‘ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್‌ ನಡೆಸಿಲ್ಲ, ನಡೆದಿದ್ರೆ ಪುರಾವೇ ತೋರಿಸಿ’ ಎಂದ ದಿಗ್ವಿಜಯ್ ಸಿಂಗ್! ಸೇನೆಯನ್ನು ಅನುಮಾನಿಸಲು ಮತ್ತೆ ಮುಂದಾದ್ರು ಕಾಂಗ್ರೆಸಿಗರು!!

ಸೆಪ್ಟೆಂಬರ್ 2016 ರಲ್ಲಿ, ಭಾರತೀಯ ಸೇನೆಯು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸಿ, ತನ್ನ ಕಾರ್ಯಚರಣೆಯಲ್ಲಿ ಯಶಸ್ವಿಯಾಗಿ ದೇಶದ ಜನತೆಗೆ ಅತೀವ ಸಂತೋಷವನ್ನುಂಟು ಮಾಡಿತ್ತು. ದೇಶವೇ ಹೆಮ್ಮೆ ಪಡುವಂತಹ ಈ ವಿಚಾರವನ್ನು ವಿರೋಧ ಪಕ್ಷಗಳು ಆಗಾಗ ಪ್ರಶ್ನೆ ಮಾಡುತ್ತಲೇ ಅನುಮಾನಿಸಿದ್ದವು. ಸಂಸತ್ತಲ್ಲೂ ಈ ವಿಚಾರ ಹಲವು ಬಾರಿ ಚರ್ಚೆಯಾಗಿತ್ತು. ಇದೀಗ ಕಾಂಗ್ರೆಸ್ಸಿನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮತ್ತೆ ಇದನ್ನು ನೆನಪು ಮಾಡಿಕೊಂಡು ಅನುಮಾನದ ವಾಸನೆಯನ್ನು ಹರಡಿಸಿದ್ದಾರೆ

ರಾಹುಲ್‌ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸುಳ್ಳನ್ನೇ ಹರಡುತ್ತಿದೆ ಎಂದು ಕಿಡಿ ಕಾರಿದ್ದಾರೆ. 44 ಯೋಧರ ಸಾವಿಗೆ ಕಾರಣವಾಗಿದ್ದ ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಸೇನೆ ನಡೆಸಿದ ಸರ್ಜಿಕಲ್ ಸ್ಟ್ರೈಕ್​ ಅನ್ನು ಕಾಂಗ್ರೆಸ್​ ಹಿರಿಯ ನಾಯಕ ದಿಗ್ವಿಜಯ ಸಿಂಗ್​ ಅವರು ಮತ್ತೊಮ್ಮೆ ಅನುಮಾನಿಸಿದ್ದಾರೆ. ದಾಳಿ ನಿಜವಾಗಿ ನಡೆದಿದ್ದೇ ಆದಲ್ಲಿ ದೇಶಕ್ಕೆ ಕೇಂದ್ರ ಸರ್ಕಾರವು ಪುರಾವೆಯನ್ನು ಏಕೆ ನೀಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಉಗ್ರರಿಗೆ 300 ಕೆಜಿ ಆರ್​ಡಿಎಕ್ಸ್​ ಸಿಕ್ಕಿದ್ದು ಹೇಗೆ?, ಡಿಎಸ್​ಪಿ ದೇವೇಂದ್ರ ಸಿಂಗ್​ ಉಗ್ರರಿಂದ ತಪ್ಪಿಸಿಕೊಂಡಿರುವುದಕ್ಕೆ ಇಂದಿಗೂ ಉತ್ತರ ಸಿಕ್ಕಿಲ್ಲ ಎಂದು ಹೇಳಿ, ತಮ್ಮ ಮನದಲ್ಲಿರುವ ಹಲವು ಪ್ರಶ್ನೆಗಳನ್ನು ಹರಿಬಿಟ್ಟಿದ್ದಾರೆ.

ಪುಲ್ವಾಮಾ ಘಟನೆಯಲ್ಲಿ ಭಯೋತ್ಪಾದಕನಿಗೆ 300 ಕೆಜಿ ಆರ್‌ಡಿಎಕ್ಸ್ ಎಲ್ಲಿಂದ ಸಿಕ್ಕಿತ್ತು? ದೇವೇಂದ್ರ ಸಿಂಗ್ ಡಿಎಸ್​ಪಿ ಭಯೋತ್ಪಾದಕರಿಗೆ ಸಿಕ್ಕಿಬಿದ್ದ ಬಳಿಕ ಬಿಡುಗಡೆಯಾಗಿದ್ದು ಹೇಗೆ?, ದೇವೇಂದ್ರ ಸಿಂಗ್ ಈಗ ಎಲ್ಲಿದ್ದಾರೆ. ಅವರ ಮೇಲೆ ಏಕೆ ದೇಶ ದ್ರೋಹದ ಪ್ರಕರಣ ದಾಖಲಾಗಿಲ್ಲ. ಪಾಕಿಸ್ತಾನ ಮತ್ತು ಭಾರತದ ಪ್ರಧಾನಿ ನಡುವೆ ಪರಸ್ಪರ ಹೊಗಳಿಕೆಯ ಮಾತುಗಳನ್ನು ಆಡುತ್ತಿದ್ದಾರೆ. ಹಾಗಾದರೆ ನಿಮ್ಮ ನಡುವಿನ ಸಂಬಂಧದ ಬಗ್ಗೆಯೂ ನಾವು ತಿಳಿದುಕೊಳ್ಳಲು ಬಯಸುತ್ತೇವೆ’ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್​ ಟ್ವಿಟ್​ನಲ್ಲಿ ಹೇಳಿದ್ದಾರೆ.

ಪುಲ್ವಾಮಾ ಭಯೋತ್ಪಾದಕರ ಕೇಂದ್ರವಾಗಿದೆ. ಪ್ರತಿ ಕಾರನ್ನೂ ಪರಿಶೀಲಿಸಲಾಗುತ್ತಿತ್ತು. ಸ್ಕಾರ್ಪಿಯೋ ಕಾರ್ ಒಂದು ವಿರುದ್ಧ ದಿಕ್ಕಿನಿಂದ ಬಂದಿತ್ತು. ಅಲ್ಲಿ ಏಕೆ ಪರಿಶೀಲನೆ ಇರಲಿಲ್ಲ? ಬಳಿಕ ಅಲ್ಲಿ ಅಪಘಾತ ಉಂಟಾಗಿತ್ತು ಮತ್ತು ನಮ್ಮ 40 ಸೈನಿಕರು ಮೃತಪಟ್ಟಿದ್ದರು. ಇದುವರೆಗೂ, ಈ ಘಟನೆ ಕುರಿತಂತೆ ಸರ್ಕಾರವು ಸಂಸತ್ತು ಅಥವಾ ಸಾರ್ವಜನಿಕವಾಗಿ ಮಾಹಿತಿ ನೀಡಿಲ್ಲ” ಎಂದು ದಿಗ್ವಿಜಯ ಸಿಂಗ್ ಆರೋಪಿಸಿದ್ದಾರೆ.

ಅಷ್ಟೇ ಅಲ್ಲದೇ 2016ರಲ್ಲಿ ಜಮ್ಮು ಮತ್ತು ಕಾಶ್ಮೀರದ ಉರಿ ಪಟ್ಟಣದಲ್ಲಿರುವ ಸೇನೆಯ 12 ಬ್ರಿಗೇಡ್ ಪ್ರಧಾನ ಕಚೇರಿಗಳ ಮೇಲೆ ನಾಲ್ವರು ಭಯೋತ್ಪಾದಕರು ಗ್ರೇನೆಡ್ ದಾಳಿ ನಡೆಸಿದರು. ಈ ದಾಳಿಯಲ್ಲಿ 18 ಯೋಧರು ಹುತಾತ್ಮರಾದರು. ಉರಿ ಭಯೋತ್ಪಾದಕ ದಾಳಿಯ 10 ದಿನಗಳ ಬಳಿಕ ಸರ್ಜಿಕಲ್ ಸ್ಟ್ರೈಕ್‌ ನಡೆಸಲಾಯಿತು. ಅದರ ವರದಿಯನ್ನೂ ಸಂಸತ್ತಿನಲ್ಲಿ ಮಂಡಿಸಿಲ್ಲ ಎಂದು ಹೇಳಿದ್ದಾರೆ.

ದಿಗ್ವಿಜಯ ಸಿಂಗ್ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪಕ್ಷವು ಮತ್ತೆ ಮತ್ತೆ ಭಾರತೀಯ ಸೇನೆ ಹಾಗೂ ಯೋಧರ ಶ್ರಮವನ್ನು ಅವಮಾನಿಸುತ್ತಿದೆ ಎಂದು ಆರೋಪಿಸಿದೆ. ಗಾಂಧಿ ಮತ್ತು ಕಾಂಗ್ರೆಸ್‌ಗೆ ನಮ್ಮ ಧೈರ್ಯಶಾಲಿ ಸಶಸ್ತ್ರ ಪಡೆಗಳ ಮೇಲೆ ನಂಬಿಕೆ ಇಲ್ಲ. ಅವರು ಭಾರತದ ನಾಗರಿಕರು ಮತ್ತು ನಮ್ಮ ಸಶಸ್ತ್ರ ಪಡೆಗಳನ್ನು ಪದೇ ಪದೇ ಪ್ರಶ್ನಿಸುವ ಮೂಲಕ ಅವಮಾನಿಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ವಾಗ್ದಾಳಿ ನಡೆಸಿದ್ದಾರೆ.

Leave A Reply

Your email address will not be published.