಶಸ್ವಿನಿ’ ನೋಂದಣಿ ಕುರಿತಂತೆ ಮಹತ್ವದ ಮಾಹಿತಿ !

ಈಗಾಗಲೇ 2022-23ನೇ ಸಹಕಾರ ಇಲಾಖೆಯು ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಿದ್ದು ಸದ್ಯ ಈ ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಮೊದಲಿಗೆ 2023ರ ಜನವರಿ 31 ಅಂತಿಮ ದಿನಾಂಕವೆಂದು ತಿಳಿಸಲಾಗಿತ್ತು. ಇದೀಗ ಈ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.

ಹೌದು ರೈತರು ಮತ್ತು ಸಹಕಾರಿ ಸಂಘಗಳ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಿದ್ದು ಈ ಕುರಿತಂತೆ ಸರ್ಕಾರವು ಯಶಸ್ವಿನಿ ಯೋಜನೆಯನ್ನು ರಾಜ್ಯದಲ್ಲಿ ಮರು ಜಾರಿಗೊಳಿಸಲಾಗಿದೆ.

ರೈತರು ಮತ್ತು ಸಹಕಾರ ಸಂಸ್ಥೆಗಳು ಅವಧಿ ವಿಸ್ತರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು ಯಶಸ್ವಿನಿ ಯೋಜನೆ ನೋಂದಣಿಗೆ ಸದ್ಯ ಫೆಬ್ರವರಿ 28 ರವರೆಗೆ ದಿನಾಂಕವನ್ನು ವಿಸ್ತರಿಸಲಾಗಿದೆ.

ಸದ್ಯ ರೈತರು ಹಾಗೂ ಸಹಕಾರ ಸಂಘಗಳ ಸದಸ್ಯರು ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಿಂದಾಗಿ ರೈತರು ಮತ್ತು ಸಹಕಾರಿ ಸಂಘಗಳ ಸದಸ್ಯರಿಗೆ ಸಾಕಷ್ಟು ಪ್ರಯೋಜನಗಳಿರುವುದರಿಂದ ಹೆಚ್ಚಿನ ಸಂಖ್ಯೆಯ ನೋಂದಣಿ ಆಗುವ ಸಾಧ್ಯತೆಗಳಿವೆ .

Leave A Reply

Your email address will not be published.