ಈ ಬ್ಲಡ್‌ ಗ್ರೂಪ್‌ನವರ ರಕ್ತ ಚಿನ್ನಕ್ಕಿಂತಲೂ ದುಬಾರಿ | ಜಗತ್ತಿನಲ್ಲಿ ಕೇವಲ 45 ಮಂದಿಯಲ್ಲಿದೆ ಈ ರಕ್ತದ ಮಾದರಿ!!!

ಮಾನವನ ದೇಹವೇ ಒಂದು ವಿಸ್ಮಯ. ರಚನೆ, ಅಂಗಾಂಗಗಳ ಕಾರ್ಯ ಎಂಥವರಲ್ಲೂ ಬೆರಗು ಮೂಡಿಸುತ್ತದೆ. ಹಾಗೆಯೇ ರಕ್ತದಾನವನ್ನು ಮಹಾದಾನವೆಂದು ಪರಿಗಣಿಸಲಾಗಿದೆ. ರಕ್ತದ ಗುಂಪಿನ ಬಗ್ಗೆ ನಮಗೆಲ್ಲಾ ಗೊತ್ತಿದೆ. ಪ್ರಪಂಚದಲ್ಲಿ ಸಾಮಾನ್ಯವಾಗಿ 8 ವಿಧದ ರಕ್ತದ ಗುಂಪುಗಳಿದ್ದು, ಅವುಗಳಲ್ಲಿ A, B, AB ಮತ್ತು O ಸೇರಿವೆ. ಇವುಗಳನ್ನು ಧನಾತ್ಮಕ ಮತ್ತು ಋಣಾತ್ಮಕವಾಗಿ ವಿಂಗಡಿಸಬಹುದು. ಈ ಎಂಟು ರಕ್ತ ಪ್ರಕಾರಗಳ ಹೊರತಾಗಿ ನಿಮಗೆ ತಿಳಿದಿರದ ಅಪರೂಪದ ಗ್ರೂಪ್ ಒಂದಿದೆ. 8 ಶತಕೋಟಿ ಜನರಲ್ಲಿ ಕೇವಲ 45 ಜನರ ದೇಹದಲ್ಲಿ ಮಾತ್ರ ಕಂಡುಬರುವ ‘ಗೋಲ್ಡ್’ಗಿಂತಲೂ ದುಬಾರಿಯಾದ ‘ಗೋಲ್ಡನ್ ಬ್ಲಡ್’!!

ಹೌದು, Rh ಅಂಶವು ಶೂನ್ಯವಾಗಿರುವ ಜನರಲ್ಲಿ ಮಾತ್ರ ಈ ರಕ್ತದ ಗುಂಪು ಕಂಡುಬರುತ್ತದೆ. ಈ ರಕ್ತವು ಪ್ರಪಂಚದಲ್ಲಿ ಕೇವಲ 45 ಜನರ ದೇಹದಲ್ಲಿ ಹರಿಯುತ್ತದೆ. ಗೋಲ್ಡನ್ ರಕ್ತದ ಗುಂಪು ಅಥವಾ Rh ಶೂನ್ಯ ರಕ್ತದ ಗುಂಪಿನಲ್ಲಿ, ಕೆಂಪು ರಕ್ತ ಕಣದಲ್ಲಿ (RBC) ಯಾವುದೇ Rh ಆಂಟಿಜೇನ ಗಳು (ಪ್ರೋಟೀನ್) ಇರುವುದಿಲ್ಲ.

ಗ್ರೀಸ್ ದೇಶದಲ್ಲಿ ಇದನ್ನು ಚಿನ್ನದ ರಕ್ತ ಎಂದೇ ಕರೆಯಲಾಗುತ್ತದೆ. ದೇವರುಗಳ ದೇಹದಲ್ಲಿ ಮಾತ್ರ ಇದು ಹರಿಯುತ್ತದೆ ಎಂದು ನಂಬಲಾಗಿದೆ. ಆದರೆ ಈ ಚಿನ್ನದ ರಕ್ತ ಮಾನವರಿಗೆ ಹಾನಿಕಾರಕ. ಇದನ್ನು ಮೊದಲು 1961ರಲ್ಲಿ ಕಂಡುಹಿಡಿಯಲಾಯಿತು. ಆಸ್ಟ್ರೇಲಿಯಾದ ಗರ್ಭಿಣಿ ಮಹಿಳೆಯ ರಕ್ತವನ್ನು ಪರೀಕ್ಷಿಸಿದಾಗ ಅವಳಲ್ಲಿ ಈ ರಕ್ತ ಇರುವುದು ಪತ್ತೆಯಾಗಿತ್ತು. ಈ ರಕ್ತವು ಉಳಿದ ಸಾಮಾನ್ಯ ರಕ್ತದ ಗುಂಪಿನಿಂದ ಬಹಳ ಭಿನ್ನವಾಗಿದೆ, ಆದ್ದರಿಂದಲೇ ಇದನ್ನು ‘ಗೋಲ್ಡನ್ ಬ್ಲಡ್’ ಎಂದು ಕರೆಯಲಾಗುತ್ತದೆ.

ಗೋಲ್ಡನ್ ರಕ್ತದ ಗುಂಪು ಚಿಂತೆಗೀಡು ಮಾಡುವ ವಿಷಯವೆಂದರೆ ಈ ಜನರು ರಕ್ತ ವರ್ಗಾವಣೆಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವರದಿಯ ಪ್ರಕಾರ, ವಿಶ್ವಾದ್ಯಂತ ಈ ರಕ್ತದ ಗುಂಪಿನ ಸಕ್ರಿಯ ದಾನಿಗಳ ಸಂಖ್ಯೆ ಕೇವಲ 9 ಮಾತ್ರ ಇದೆ. ಈ ಕಾರಣಕ್ಕಾಗಿಯೇ ಇದು ವಿಶ್ವದಲ್ಲೇ ಅತ್ಯಂತ ಬೆಲೆಬಾಳುವ ರಕ್ತದ ಗುಂಪು ಮತ್ತು ಇದನ್ನು ಗೋಲ್ಡನ್ ಬ್ಲಡ್ ಎಂದು ಹೆಸರಿಸಲಾಗಿದೆ.

. ಈ ಗೋಲ್ಡ್ ಬ್ಲಡ್ ಆನುವಂಶಿಕ ರೂಪಾಂತರದಿಂದ ಉಂಟಾಗುತ್ತದೆ. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಾದುಹೋಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ನಿಕಟ ಸಂಬಂಧದಲ್ಲಿ ಮದುವೆಯಾದರೆ ಜನಿಸುವ ಮಕ್ಕಳು ಈ ಚಿನ್ನದ ರಕ್ತದ ಗುಂಪನ್ನು ಹೊಂದುವ ಸಾಧ್ಯತೆ ಇರುತ್ತದೆ. ಈ ರಕ್ತದ ಗುಂಪಿನ ಜನರು ರಕ್ತಹೀನತೆಯ ಅಪಾಯವನ್ನು ಹೊಂದಿರುತ್ತಾರೆ.

ಗೋಲ್ಡನ್ ಬ್ಲಡ್ ಗ್ರೂಪ್ ಹೊಂದಿರುವ ಜನರು ಕಡಿಮೆ ಹಿಮೋಗ್ಲೋಬಿನ್ ಮಟ್ಟದಿಂದ ದೇಹದಲ್ಲಿ ಹಿಮೋಲಿಟಿಕ್ ಅನೀಮಿಯಾ, ಪಲ್ಲರ್ ಮತ್ತು ಆಯಾಸವನ್ನು ಹೊಂದಿರುವ ಸಾಧ್ಯತೆ ಇದೆ. ಇಂತಹ ಪರಿಸ್ಥಿತಿಯಲ್ಲಿ, ಕಡಿಮೆ ಕೆಂಪು ರಕ್ತ ಕಣಗಳ ಅಪಾಯ ಎದುರಾಗುವ ಸಾಧ್ಯತೆ ಇದೆ. ಈ ಜನರು ರಕ್ತ ವರ್ಗಾವಣೆಯ (Blood Transfusion) ಸಮಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಜ್ಞಾನಿಗಳ ಪ್ರಕಾರ, ತಾಯಿ Rh ಶೂನ್ಯವಾಗಿದ್ದರೆ ಮತ್ತು ಮಗುವಿಗೆ Rh- ಧನಾತ್ಮಕ ರಕ್ತದ ಗುಂಪನ್ನು ಹೊಂದಿದ್ದರೆ, ನಂತರ ಗರ್ಭಪಾತದ ಅಪಾಯವು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತದೆ.

Leave A Reply

Your email address will not be published.