ಬಯಾಲಜಿಯ ಸಂತಾನೋತ್ಪತ್ತಿ ಕ್ಲಾಸು ನಡೀತಿತ್ತು, ಶ್ರದ್ದೆಯಿಂದ ಪಾಠ ಕೇಳುತ್ತಿದ್ದ ಹುಡುಗಿ ಆಸಕ್ತಿಯಿಂದ ಕೇಳಿದಳು ” ಪ್ರಾಕ್ಟಿಕಲ್ ಮಾಡೋಣವೇ ? ”

ಇತ್ತೀಚೆಗೆ ಶೆಹನಾಜ್ ಗಿಲ್ ಅವರ ಚಾಟ್ ಶೋ ದೇಸಿ ವೈಬ್ಸ್‌ನಲ್ಲಿ ಶೆಹನಾಜ್ ಗಿಲ್ ಅವರೊಂದಿಗೆ ನಟಿ ರಾಕುಲ್‌ಪ್ರೀತ್ ಸಿಂಗ್ ತಮ್ಮ ಚಲನಚಿತ್ರ ಛತ್ರಿವಾಲಿ ಪ್ರಚಾರಕ್ಕಾಗಿ ಕಾಣಿಸಿಕೊಂಡಾಗ ಒಂದು ರಸವತ್ತಾದ ಪ್ರಸಂಗ ನಡೆದಿದೆ. ಅಲ್ಲಿ ಹೋಸ್ಟ್ ಮಾಡುತ್ತಿರುವ ನಟಿ ನಿರೂಪಕಿ ಶೆಹನಾಜ್ ಗಿಲ್ ತನ್ನ ಶಾಲಾ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಅವತ್ತು ಜೀವಶಾಸ್ತ್ರದ ತರಗತಿಯಲ್ಲಿ ಸಂತಾನೋತ್ಪತ್ತಿಯ ಅಧ್ಯಾಯವನ್ನು ಶಿಕ್ಷಕರು ಪಾಠ ಮಾಡುತ್ತಿರುವಾಗ ಆ ಘಟನೆಯನ್ನು ಶೆಹನಾಜ್ ಗಿಲ್ ಹೇಳಿಕೊಂಡಿದ್ದಾರೆ.

ಅವತ್ತು ಸಂತಾನೋತ್ಪತ್ತಿ (Reproduction System) ಬಗ್ಗೆ ಪಾಠ ನಡೆಯುತ್ತಿತ್ತು. ಪಾಠ ಆದ ನಂತರ ನಾನು ಕೇಳಿದೆ : ” ಮ್ಯಾಡಂ, ನಾವು ಪ್ರಾಕ್ಟಿಕಲ್ ಮಾಡೋಣವೇ ?” ಎಂದು ಶೆಹನಾಜ್ ಹೇಳಿದ್ದಾಳೆ.

”ನಾನು ಆಗ ತರಗತಿಯಲ್ಲಿ ನಿಜವಾಗಿಯೂ ಆನಂದಿಸುತ್ತಿದ್ದೆ. ನಾನು ವಿಜ್ಞಾನದಲ್ಲಿ, ಇದನ್ನು- ಜೀವಶಾಸ್ತ್ರವನ್ನು ತುಂಬಾ ಇಷ್ಟ ಪಡುತ್ತಿದ್ದೆ. ಜೀವಶಾಸ್ತ್ರದಲ್ಲೂ, ಸಂತಾನೋತ್ಪತ್ತಿಯ ವಿಷಯ ಬಂದಾಗಲಂತೂ ನಾನು ಬಹಳ ಅಲರ್ಟ್ ಆಗಿ ಕುಳಿಕೊಳ್ಳುತ್ತಿದ್ದೆ ” ಎಂದು ಶೆಹನಾಜ್ ಹೇಳಿದ್ದಾಳೆ. “ಮೇಡಂ ಪಾಠ ಮಾಡುತ್ತಿದ್ದರು ಮತ್ತು ನಾನು ಮೇಡಂನನ್ನು ಕೇಳಿದೆ, ‘ಮೇಡಂ ನಾವು ಪ್ರಾಕ್ಟಿಕಲ್ ಮಾಡಬಹುದೇ?’ ಆಗ ಮ್ಯಾಡಮ್, ‘ ಶಟ್ ಅಪ್ ‘ ಎಂದಿದ್ದರು. ನಾನಾಗ ‘ನಿಮ್ಮಿಷ್ಟ’ ಅಂದು ಸುಮ್ಮನಾಗಿದ್ದೆ. ಜೀವನದಲ್ಲಿ ಎಲ್ಲವನ್ನೂ ಸುಲಭವಾಗಿ ತೆಗೆದುಕೊಳ್ಳುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ ” ಎಂದು ಶೆಹನಾಜ್ ಗಿಲ್ ಹೇಳಿದ್ದಾಳೆ.

ಲೈಂಗಿಕ ಶಿಕ್ಷಣದ ವಿಷಯಕ್ಕೆ ಬಂದಾಗ ಶೆಹ್ನಾಜ್ ಅವರ ಶಿಕ್ಷಕರ ಪ್ರತಿಕ್ರಿಯೆಯು ಶಾಲೆಗಳಲ್ಲಿ ಬದಲಾಗಬೇಕಾದದ್ದು ಇದೆ ಎಂದು ರಾಕುಲ್ ಪ್ರೀತ್ ಮನೆಯಲ್ಲಿ ಮತ್ತು ಶಾಲೆಗಳಲ್ಲಿ ಆರೋಗ್ಯಕರ ಸಂಭಾಷಣೆಯನ್ನು ಮಾಡುವ ಅಗತ್ಯವನ್ನು ನಟಿ ಒತ್ತಿ ಹೇಳಿದ್ದಳು.
ನಿಮ್ಮ ಶಿಕ್ಷಕರು ಶಾಟ್ ಅಪ್ ಎಂದು ಹೇಳುವ ಬದಲು “ಇದು ನಿಮ್ಮ ಜ್ಞಾನಕ್ಕಾಗಿ” ಎಂದು ಹೇಳಿದ್ದರೆ,ಅದು ಚೆನ್ನಾಗಿರುತ್ತಿತ್ತು. ನಮ್ಮ ಶಿಕ್ಷಕರುಗಳು ಪಾಠ ಮಾಡುವ ಮತ್ತು ಪ್ರತಿಕ್ರಿಯಿಸುವ ವಿಧಾನವು ಬದಲಾದಾಗ ಸಮಾಜವು ಎಲ್ಲೋ ಬದಲಾಗುತ್ತದೆ ಮತ್ತು ನಾವು ಮನೆಯಲ್ಲಿ ಇಂತಹದನ್ನು ಹೇಗೆ ಹ್ಯಾಂಡಲ್ ಮಾಡುತ್ತೇವೆ ಎನ್ನುವುದರ ಮೇಲೆ ನಮ್ಮ ಈ ಬದಲಾವಣೆ ನಿಂತಿದೆ ನಾನು ಭಾವಿಸುತ್ತೇನೆ ಎಂದು ರಾಕುಲ್ ಹೇಳಿದ್ದಾಳೆ.

ಈಕೆಯ ಮಾತಿಗೆ ಓದುಗರು- ನೋಡುಗರು ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದಾರೆ. ” ನೀನು ಪ್ರಾಕ್ಟಿಕಲ್ ಮಾಡೋಣವೇ ಅಂದ ಕೂಡಲೇ, ಸರಿ ಬಾ ಮಾಡುವ ಅನ್ನಬೇಕಿತ್ತೇ ? ಮೊದಲೇ ಸಸಾರ ಕೊಟ್ಟರೆ ಸೊಂಟ ಭುಜ ಹತ್ತಿ ಕೂರುವ ನಿನ್ನಂಥ ವಿದ್ಯಾರ್ಥಿಗಳಿರುವಾಗ, ಎಲ್ಲಿ ಹೇಗೆ ಮಾತಾಡಬೇಕೆಂದು ಶಿಕ್ಷಕರಿಗೆ ಗೊತ್ತು. ಶಿಕ್ಷಕರಿಗೆ ಪಾಠ ಮಾಡಲು ನಿಂಗೆ ಅರ್ಹತೆಯಿಲ್ಲ ” ಅಂದಿದ್ದಾರೆ ಒಬ್ಬರು ಕಟುವಾಗಿ.

Leave A Reply

Your email address will not be published.