30 ದಾಟಿದವರಿಗೆ ಬಾರ್‌ ಗೆ ಪ್ರವೇಶ ನಿಷೇಧ : ಕಾರಣ ಕೇಳಿದ್ರೆ ಒಂದ್ ಪೆಗ್ ಜಾಸ್ತಿ ಎಳೀತೀರ !!!

ಅಪ್ರಾಪ್ತರಿಗೆ ಮದ್ಯ ಮಾರಾಟ ನಿಷೇಧ ಇರೋ ಗೊತ್ತಿದೆ. ಅಂತವರನ್ನು ಬಾರ್ ಪಬ್ ಗಳಿಗೆ ಸೇರಿಸದೆ ಇರೋ ವಿಷ್ಯ ಎಲ್ಲರಿಗೂ ತಿಳಿದ ವಿಚಾರವೇ ಆಗಿದೆ. ಆದರೆ ಅಲ್ಲೊಂದು ಬಾರು ಅಪ್ರಾಪ್ತರನ್ನು ಒಳಕ್ಕೆ ಬಿಟ್ಟುಕೊಳ್ಳುತ್ತಿದೆ, ಆದರೆ ಅದು 30 ದಾಟಿದವರಿಗೆ ನಿಷೇಧ ಹೇರಿದೆ.

ನಿಷೇಧ ಏಕೆ ಹೇರಿದೆ ಎಂಬ ಕಾರಣ ತಿಳಿದರೆ 30 ದಾಟಿದ ಮದ್ಯ ಪ್ರಿಯರ ಪಿತ್ತ ನೆತ್ತಿಗೆ ಏರಿ ಇನ್ನೊಂದಷ್ಟು ಎಕ್ಸ್ಟ್ರಾ ಪೆಗ್ ಗೆ ಬೇಡಿಕೆ ಹುಟ್ಟೋದಂತೂ ಗ್ಯಾರಂಟಿ.

ಥೈಲ್ಯಾಂಡ್‌ನ ಬಾರೊಂದು ಇಂತಹಾ ವಿಚಿತ್ರ ನಿರ್ಭಂದ ಹೇರಿದೆ. ಅದಕ್ಕೆ ಅದು ಕೊಡುವ ಕಾರಣ ಕೂಡಾ ವಿಚಿತ್ರವಾಗಿದೆ. ಬಾರ್ ಪಬ್‌ಗಳಿಗೆ ತೆರಳುವುದಕ್ಕೆ ಅಪ್ರಾಪ್ತರಿಗೆ ನಿಷೇಧ ಹೇರುವ ನಿಯಮಹಲವು ದೇಶಗಳಲ್ಲಿ ಇವೆ. ಎಳೆಯ ಮಕ್ಕಳು ಬೆಳೆಯುವ ವಯಸ್ಸಲ್ಲಿ ಆರೋಗ್ಯ ಹಾಳು ಮಾಡಿಕೊಳ್ಳದಿರಲಿ ಎಂಬ ಕಾರಣಕ್ಕೆ ಒಂದೊಂದು ದೇಶದಲ್ಲಿ ಒಂದೊಂದು ತರ ಅಬಕಾರಿ ಕಾನೂನು ಜಾರಿಯಲ್ಲಿದೆ. ಇದರಂತೆ ಅಪ್ರಾಪ್ತರು ಮದ್ಯ ಸೇವಿಸುವಂತಿಲ್ಲ. ಬಾರ್ ಪಬ್‌ಗಳಿಗೆ ಕೂಡಾ ಹೋಗುವಂತಿಲ್ಲ.

30 ವರ್ಷ ದಾಟಿದವರು ಸಾಕಷ್ಟು ಟ್ರೆಂಡಿ ಆಗಿಲ್ಲ ಎಂಬ ಕಾರಣಕ್ಕೆ ಬಾರ್‌ಗೆ ಪ್ರವೇಶ ನಿಷೇಧಿಸಿರುವುದಾಗಿ ಥೈಲ್ಯಾಂಡ್‌ನ ಈ ಬಾರ್ ಹೇಳಿದ್ದು ಇದರಿಂದ ಬಾರ್ ಗ್ರಾಹಕರ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. 30 ದಾಟಿದವರು ನೋಡಲು ಟ್ರಿಮ್ ಆಗಿರಲ್ಲ, ಸ್ಟೈಲಿಶ್ ಡ್ರೆಸ್ ಹಾಕಲ್ಲ ಅಂತ ಬಾರ್ 30 ರ ನಂತರದ ಪ್ರಾಯದವರಿಗೆ ನಿಷೇಧ ಹೇರಿದ್ದು. ಈ ಬಾರಿನಲ್ಲಿ 1991 ನಂತರ ಹುಟ್ಟಿದ್ದವರು ಹಾಗೂ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಎಂದು ಈ ಬಾರ್ ಹೇಳಿದೆ. Zync Rangsit ಎಂಬ ಹೆಸರಿನ ಬಾರೇ ಈಗ 30 ದಾಟಿದವರ ಆಕ್ರೋಶಕ್ಕೆ ತುತ್ತಾಗಿರುವ ಥೈಲ್ಯಾಂಡ್‌ನ ಬಾರ್ & ರೆಸ್ಟೋರೆಂಟ್‌.

ಥೈಲ್ಯಾಂಡ್‌ನ (Thailand) ರಾಜಧಾನಿ ಬ್ಯಾಂಕಾಕ್‌ನ (Bangkok) ಹೊರವಲಯದಲ್ಲಿರುವ ಪಾಥುಮ್ ಥಾನಿ ಪ್ರಾಂತ್ಯದಲ್ಲಿ ಈ ಬಾರ್ ಇದೆ. ತನ್ನ ಗುರುತಿನ ಚೀಟಿ ನೋಡಿದ ಬಳಿಕ ನನಗೆ 36 ವರ್ಷ ಎಂದು ತಿಳಿದು ಬಾರ್‌ನ ಕಾವಲುಗಾರರು ನನಗೆ ಪ್ರವೇಶ ನಿರಾಕರಿಸಿದರು ಎಂದು ವ್ಯಕ್ತಿಯೊಬ್ಬರು ದೂರಿದ್ದು, ಈ ಬಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಾ ಅವರು ಆ ಸ್ಥಳದಿಂದ ಹೊರ ನಡೆದಿದ್ದಾರೆ.

ವಯಸ್ಸಾದವರಿಗೆ ಪ್ರವೇಶವಿಲ್ಲ ಎಂಬ ನೀತಿ ಜಾರಿಗೆ ಬರುವ ಮೊದಲು, ಅವರು ತಿಂಗಳಿಗೊಮ್ಮೆ ಈ ಕ್ಲಬ್‌ಗೆ ಭೇಟಿ ನೀಡುತ್ತಿದ್ದರು. ಆದರೆ ಅವರು ಇತ್ತೀಚೆಗೆ ಈ ಪಬ್ & ಬಾರ್‌ಗೆ ಭೇಟಿ ನೀಡಿದಾಗ 1991 ರ ನಂತರ ಜನಿಸಿದ ವಿದ್ಯಾರ್ಥಿಗಳು ಅಥವಾ ಗ್ರಾಹಕರಿಗೆ ಮಾತ್ರ ಒಳಗೆ ಪ್ರವೇಶಿಸಲು ಅನುಮತಿ ಎಂದು ಬಾರ್ ಸಿಬ್ಬಂದಿ ತಿಳಿಸಿದರು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ ಇನ್ನೊಂದು ಪ್ರಕರಣದಲ್ಲಿ ಅಮೆರಿಕಾದಲ್ಲಿ 30 ವರ್ಷ ಆಗಿಲ್ಲ ಎಂಬ ಕಾರಣಕ್ಕೆ ಇಬ್ಬರು ಮಹಿಳೆಯರಿಗೆ ಬಾರ್‌ಗೆ ಪ್ರವೇಶಿಸಲು ಅನುಮತಿ ನಿರಾಕರಿಸಲಾಗಿತ್ತು. ಕ್ಯಾಲಿಫೋರ್ನಿಯಾದ (California) ಲಾಸ್ ಏಂಜಲೀಸ್‌ನಲ್ಲಿರುವ (Los Angeles) ಮೆಲೊಡಿ ಬಾರ್ (Melody Bar) ಮತ್ತು ಗ್ರಿಲ್ ಎಂಬ ಬಾರ್ ಅಂಡ್ ರೆಸ್ಟೋರೆಂಟ್ 30 ಅಥವಾ ಅದಕ್ಕಿಂತ ಕೆಳಗಿನ ವಯಸ್ಸಿನ ಜನರಿಗೆ ನಿಷೇಧ ಹೇರಿತ್ತು, ಉಳಿದವರಿಗೆ ಅಂದರೆ 30 ದಾಟಿದವರಿಗೆ ಮಾತ್ರ ಅನುಮತಿ ನೀಡಿತ್ತು.

Leave A Reply

Your email address will not be published.