ಕಲರ್ ಹಚ್ಚದೆ ನ್ಯಾಚುರಲ್ ಆಗಿ ಕೂದಲು ಕಪ್ಪಾಗಿಸಲು ಇಲ್ಲಿದೆ ಸುಲಭ ಉಪಾಯ

ಇತ್ತೀಚಿಗೆ ನಾವು ಅನುಸರಿಸುವ ಕೆಟ್ಟ ಆಹಾರ ಪದ್ದತಿಯಿಂದಾಗಿಯೇ ಹಲವಾರು ಸಮಸ್ಯೆ ಅನುಭವಿಸುತ್ತಿದ್ದೇವೆ. ಜೊತೆಗೆ ಕೂದಲು ಉದುರುವುದು, ಕಿರಿ ವಯಸ್ಸಿನಲ್ಲಿ ಕೂದಲು ಬೆಳ್ಳಗಾಗುವುದು, ಶುಷ್ಕ ಕೂದಲು, ತಲೆ ಹೊಟ್ಟು ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗಿದೆ.

ಪ್ರಾಚೀನ ಕಾಲದಲ್ಲಿ ಬಿಳಿ ಕೂದಲು ಬೆಳೆಯುತ್ತಿರುವ ವಯಸ್ಸಿನ ಸಂಕೇತವೆಂದು ಪರಿಗಣಿಸಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇದು ವಯಸ್ಸಿನೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಎಲ್ಲಾ ವಯಸ್ಸಿನ ಜನರು ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ನೀವು ಗಾಬರಿ ಪಡುವ ಅಗತ್ಯವಿಲ್ಲ ಸುಲಭವಾದ ಮನೆಮದ್ದು ಮೂಲಕ ಕಪ್ಪು ಕೂದಲನ್ನು ಮತ್ತೆ ಮರಳಿ ಪಡೆಯಬಹುದಾಗಿದೆ.

ಈ ಸಮಸ್ಯೆಯ ಪರಿಹಾರಕ್ಕಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಶಾಂಪೂ, ಕಂಡಿಷನರ್, ಎಣ್ಣೆ, ಹೇರ್ ಕಲರ್ ಮೊರೆ ಹೋಗುತ್ತವೆ. ಇವುಗಳಲ್ಲಿ ಕೆಲವು ತಕ್ಷಣಕ್ಕೆ ಸಮಸ್ಯೆಗೆ ಪರಿಹಾರ ನೀಡಬಹುದು. ಆದರೆ ಇದು ತಾತ್ಕಾಲಿಕ ಪರಿಹಾರವಷ್ಟೇ. ಅಲ್ಲದೆ, ಇವುಗಳಲ್ಲಿ ಅಪಾರ ಪ್ರಮಾಣದ ರಾಸಾಯನಿಕಗಳನ್ನು ಬಳಸಿರುತ್ತಾರೆ. ಹಾಗಾಗಿ ಇದು ಕೂದಲಿನ ಮೇಲೆ ಅಡ್ಡ ಪರಿಣಾಮವನ್ನು ಕೂಡಾ ಬೀರುತ್ತದೆ. ಆದರೆ ಇಲ್ಲಿ ಮನೆಮದ್ದಿನ ಮೂಲಕ ಸಮಸ್ಯೆಗೆ ನೈಸರ್ಗಿಕ ಪರಿಹಾರ ತಿಳಿಸಲಾಗಿದೆ.

DAILY PRIZE DRAW
23:59:59
Daily Prize
Enter Now and Earn $50
View this ad to enter today's drawing
1,453 entries today
  • ಕರಿಬೇವಿನ ಎಲೆಗಳನ್ನು ಬಳಸುವುದರಿಂದ ಕೂದಲು ಹೊಳೆಯುತ್ತದೆ ಮತ್ತು ಮೃದುವಾಗುತ್ತದೆ. ಮಾತ್ರವಲ್ಲ ಕಳೆದು ಹೋದ ಕಪ್ಪು ಬಣ್ಣವನ್ನು ಮತ್ತೆ ಮರಳಿಸುತ್ತದೆ. ಮೆಲನಿನ್ ಕೊರತೆಯಿಂದಾಗಿ ಕೂದಲು ಬಿಳಿಯಾಗುತ್ತವೆ. ಕರಿಬೇವಿನ ಎಲೆಗಳು ಕೂದಲಿನಲ್ಲಿರುವ ಮೆಲನಿನ್ ಕೊರತೆಯನ್ನು ಹೋಗಲಾಡಿಸುತ್ತದೆ.

ಕರಿಬೇವಿನ ಎಲೆಗಳನ್ನು ಬಳಸಿ ಹೇರ್ ಮಾಸ್ಕ್ ತಯಾರಿಸಿವುದು ಇಲ್ಲಿ ತಿಳಿಸಲಾಗಿದೆ.
ಹೇರ್ ಮಾಸ್ಕ್ ಮಾಡಲು ಬೇಕಾಗುವ ಸಾಮಗ್ರಿಗಳು :

  • ಕರಿಬೇವಿನ ಎಲೆಗಳು
  • ತೆಂಗಿನ ಎಣ್ಣೆ
  • ಬೇವಿನ ಎಲೆಗಳು
  • ವಿಟಮಿನ್ ಇ ಕ್ಯಾಪ್ಸುಲ್ ಗಳು
  • ಮೊಸರು

ಕರಿಬೇವಿನ ಹೇರ್ ಮಾಸ್ಕ್ ಮಾಡುವ ವಿಧಾನ :

  • ಹೇರ್ ಮಾಸ್ಕ್ ಮಾಡಲು ಕರಿಬೇವು ಮತ್ತು ಬೇವಿನ ಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿಟ್ಟುಕೊಳ್ಳಿ.
  • ನಂತರ ಇನ್ನೊಂದು ಪಾತ್ರೆಯಲ್ಲಿ ತೆಂಗಿನೆಣ್ಣೆ, ವಿಟಮಿನ್ ಇ ಕ್ಯಾಪ್ಸುಲ್ ಮತ್ತು ಮೊಸರು ಹಾಕಿ ಸರಿಯಾಗಿ ಬೀಟ್ ಮಾಡಿಕೊಳ್ಳಿ.
  • ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿ.
  • ಅದು ತಣ್ಣಗಾದ ನಂತರ ಕರಿಬೇವಿನ ಸೊಪ್ಪು ಮತ್ತು ಬೇವಿನ ಸೊಪ್ಪಿನ ಮಿಶ್ರಣವನ್ನು ಹಾಕಿ ಚೆನ್ನಾಗಿ ಕಲಸಿ. ಇಷ್ಟು ಮಾಡಿಕೊಂಡ ನಂತರ ಹೇರ್ ಮಾಸ್ಕ್ ರೆಡಿಯಾಗುತ್ತದೆ.

ತಯಾರಿಸಿದ ಹೇರ್ ಮಾಸ್ಕ್ ಅನ್ನು ಕೂದಲಿಗೆ ಹಚ್ಚುವ ಕ್ರಮ :
ಕೂದಲಿಗೆ ಹೇರ್ ಮಾಸ್ಕ್ ಅನ್ನು ಹಚ್ಚುವ ಮೊದಲು, ಕೂದಲನ್ನು ಸರಿಯಾಗಿ ತೊಳೆದು ಒಣಗಿಸಿಕೊಳ್ಳಿ. ನಂತರ ಕೂದಲು ಮತ್ತು ನೆತ್ತಿಯ ಮೇಲೆ ಹೇರ್ ಮಾಸ್ಕ್ ಅನ್ನು ಹಚ್ಚಿ. ಒಂದು ಗಂಟೆ ಹಾಗೆಯೇ ಬಿಟ್ಟು, ಕೂದಲನ್ನು ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ರೀತಿ ಮಾಡುತ್ತಾ ಬಂದರೆ ಶೀಘ್ರದಲ್ಲಿಯೇ ಪರಿಣಾಮ ಗೋಚರಿಸುತ್ತದೆ. ಬಿಳಿ ಕೂದಲು ಕಪ್ಪಾಗುತ್ತದೆ. ಬಿಳಿ ಕೂದಲಿನ ಬೆಳವಣಿಗೆ ಕೂಡಾ ನಿಲ್ಲುತ್ತದೆ.

ಹೌದು ನೀವು ಈ ಮೇಲಿನಂತೆ ಸುಲಭವಾಗಿ ಕರಿಬೇವಿನ ಹೇರ್ ಮಾಸ್ಕ್ ತಯಾರಿಸಿ ಸರಿಯಾದ ಕ್ರಮದಲ್ಲಿ ಹಚ್ಚಿದರೆ ನೀವು ಕಪ್ಪಗಿನ ಕೂದಲಿನ ಜೊತೆಗೆ ಯವ್ವನ ಕಾಪಾಡಿಕೊಳ್ಳಬಹುದು.

Leave A Reply

Your email address will not be published.