SBI : ಎಸ್ ಬಿಐ ಗ್ರಾಹಕರೇ, ಒಂದೇ ಒಂದು ಮಿಸ್ಡ್ ಕಾಲ್ ನೀಡಿದ್ರೆ ಮಿನಿ ಸ್ಟೇಟ್ಮೆಂಟ್ ಲಭ್ಯ!

ಹೇಳಿ ಕೇಳಿ ಇದು ಡಿಜಿಟಲ್ ಯುಗ..ಎಲ್ಲ ವಹಿವಾಟು ಕ್ಷಣ ಮಾತ್ರದಲ್ಲಿ ಬೆರಳ ತುದಿಯಲ್ಲಿಯೆ ಮೊಬೈಲ್ ಎಂಬ ಮಾಯಾವಿ ಮೂಲಕ ಮಾಡಿಕೊಳ್ಳಲು ಎಲ್ಲ ಬ್ಯಾಂಕಿಂಗ್ ವ್ಯವಸ್ಥೆಗಳು ಅನುವು ಮಾಡಿಕೊಟ್ಟಿವೆ. ಎಲ್ಲದರಲ್ಲೂ ಬದಲಾವಣೆಯಾಗಿ ಹಿಂದಿನಂತೆ ಬ್ಯಾಂಕ್ಗಳ ಮುಂದೆ ಗಂಟೆಗಟ್ಟಲೆ ನಿಲ್ಲಬೇಕಾದ ಅನಿವಾರ್ಯತೆ ಈಗಿಲ್ಲ. ಮೊಬೈಲ್ ಎಂಬಸಾಧನದ ಅನ್ವೇಷಣೆಯ ಬಳಿಕ ಎಲ್ಲ ಕೆಲಸಗಳು ಕ್ಷಣ ಮಾತ್ರದಲ್ಲಿ ನಡೆಯುತ್ತವೆ. ಬ್ಯಾಂಕ್ ವ್ಯವಹಾರಗಳನ್ನು ಸರಳವಾಗಿ ಸುಲಭವಾಗಿ ಮಾಡಲು ಎಲ್ಲ ಬ್ಯಾಂಕ್ಗಳು ಅನುವು ಮಾಡಿಕೊಟ್ಟಿದೆ.

ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಎಸ್ಬಿಐನ ಮನೆ ಬಾಗಿಲಿನ ಸೇವೆಯ ಮೂಲಕ  ನಿಮ್ಮ ಮನೆಯ ಸೌಕರ್ಯದಿಂದ ಸುಲಭವಾಗಿ ಹಾಗೂ ಸರಳವಾಗಿ ಹಣವನ್ನ ಹಿಂಪಡೆಯಲು ಅವಕಾಶ ಕಲ್ಪಿಸಲಾಗಿದೆ. ಎಸ್ ಬಿಐ ತನ್ನ ಗ್ರಾಹಕರಿಗೆ ಅನೇಕ ಆನ್ ಲೈನ್ ಸೇವೆಗಳನ್ನು ಪರಿಚಯಿಸಿದ್ದು, ಆ ಮೂಲಕ ಬ್ಯಾಂಕಿಗೆ ಭೇಟಿ ನೀಡಲೇಬೇಕಾದ ಅನಿವಾರ್ಯತೆಯನ್ನು ತಪ್ಪಿಸಿದೆ.
ಇದೀಗ,  ಮಿನಿ ಸ್ಟೇಟ್ಮೆಂಟ್ ಪಡೆಯಲು ಕೂಡ ಕೇವಲ ಒಂದು ಮಿಸ್ಡ್ ಕಾಲ್ ನೀಡುವ ಮೂಲಕ ಮೊಬೈಲ್ ಗೆ ವಹಿವಾಟಿನ ವಿವರಗಳು ಎಸ್ ಎಂಎಸ್ ರೂಪದಲ್ಲಿ ಬರುವ ಅವಕಾಶ ಕೂಡ ಕಲ್ಪಿಸಲಾಗಿದೆ.

ಇತ್ತೀಚೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ)  ಗ್ರಾಹಕರಿಗೆ ಮನೆಯಿಂದಲೇ ಬ್ಯಾಂಕಿಂಗ್ ಸೇವೆಗಳನ್ನು ಪಡೆಯಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ.  ಹಿರಿಯ ನಾಗರಿಕರಿಗೆ ವಾಟ್ಸ್ ಆ್ಯಪ್ ಮೂಲಕ  ಪಿಂಚಣಿ ಸ್ಲಿಪ್ ಪಡೆಯುವ ಸೇವೆ ಪರಿಚಯಿಸಿದ್ದು, ಇದರ ಜೊತೆಗೆ ಗ್ರಾಹಕರು ವಾಟ್ಸ್ ಆ್ಯಪ್  ಬ್ಯಾಂಕಿಂಗ್ ಸೇವೆ ಬಳಸಿಕೊಂಡು ಮಿನಿ ಸ್ಟೇಟ್ ಮೆಂಟ್, ಬ್ಯಾಲೆನ್ಸ್ ಮಾಹಿತಿ ಹಾಗೂ ಪಿಂಚಣಿ ಸ್ಲಿಪ್ ಪಡೆಯಬಹುದಾಗಿದೆ. ನಿಫ್ಟ್ (NEFT), ಆರ್ ಟಿಜಿಎಸ್ ( RTGS), ಐಎಂಪಿಎಸ್ (IMPS) ಹಾಗೂ ಯುಪಿಐ (UPI) ಸೇರಿದಂತೆ ಅನೇಕ ಪಾವತಿ ವಿಧಾನಗಳ  ವಹಿವಾಟಿನ ಮಾಹಿತಿಗಳನ್ನು ಮಿನಿ ಸ್ಟೇಟ್ಮೆಂಟ್ ಒಳಗೊಂಡಿದೆ ಎಂಬುದು ಗ್ರಾಹಕರಿಗೆ ಗೊತ್ತಿರುವ ವಿಚಾರವೇ!!

ಎಸ್ ಬಿಐ ಅನೇಕ ಸೇವೆಗಳನ್ನು ಟೋಲ್ ಫ್ರೀ ಸಂಖ್ಯೆ ಮತ್ತು  ಎಸ್ ಎಂಎಸ್ ಮೂಲಕ ಕೂಡ  ಗ್ರಾಹಕರಿಗೆ  ನೀಡುತ್ತಿದೆ. ಎಸ್ ಎಂಎಸ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಸೇವೆಗಳನ್ನು ಪಡೆಯಲು ಗ್ರಾಹಕರು ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ಅಥವಾ ಎಸ್ ಎಂಎಸ್ ಕಳುಹಿಸಬೇಕಾಗುತ್ತದೆ. ಎಸ್ ಎಂಎಸ್ ಬ್ಯಾಂಕಿಂಗ್ ಹಾಗೂ ಮೊಬೈಲ್ ಸೇವೆಗಳ ಮೂಲಕ ಬ್ಯಾಂಕ್ ಖಾತೆ ಬ್ಯಾಲೆನ್ಸ್ ಮಾಹಿತಿ ಹಾಗೂ ಮಿನಿ ಸ್ಟೇಟ್ಮೆಂಟ್ ಪಡೆಯಬಹುದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೈಕ್ರೋ ಅಥವಾ ಮಿನಿ ಸ್ಟೇಟ್ಮೆಂಟ್ ಬ್ಯಾಂಕ್ ಶಾಖೆಗಳಲ್ಲಿ ಹಾಗೂ ಆನ್ ಲೈನ್ ನಲ್ಲಿ ಲಭಿಸುತ್ತದೆ.

ಮಿಸ್ಡ್ ಕಾಲ್ ಅಥವಾ ಎಸ್ ಎಂಎಸ್ ಮೂಲಕ ಮಿನಿ ಸ್ಟೇಟ್ಮೆಂಟ್
ಗ್ರಾಹಕರು 9223766666 ಸಂಖ್ಯೆಗೆ ಕರೆ ಮಾಡುವ ಅಥವಾ ಮೆಸೇಜ್ ಮಾಡುವ ಮೂಲಕ ಖಾತೆಯ ಬ್ಯಾಲೆನ್ಸ್ ಮಾಹಿತಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. 09223866666 ಸಂಖ್ಯೆಗೆ ನೀವು ಕರೆ ಮಾಡಿದ ತಕ್ಷಣ ಎರಡು ರಿಂಗ್ ಆದ ಬಳಿಕ ಕರೆ ಕಡಿತಗೊಳ್ಳಲಿದೆ. ಈ ವೇಳೆ, ಮೊದಲ ಐದು ವಹಿವಾಟುಗಳ ಮಾಹಿತಿ ನಿಮ್ಮ ಮೊಬೈಲ್ ಗೆ ಎಸ್ಎಂಎಸ್ ಮೂಲಕ ಬರುತ್ತದೆ.

ಎಸ್ ಬಿಐ ಮಿನಿ ಸ್ಟೇಟ್ಮೆಂಟ್ ಪಡೆಯಲು ಗ್ರಾಹಕರಿಗೆ ಅನೇಕ ಆಯ್ಕೆಗಳಿದ್ದು, ಎಸ್ ಬಿಐ ಕ್ವಿಕ್ ಬ್ಯಾಂಕಿಂಗ್, ಮಿಸ್ಡ್ ಕಾಲ್ ಬ್ಯಾಂಕಿಂಗ್, ಎಸ್ ಎಂಎಸ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ಮಿನಿ ಸ್ಟೇಟ್ಮೆಂಟ್  ಪಡೆಯಲು  ಅನುವು ಮಾಡಿಕೊಡಲಾಗಿದೆ. ಆದರೆ, ಗ್ರಾಹಕರು ಈ ಸೇವೆಗಳನ್ನು ಪಡೆಯಲು ಬ್ಯಾಂಕ್ ನಲ್ಲಿ ತಮ್ಮ ಮೊಬೈಲ್ ಸಂಖ್ಯೆ ನೋಂದಣಿ ಮಾಡಿಸಬೇಕಾಗುತ್ತದೆ.

ಆನ್ ಲೈನ್ ನಲ್ಲೇ ಶಾಖೆ ಬದಲಾವಣೆ
ಎಸ್ ಬಿಐಯಲ್ಲಿ (SBI) ಉಳಿತಾಯ ಖಾತೆ ಹೊಂದಿದ್ದು, ಶಾಖೆ ಬದಲಾಯಿಸಲು ಇಚ್ಛಿಸಿದರೆ, ಎಸ್ ಬಿಐ (SBI) ಆನ್ ಲೈನ್ ಬ್ಯಾಂಕಿಂಗ್ ಸೇವೆಗಳ ಮೂಲಕ ಮನೆಯಿಂದಲೇ ಈ ಕೆಲಸ ಮಾಡಿಕೊಳ್ಳಬಹುದಾಗಿದೆ. ಬ್ಯಾಂಕಿಗೆ ಭೇಟಿ ನೀಡಬೇಕಾದ ಅನಿವಾರ್ಯತೆ ಇಲ್ಲ. ಕೇವಲ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಖಾತೆಯನ್ನು ಇನ್ನೊಂದು ಶಾಖೆಗೆ ಬದಲಾಯಿಸಲು ನಿಮಗೆ ಆ ಶಾಖೆಯ ಕೋಡ್ ಬಗ್ಗೆ ತಿಳಿದಿರಬೇಕಾದ ಅವಶ್ಯಕತೆ ಇದೆ. ಅದೇ ರೀತಿ, ಬ್ಯಾಂಕಿನಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೋಂದಣಿ ಆಗಿರಬೇಕಾಗುತ್ತದೆ.

ಎಸ್ ಬಿಐ ಹಿರಿಯ ನಾಗರಿಕರಿಗೆ ವಾಟ್ಸ್ ಆ್ಯಪ್  (Whatsapp) ಮೂಲಕ ಪಿಂಚಣಿ ಸ್ಲಿಪ್ (Pension slip) ಪಡೆಯುವ ಸೇವೆಯನ್ನು ಪರಿಚಯಿಸಿದೆ. ಇದು ಹಿರಿಯ ನಾಗರಿಕರಿಗೆ ಬ್ಯಾಂಕ್ ಶಾಖೆಗೆ ಅಲೆದಾಡುವ ತಾಪತ್ರಯ ವನ್ನ ತಪ್ಪಿಸಿದೆ. ಮನೆಯಲ್ಲೇ ಕುಳಿತು ಯಾವುದೇ ಸಮಸ್ಯೆಯಿಲ್ಲದೆ ವಾಟ್ಸ್ ಆ್ಯಪ್  ಮೂಲಕ ಪಿಂಚಣಿ ಸ್ಲಿಪ್ ಪಡೆಯಬಹುದಾಗಿದ್ದು,  ಈ ಸೇವೆ ಪಡೆಯಲು ಗ್ರಾಹಕರು ವಾಟ್ಸ್ ಆ್ಯಪ್ ನಲ್ಲಿ 9022690226 ಸಂಖ್ಯೆಗೆ ‘Hi’ಎಂದು ಕಳುಹಿಸಿದರೆ ಸಾಕಾಗುತ್ತದೆ. ಗ್ರಾಹಕರು ವಾಟ್ಸ್ ಆ್ಯಪ್  ಬ್ಯಾಂಕಿಂಗ್ ಸೇವೆ ಬಳಸಿಕೊಂಡು ಮಿನಿ ಸ್ಟೇಟ್ ಮೆಂಟ್, ಬ್ಯಾಲೆನ್ಸ್ ಮಾಹಿತಿ ಹಾಗೂ ಪಿಂಚಣಿ ಸ್ಲಿಪ್ ಪಡೆಯಲು ಬ್ಯಾಂಕಿಂಗ್ ವ್ಯವಸ್ಥೆ ಅನುವು ಮಾಡಿಕೊಟ್ಟಿವೆ.

Leave A Reply

Your email address will not be published.