ಪಂಜ : ಕೆಲಸಕ್ಕೆಂದು ಮನೆಯಿಂದ ಹೋಗಿದ್ದ ವ್ಯಕ್ತಿ ಬಾವಿಯಲ್ಲಿ ಶವವಾಗಿ ಪತ್ತೆ

ಕಡಬ : ಕೆಲಸಕ್ಕೆಂದು ಮನೆಯಿಂದ ಹೋಗಿದ್ದ ವ್ಯಕ್ತಿಯೊಬ್ಬರು ಪಂಜ ಸಮೀಪದ ಬಾವಿಯಲ್ಲಿ ಶವವಾಗಿ ಪತ್ತೆಯಾದ ಘಟನೆ ವರದಿಯಾಗಿದೆ.

ಪಂಜದ ಪಂಬೆತ್ತಾಡಿ ಗ್ರಾಮದ ಪೆರ್ಮಾಜೆ ನಾರಾಯಣ ನಾಯ್ಕ ಶವವಾಗಿ ಪತ್ತೆಯಾದ ವ್ಯಕ್ತಿ.

ಜನವರಿ 16 ರಂದು ಮುಂಜಾನೆ ಮನೆಯಿಂದ ಕೆಲಸಕ್ಕೆಂದು ತೆರಳಿದ್ದರು. ಬಳಿಕ ಅವರು ಮನೆಗೆ ಬಾರದಿದ್ದುದರಿಂದ ಮನೆಯವರು ಹುಟುಕಾಟ ನಡೆಸಿದ್ದರು ಎನ್ನಲಾಗಿದೆ. ಜ.19 ಕೂತ್ಕುಂಜ ಗ್ರಾಮದ ಸಂಪ ಎಂಬಲ್ಲಿ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಮನೆಯವರು ‍ಸ್ಥಳಕ್ಕೆ ಆಗಮಿಸಿ ಮೃತ ದೇಹ ಖಚಿತ ಪಡಿಸಿ ಸುಬ್ರಹ್ಮಣ್ಯ ಪೋಲೀಸ್ ಠಾಣೆಗೆ ತೆರಳಿರುವುದಾಗಿ ತಿಳಿದು ಬಂದಿದೆ ಸಾವಿನ ಕುರಿತು ಪೋಲೀಸ್ ತನಿಖೆ ನಂತರ ಸ್ಪಷ್ಟ ಮಾಹಿತಿ ದೊರಕಲಿದೆ.

Leave A Reply

Your email address will not be published.