ಇಂದು ಸಿದ್ದಗಂಗಾ ಶ್ರೀಗಳ 4ನೇ ಪುಣ್ಮಸ್ಮರಣೆ : ಬೆಳಗ್ಗೆ 5 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ಆರಂಭ

Share the Article

ತುಮಕೂರು:  ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಮಹಾಶಿವಯೋಗಿ ಸಿದ್ದಗಂಗಾ ಮಠ  ದ ಲಿಂಗೈಕ್ಯ ಡಾ.ಶಿವಕುಮಾರ ಶ್ರೀಗಳ  4ನೇ ಪುಣ್ಯ ಸ್ಮರಣೆಯನ್ನು ಕಳೆದೆರಡು ವರ್ಷಗಳ ಬಳಿ  ಇಂದು ತುಮಕೂರು ಮಠದಲ್ಲಿ ಬಹಳ ವಿಜೃಂಭಣೆಯಿಂದ  ಸಿದ್ಧತೆ ಮಾಡಲಾಗಿದೆ.

ಪೂಜ್ಯರ ಗದ್ದುಗೆಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಮುಂಜಾನೆ 5 ಗಂಟೆಯಿಂದ ಮಹಾರುದ್ರಾಭಿಷೇಕ ಮತ್ತು ರಾಜೋಪಚಾರ, ಬಿಲ್ವಾರ್ಚನೆ ಹಾಗೂ ಇತರೆ ವಿಶೇಷ ಪೂಜಾ ಕೈಂಕರ್ಯಗಳು ಜರುಗುತ್ತಿವೆ

ಬೆಳಗ್ಗೆ 8ಕ್ಕೆ ಬೆಳ್ಳಿರಥದಲ್ಲಿ ಶಿವಕುಮಾರ ಶ್ರೀಗಳ ಪುತ್ಥಳಿಯನ್ನಿಟ್ಟು ಮೆರವಣಿಗೆ ಮಾಡಲಾಗುತ್ತದೆ. ಬೆಳಗ್ಗೆ 10ಕ್ಕೆ ವೇದಿಕೆ ಕಾರ್ಯಕ್ರಮವನ್ನು ಮಾಜಿ ಸಿಎಂ ಬಿಎಸ್‍ವೈ ಉದ್ಘಾಟಿಸಲಿದ್ದು, ಸಿಎಂ ಬೊಮ್ಮಾಯಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪರಮಪೂಜ್ಯ ಶ್ರೀ ಸಿದ್ದಲಿಂಗ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮಠಕ್ಕೆ ಲಕ್ಷಕ್ಕೂ ಹೆಚ್ಚು ಭಕ್ತಗಣ, ಅಭಿಮಾನಿಗಳು, ಹಳೆ ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಇದೆ.

Leave A Reply