Pressure Cooker : ಅಡುಗೆಗೆ ಫ್ರೆಶರ್‌ ಕುಕ್ಕರ್‌ ಬಳಸುವವರೇ ಇತ್ತ ಗಮನಿಸಿ | ಇಲ್ಲಿದೆ ಆತಂಕಪಡೋ ವಿಷಯ

ಅಡುಗೆ ಕೋಣೆಯಲ್ಲಿ ನಮ್ಮ ಜೊತೆ ಕುಕ್ಕರ್ ಇರಲೇ ಬೇಕು. ಕುಕ್ಕರ್ ಇದ್ದರೆ ಮಾತ್ರ ಅಡುಗೆ ಬೇಗ ಆಗುತ್ತೆ ಜೊತೆಗೆ ಸಮಯವೂ ಉಳಿಯುತ್ತೆ. ಒಟ್ಟಿನಲ್ಲಿ ಜನರು ಆಧುನಿಕ ಜೀವನಕ್ಕೆ ಒಗ್ಗಿಕೊಂಡು ಅಡುಗೆಯಲ್ಲಿ ಸಹ ಹಲವಾರು ಹೊಸ ಬದಲಾವಣೆ ಮಾಡಿಕೊಂಡಿದ್ದಾರೆ. ಇನ್ನು ಓವನ್‌ಗಳ ಬಳಕೆ, ಪಾತ್ರೆ ತೊಳೆಯಲು ಮೆಶೀನ್‌ಗಳ ಬಳಕೆ, ಒಮ್ಮೆ ಬೇಯಿಸಿಟ್ಟ ಪ್ರಿಡ್ಜ್ ನಲ್ಲಿ ಇರಿಸಿ ವಾರಗಟ್ಟಲೆ ತಿನ್ನುವುದು ಹೀಗೆ ಹಲವಾರು ಬದಲಾವಣೆ ಆಗುತ್ತಲೇ ಇದೆ .

ಸದ್ಯ ಇವೆಲ್ಲದರ ಹೊರತು ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಷ್ಟಗೊಳ್ಳುತ್ತವೆಯೇ ಎಂದು ನಿಮಗೆ ಗೊಂದಲಗಳಿರಬಹುದು.

ಮುಖ್ಯವಾಗಿ ಪ್ರೆಶರ್ ಕುಕ್ಕರ್ ಶಾಖ ಹಾಗೂ ಹಬೆ ಅಂದರೆ ಹೀಟ್ ಮತ್ತು ಸ್ಟೀಮ್ ಎರಡನ್ನೂ ಬಳಸಿಕೊಂಡು ಆಹಾರವನ್ನು ಬೇಯಿಸುತ್ತದೆ. ಹೆಚ್ಚಿನ ಶಾಖದ ಸಂದರ್ಭದಲ್ಲಿ ಉಗಿ ಹಾಗೂ ಒತ್ತಡವು ಆಹಾರವನ್ನು ಬೇಯಿಸಲು ಸಹಕಾರವನ್ನೊದಗಿಸುತ್ತದೆ. ಕುಕ್ಕರ್ ಸ್ಟೀಮ್ ಅನ್ನು ಹಿಡಿದಿಡುವ ವಾಲ್ವ್ ಅಂದರೆ ಕವಾಟವನ್ನು ಹೊಂದಿದ್ದು ಇದು ಹೆಚ್ಚು ಒತ್ತಡದ ಸ್ಥಿತಿಯನ್ನು ನಿರ್ಮಿಸುತ್ತದೆ. ಕುಕ್ಕರ್‌ನಲ್ಲಿರುವ ದ್ರವ ಅಥವಾ ದ್ರವಾಹಾರಗಳ ಕುದಿಯುವ ತಾಪಮಾನವನ್ನು ಇದು ಏರಿಸುತ್ತದೆ ಮತ್ತು ಹಬೆಯ ರೂಪದಲ್ಲಿ ಆಹಾರಕ್ಕೆ ತೇವಾಂಶವನ್ನು ಒದಗಿಸುತ್ತದೆ. ಇದರಿಂದ ಆಹಾರ ಬೇಯುವಿಕೆ ಪ್ರಕ್ರಿಯೆ ತ್ವರಿತಗೊಳ್ಳುತ್ತದೆ.

ಪ್ರೆಶರ್ ಕುಕ್ಕರ್‌ನಲ್ಲಿ ನೀರು ಕುದಿಯುವ ಬಿಂದು 250 ಡಿಗ್ರಿಯಾಗಿದೆ. ಇದು ಇನ್ನೂ ಹೆಚ್ಚಿನ ಆಹಾರಗಳನ್ನು ಸ್ಟವ್ ಅಥವಾ ಗ್ಯಾಸ್‌ನಲ್ಲಿ ತಯಾರಿಸುವ ತಾಪಮಾನಕ್ಕಿಂತ ಕಡಿಮೆಯಾಗಿದೆ.

ಪ್ರೆಶರ್ ಕುಕ್ಕರ್‌ಗಳು ಆಹಾರವನ್ನು ಕಡಿಮೆ ತಾಪಮಾನದಲ್ಲಿ ಬೇಯಿಸುತ್ತವೆ ಆದರೆ 1995 ರ ಅಧ್ಯಯನವು ಇತರ ಅಡುಗೆ ವಿಧಾನಗಳಿಗಿಂತ ಪ್ರೆಶರ್ ಕುಕ್ಕರ್ ಆಹಾರದಲ್ಲಿ ಪೋಷಕಾಂಶಗಳನ್ನು ಸಂರಕ್ಷಿಸುತ್ತದೆ ಎಂಬುದನ್ನು ತಿಳಿಸಿದೆ.

ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡುವುದರಿಂದ ಅದರಲ್ಲಿರುವ ಪೋಷಕಾಂಶಗಳು ನಷ್ಟಗೊಳ್ಳುತ್ತವೆಯೇ ಎಂಬುದಕ್ಕೆ ಉತ್ತರ ಇಲ್ಲಿದೆ.

  • ಅಧ್ಯಯನವು ಆಹಾರದಲ್ಲಿನ ವಿಟಮಿನ್ ಸಿ ಮತ್ತು ಬಿ-ವಿಟಮಿನ್‌ಗಳ ಮಟ್ಟವನ್ನು ಪರಿಶೀಲಿಸಿದ್ದು ವಿಟಮಿನ್ ಮಟ್ಟ ಪ್ರೆಶರ್ ಕುಕ್ಕರ್‌ನಲ್ಲಿರುತ್ತದೆ ಎಂಬುದನ್ನು ಸೂಚಿಸಿದೆ.
  • ಕುದಿಯುವಿಕೆಯಿಂದ 40-75% ವ್ಯಾಪ್ತಿಯೊಂದಿಗೆ ಪೋಷಕಾಂಶಗಳನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನದಲ್ಲಿ ತಿಳಿದಿದೆ.
  • ಹುರಿದ ಮತ್ತು ಆವಿಯಲ್ಲಿ 90% ಪೋಷಕಾಂಶಗಳು ಉಳಿಯುತ್ತವೆ ಎಂಬುವುದು ಮತ್ತೊಂದು ಅಧ್ಯಯನ ತಿಳಿಸಿಕೊಟ್ಟಿದೆ.
  • ಪೋಷಕಾಂಶಗಳನ್ನು ಸಂರಕ್ಷಿಸುವಲ್ಲಿ ಪ್ರೆಶರ್ ಕುಕ್ಕರ್ ಸಹಕಾರಿಯಾಗಿದೆ. ಅದಾಗ್ಯೂ ಪ್ರೆಶರ್ ಕುಕ್ಕರ್ ಫೈಟಿಕ್ ಆಮ್ಲದಂತಹ ಆಹಾರದಲ್ಲಿನ ಕೆಲವು ಗುಣಲಕ್ಷಣಗಳನ್ನು ನಿಷ್ಕ್ರಿಯಗೊಳಿಸುತ್ತದೆ.
  • ಫೈಟಿಕ್ ಆಸಿಡ್ ಮತ್ತು ಲೆಕ್ಟಿನ್‌ಗಳನ್ನು ಕಡಿಮೆ ಮಾಡುವುದರಿಂದ ಧಾನ್ಯಗಳು ಮತ್ತು ಬೀನ್ಸ್‌ನಂತಹ ಆಹಾರಗಳಲ್ಲಿನ ಪೋಷಕಾಂಶಗಳನ್ನು ಹೆಚ್ಚು ಹೀರಿಕೊಳ್ಳುವಂತೆ ಮಾಡುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಕಿರಿಕಿರಿಗೊಳಿಸುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡುವುದು ಈ ಪದಾರ್ಥಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯವಾಗಿದೆ ಎಂದು ಹೇಳಬಹುದು.

ಒಟ್ಟಿನಲ್ಲಿ ಪ್ರೆಶರ್ ಕುಕ್ಕರ್ ನೀರಿನ ಕುದಿಯುವ ಬಿಂದುವನ್ನು ಹೆಚ್ಚಿಸುತ್ತದೆ ಹಾಗೂ ಅಡುಗೆ ಮಾಡುವ ಸಮಯವನ್ನು ಕಡಿಮೆ ಮಾಡುತ್ತದೆ. ಪ್ರೆಶರ್ ಕುಕ್ಕರ್‌ನಲ್ಲಿ ಸ್ಟೀಮ್ ಹೊರಬರಲು ಸಾಧ್ಯವಿಲ್ಲದ ಕಾರಣ ನೀರು ನಷ್ಟವಾಗುವುದಿಲ್ಲ ಹಾಗೂ ಶಾಖದ ಸೋರಿಕೆ ಇಲ್ಲದೆ ಆಹಾರ ಬೇಯುತ್ತದೆ.

Leave A Reply

Your email address will not be published.