Hair Tips: ಒಣ ಕೂದಲಿನ ಸಮಸ್ಯೆಗೆ ಈ ಮನೆಮದ್ದು ಟ್ರೈ ಮಾಡಿ

ಕೂದಲಿಗೆ ಚರ್ಮದಂತೆ ಸಾಕಷ್ಟು ತೇವಾಂಶ ಅವಶ್ಯವಾಗಿ ಬೇಕಿದೆ. ಈ ತೇವಾಂಶ ಕೂದಲು ಒಣಗದಂತೆ ತಡೆಯುತ್ತದೆ. ನಾವು ಹೆಚ್ಚಾಗಿ ಕೂದಲಿಗೆ ತೆಂಗಿನ ಎಣ್ಣೆಯನ್ನು ಹಚ್ಚುತ್ತೇವೆ. ಇದು ಕೂದಲನ್ನು ಹೈಡ್ರೇಟ್ ಮಾಡುತ್ತದೆ. ಈ ತೆಂಗಿನ ಎಣ್ಣೆಯ ಜೊತೆಗೆ ಮನೆಯಲ್ಲಿನ ಹಲವು ಪದಾರ್ಥಗಳನ್ನು ಉಪಯೋಗಿಸಿ ಮನೆಮದ್ದು ತಯಾರಿಸಬಹುದು. ಇದು ನೈಸರ್ಗಿಕವಾಗಿದ್ದು, ಇದರ ಬಳಕೆಯಿಂದ ಕೂದಲ ಬೆಳವಣಿಗೆ ಉತ್ತಮವಾಗುತ್ತದೆ.

ತೇವಾಂಶವನ್ನು ಉಳಿಸಿಕೊಳ್ಳಲು ಮತ್ತು ಕೂದಲನ್ನು ಪೋಷಿಸಲು ಕೂದಲಿಗೆ ಎಣ್ಣೆ ಹಚ್ಚುವುದು ಬಹಳ ಅವಶ್ಯಕ. ಇದು ಕೂದಲನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಅಲ್ಲದೆ, ಕೂದಲಿಗೆ ನೈಸರ್ಗಿಕ ಎಣ್ಣೆಯನ್ನು ಮಾತ್ರ ಬಳಸಿ. ನೀವು ಸಾಸಿವೆ ಎಣ್ಣೆ, ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಹಚ್ಚಬಹುದು. ಇನ್ನೂ, ಒಣ ಕೂದಲನ್ನು ಹೋಗಲಾಡಿಸಲು ಇಲ್ಲಿದೆ ಮನೆಮದ್ದು. ಈ ವಿಧಾನವನ್ನು ಅನುಸರಿಸಿ, ಮನೆಮದ್ದು ತಯಾರಿಸಿ.

ಮೊಟ್ಟೆ :

ಮೊಟ್ಟೆ ಕೂದಲನ್ನು ತೇವಗೊಳಿಸುತ್ತದೆ. ಅಲ್ಲದೆ, ಕೂದಲ ಹಲವು ಸಮಸ್ಯೆಗಳನ್ನು ಪರಿಹರಿಸುತ್ತದೆ. ಇದರಲ್ಲಿ ಪ್ರೋಟೀನ್ ಮತ್ತು ಬಯೋಟಿನ್ ಸಮೃದ್ಧವಾಗಿದ್ದು, ನೆತ್ತಿ ಮತ್ತು ಕೂದಲಿಗೆ ಅಗತ್ಯವಾದ ಪೋಷಣೆಯನ್ನು ನೀಡುತ್ತದೆ. ಅಲ್ಲದೆ, ಕೂದಲ ಬೆಳವಣಿಗೆಗೆ ಸಹಕಾರಿಯಾಗಿದೆ. ಹಾಗೂ ಕೂದಲಿನ ಬಲವನ್ನು ಕೂಡ ಹೆಚ್ಚಿಸುತ್ತದೆ. ಇನ್ನೂ, ಮೊಟ್ಟೆ ಕೂದಲಿಗೆ ಹೇಗೆ ಸಹಕಾರಿಯಾಗಿದೆ. ಇದನ್ನು ಹೇಗೆ ಕೂದಲಿಗೆ ಹಚ್ಚಬೇಕು ಎಂಬ ಮಾಹಿತಿ ಇಲ್ಲಿದೆ.

ವಿಧಾನ : 2 ಮೊಟ್ಟೆಗಳನ್ನು ತೆಗೆದುಕೊಂಡು ಅದನ್ನು ಬೌಲ್‌ನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ. ಈಗ ಅದನ್ನು ಕೂದಲು ಮತ್ತು ಬೇರುಗಳಿಗೆ ಅನ್ವಯಿಸಿ. ಸುಮಾರು 15 ನಿಮಿಷಗಳ ನಂತರ ನಿಮ್ಮ ತಲೆಯನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ವಾರಕ್ಕೆ 2-3 ಬಾರಿ ಹೀಗೆ ಮಾಡಿದರೆ ಸಾಕು.

ಅಲೋವೆರಾ :

ಅಲೋವೆರಾ ಕೂದಲಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ. ಅಲ್ಲದೆ, ಚರ್ಮಕ್ಕೂ ಇದು ಉಪಯುಕ್ತವಾಗಿದೆ. ಅಲೋವೆರಾ ಜೆಲ್ ನಲ್ಲಿ ಆರ್ಧ್ರಕ ಗುಣ ಕಂಡುಬರುತ್ತದೆ. ಇದು ಕೂದಲಿಗೆ ಹೊಳಪನ್ನು ನೀಡುತ್ತದೆ. ಇಷ್ಟೆಲ್ಲಾ ಪ್ರಯೋಜನ ಪಡೆಯೋದು ಹೇಗೆ? ಇಲ್ಲಿದೆ ಅಲೋವೆರಾ ಜೆಲ್ ಅನ್ನು ಬಳಸುವ ವಿಧಾನ.

ವಿಧಾನ: ಅಲೋವೆರಾ ಜೆಲ್ ಅನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಳ್ಳಿ. ನಂತರ ಅದನ್ನು ನಿಮ್ಮ ನೆತ್ತಿ ಮತ್ತು ಕೂದಲ ಮೇಲೆ ಹಚ್ಚಿರಿ. ಇದಾದ ಅರ್ಧ ಘಂಟೆಯ ನಂತರ ಕೂದಲನ್ನು ನೀರಿನಿಂದ ತೊಳೆಯಿರಿ. ನಂತರ ಗಮನಿಸಿ ನಿಮ್ಮ ಕೂದಲು ಹೊಳೆಯುತ್ತದೆ.

ನೆಲ್ಲಿಕಾಯಿ :

ಇದು ಕೇವಲ ಆರೋಗ್ಯಕ್ಕೆ ಮಾತ್ರವಲ್ಲದೆ, ಚರ್ಮ ಹಾಗೂ ಕೂದಲಿನ ಆರೈಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನೆಲ್ಲಿಕಾಯಿಯನ್ನು ಕೂದಲಿನ ಆರೈಕೆಯಲ್ಲಿ ಪ್ರಮುಖವಾಗಿ ಬಳಸಿಕೊಳ್ಳಬಹುದು.
ಇದು ಕೂದಲಿಗೆ ಎಲ್ಲಾ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.
ನೆಲ್ಲಿಕಾಯಿಯನ್ನು ಕೂದಲಿಗೆ ಬಳಸುವುದು ಹೇಗೆ ಎಂಬುದು ಇಲ್ಲಿದೆ.

ವಿಧಾನ : ಒಂದು ಬಟ್ಟಲಿನಲ್ಲಿ ನೆಲ್ಲಿಕಾಯಿ ಪುಡಿ ಮತ್ತು ಮೊಸರನ್ನು ಮಿಶ್ರಣ ಮಾಡಿ. ನಂತರ ಈ ಪೇಸ್ಟ್ ಅನ್ನು ಕೂದಲು ಮತ್ತು ಅದರ ಬೇರುಗಳಿಗೆ ಅನ್ವಯಿಸಿ. ಇದು ಕೂದಲಿಗೆ ತೇವಾಂಶ ಮತ್ತು ಪೋಷಣೆಯನ್ನು ನೀಡುತ್ತದೆ.

ಮೊಸರು :

ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಸಮೃದ್ಧ ಮೂಲ ಈ ಮೊಸರು. ಇದರಲ್ಲಿ ವಿಟಮಿನ್ ಎ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಅಂಶಗಳು ಹೆಚ್ಚಿವೆ. ಇವೆಲ್ಲವೂ ಕೂದಲಿನ ಆರೋಗ್ಯವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ, ಕೂದಲಿನ ತೇವಾಂಶವನ್ನು ಕೂಡ ಕಾಪಾಡುತ್ತದೆ. ಮೊಸರನ್ನು ಕೂದಲಿಗೆ ಯಾವ ರೀತಿ ಹಚ್ಚಬೇಕು ಎಂಬುದು ಇಲ್ಲಿ ನೀಡಲಾಗಿದೆ.

ವಿಧಾನ : ಒಂದು ಬಟ್ಟಲಿನಲ್ಲಿ ಮೊಸರನ್ನು ತೆಗೆದುಕೊಳ್ಳಿ. ನಂತರ ಅದನ್ನು ನೆತ್ತಿಯ ಮೇಲೆ ಹಚ್ಚಿ. 20 ನಿಮಿಷಗಳ ನಂತರ ಶಾಂಪೂ ಹಾಕಿ ಕೂದಲನ್ನು ತೊಳೆಯಿರಿ. ನೀವು ವಾರದಲ್ಲಿ 3 ಬಾರಿ ಈ ವಿಧಾನವನ್ನು ಅನುಸರಿಸಿದರೆ ಒಣ ಕೂದಲನ್ನು ದೂರಮಾಡಬಹುದು.

Leave A Reply

Your email address will not be published.