ಕಾಂತಾರದ ಗುರುವನಿಗೆ ದೊರೆಯಿತು ಮತ್ತೊಂದು ಅತ್ಯದ್ಭುತ ಸಿನಿಮಾ ! ಹೆಚ್ಚಿನ ವಿವರ ಇಲ್ಲಿದೆ

ನೂರಾರು ಕನಸು ಹೊತ್ತು ಬಣ್ಣದ ಲೋಕಕ್ಕೆ ಕಾಲಿಟ್ಟ ಅದೆಷ್ಟೋ ಪ್ರತಿಭೆಗಳು ಚಿತ್ರರಂಗದಲ್ಲಿ ಮಿಂಚಿದ್ದಾರೆ. ಅದರಲ್ಲಿ ರಾತ್ರೋ ರಾತ್ರಿ ಫೇಮಸ್ ಆಗಿ ನೇಮ್ ಪಡೆದುಕೊಂಡವರು ಇದ್ದಾರೆ. ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಒಂದೇ ಬಾರಿ ಯಶಸ್ಸು ಸಿಗುತ್ತದೆ ಎನ್ನಲಾಗದು. ಇತ್ತೀಚಿನ ದಿನಗಳಲ್ಲಿ ಎಲ್ಲೆಡೆ ಅಬ್ಬರಿಸಿದ ಕಾಂತಾರ ಸಿನಿಮಾದ ಪ್ರತಿ ಪಾತ್ರಗಳು ಅಭಿಮಾನಿಗಳ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ರಿಷಬ್ ಶೆಟ್ಟಿ ಅವರ ದೈವದ ಪಾತ್ರಕ್ಕೆ ಜನ ಹೇಗೆ ಮೂಕ ವಿಸ್ಮಿತ ರಾಗಿದ್ದರೊ ಹಾಗೆ ಕಾಂತಾರ ಸಿನಿಮಾದ ಗುರುವ ಪಾತ್ರವನ್ನು ಯಾರು ಮರೆಯಲು ಸಾಧ್ಯವೇ ಇಲ್ಲ. ಅಷ್ಟರಮಟ್ಟಿಗೆ ತಮ್ಮ ನಟನೆಯ ಮೂಲಕ ನೋಡುಗರ ಮನಸೆಳೆಯುವಂತೆ ನಟಿಸಿದ್ದಾರೆ.

ತಮಿಳಿನ ‘ಅರ್ಧನಾರಿ’ ಚಿತ್ರದ ಮೂಲಕ ಸ್ವರಾಜ್‌ ಶೆಟ್ಟಿ, ಮೊದಲು ಚಿತ್ರರಂಗಕ್ಕೆ ಕಾಲಿಟ್ಟು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಬಳಿಕ 2-3 ಸಿನಿಮಾಗಳಲ್ಲಿ ನಟಿಸುವ ಅವಕಾಶ ದೊರೆತರೂ ಕೂಡ ದೊಡ್ಡ ಮಟ್ಟದ ಯಶಸ್ಸು ಸಿಗಲಿಲ್ಲ. ಹೀಗಾಗಿ ನಟನೆಯ ಮೂಲಕ ಸೈ ಎನಿಸಿಕೊಳ್ಳುವ ದೆಸೆಯಲ್ಲಿ ‘ಕಲಾಸಂಗಮ’ ಎಂಬ ನಾಟಕ ತಂಡಕ್ಕೆ ಸೇರ್ಪಡೆಯಾದರು. ಈ ಬಳಿಕ ಸ್ವರಾಜ್ ಶೆಟ್ಟಿ ಅವರಿಗೆ ಅವಕಾಶದ ಬಾಗಿಲು ತೆರೆದುಕೊಂಡಿತ್ತು. ಹೀಗಾಗಿ ವಿವಿಧ ರಾಜ್ಯಗಳಲ್ಲಿ ಸುಮಾರು 450 ನಾಟಕ ಪ್ರದರ್ಶನದಲ್ಲಿ ಭಾಗವಹಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ.

ಸ್ವರಾಜ್‌ ಶೆಟ್ಟಿ ಮೂಲತ: ರಂಗಭೂಮಿ ಕಲಾವಿದರಾಗಿದ್ದು, ‘ಕಾಂತಾರ’ ಸಿನಿಮಾದ ಮೂಲಕ ಮಂಗಳೂರಿನ ಪ್ರತಿಭೆಯ ನಟನೆ ಜಗಜ್ಜಾಹೀರಾಗಿದೆ. ‘ಕಾಂತಾರ’ ಚಿತ್ರದಲ್ಲಿ ಸ್ವರಾಜ್‌ ಶೆಟ್ಟಿ ಅವರ ದೈವ ನರ್ತಕ ಗುರುವ ಪಾತ್ರ ನೋಡುಗರ ಮನದಲ್ಲಿ ಮನೆ ಮಾಡಿದೆ. ಪಾತ್ರ ಚಿಕ್ಕದಾದರೂ ‘ಕಾಂತಾರ’ ಸಿನಿಮಾ ಸ್ವರಾಜ್‌ಗೆ ಒಂದೊಳ್ಳೆ ಬ್ರೇಕ್‌ ನೀಡಿದೆ ಎಂದರು ತಪ್ಪಾಗದು.

‘ಬರ್ಕೆ’ ಎಂಬ ತುಳು ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಬಂದ ಸ್ವರಾಜ್‌ ಶೆಟ್ಟಿ, ರಾಜ್‌ ಬಿ. ಶೆಟ್ಟಿ ಅವರ ‘ಫೈವ್‌ ಲೆಟರ್ಸ್’ ಎಂಬ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಈ ಕಿರುಚಿತ್ರಕ್ಕೆ ಮೂರು ಬಾರಿ ಬೆಸ್ಟ್‌ ಅವಾರ್ಡ್‌ ಅನ್ನು ಕೂಡ ಬಾಚಿಕೊಂಡಿದ್ದಾರೆ. ಈ ಸಿನಿಮಾದ ಬಳಿಕ ‘ಹುಚ್ಚ 2’, ‘ಒಂದು ಮೊಟ್ಟೆಯ ಕಥೆ’ ಸಿನಿಮಾಗಳಲ್ಲಿ ಸ್ವರಾಜ್‌ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ‘

‘ಕಾಂತಾರ’ ಸಿನಿಮಾ ಸ್ವರಾಜ್‌ಗೆ ಅವರನ್ನು ಜನ ಗುರುತಿಸುವಂತೆ ಮಾಡಿದ್ದು, ಈ ನಡುವೆ ಸ್ವರಾಜ್‌ ಶೆಟ್ಟಿ ತಂಡವೊಂದನ್ನು ಕಟ್ಟಿಕೊಂಡು ‘ಮ್ಯಾಕ್ಸ್‌ ಕ್ರಿಯೇಷನ್ಸ್‌’ ಎಂಬ ಸಿನಿಮಾ ಪ್ರೊಡಕ್ಷನ್‌ ಹೌಸ್‌ ಆರಂಭಿಸಿದ್ದಾರೆ. ‘ಕಾಂತಾರ’ ದಲ್ಲಿ ನಟಿಸುವ ಮುನ್ನವೇ ಈ ಪ್ರೊಡಕ್ಷನ್‌ ಹೌಸ್‌ ಯೋಜನೆ ರೂಪಿಸಿದ್ದು, ಆದರೆ ಅದಕ್ಕೆ ಈಗ ಕಾಲ ಕೂಡಿ ಬಂದಿದೆ ಎಂದು ಸ್ವರಾಜ್‌ ಶೆಟ್ಟಿ ಇತ್ತೀಚಿನ ಸಂದರ್ಶನ ವೊಂದರಲ್ಲಿ ಹೇಳಿಕೊಂಡಿದ್ದಾರೆ.

ತಮ್ಮ ಮ್ಯಾಕ್ಸ್‌ ಕ್ರಿಯೇಷನ್ಸ್‌ ಬ್ಯಾನರ್‌ ಅಡಿ ತಯಾರಾಗುತ್ತಿರುವ ಹೆಸರಿಡದ ಸಿನಿಮಾದಲ್ಲಿ ಸ್ವರಾಜ್‌ ಶೆಟ್ಟಿ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ ಎನ್ನಲಾಗಿದೆ. ಕಾಪ್‌ ಪಾತ್ರದಲ್ಲಿ ನಟಿಸುವುದು ಅವರ ಹೆಬ್ಬಯಕೆ ಆಗಿತ್ತು. ಮುಂದಿನ ದಿನಗಳಲ್ಲಿ ತಮ್ಮ ಮ್ಯಾಕ್ಸ್‌ ಕ್ರಿಯೇಷನ್ಸ್‌ ಬ್ಯಾನರ್‌ನಿಂದ ಸಿನಿಮಾಗಳನ್ನು ನಿರ್ಮಿಸುವ ಪ್ಲಾನ್‌ ಇದೆ ಎಂದು ಸ್ವರಾಜ್‌ ಶೆಟ್ಟಿ ಮಾಧ್ಯಮ ವೊಂದರಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಸ್ವರಾಜ್‌ ಶೆಟ್ಟಿ ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ‘ವೀರ ಕಂಬಳ’, (ತುಳುವಿನಲ್ಲಿ ‘ಬಿರ್ದದ ಕಂಬುಲ’ ) ಚಿತ್ರದಲ್ಲಿ ನಟಿಸುವಲ್ಲಿ ಬಿಝಿಯಾಗಿದ್ದಾರೆ.

Leave A Reply

Your email address will not be published.