ಬರೋಬ್ಬರಿ 11 ದಿನಗಳ ಬಳಿಕ ಸ್ಯಾಂಟ್ರೋ ರವಿ ಅರೆಸ್ಟ್ | ಈತ ಇಷ್ಟು ದಿನ ಬಚ್ಚಿಟ್ಟುಕೊಂಡಿದೆಲ್ಲಿ? ಇಲ್ಲಿದೆ ಕಂಪ್ಲೀಟ್ ವಿವರ
ಅನೈತಿಕ ದಂಧೆಯ ಜೊತೆಗೆ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿ ಗುರುತಿಸಿಕೊಂಡಿದ್ದ ಸ್ಯಾಂಟ್ರೋ ರವಿ ಅಲಿಯಾಸ್ ಮಂಜುನಾಥ್‌ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಯಾಂಟ್ರೋ ರವಿ ವಿರುದ್ದ ಆಕೆಯ ಪತ್ನಿ ದೂರು ನೀಡಿದ ಬಳಿಕ ರವಿ ನಾಪತ್ತೆಯಾಗಿದ್ದ ಎನ್ನಲಾಗಿದ್ದು, ಆತನ ಪತ್ತೆಗಾಗಿ ಖಾಕಿ ಪಡೆ ನಾಲ್ಕು ವಿಶೇಷ ಪೋಲಿಸ್ ತಂಡಗಳನ್ನು ರಚನೆ ಮಾಡಲಾಗಿತ್ತು. ಕಳೆದ 11 ದಿನಗಳಿಂದ ಮೈಸೂರು ಪೊಲೀಸರು ಸ್ಯಾಂಟ್ರೋ ರವಿಯ ಪತ್ತೆಗಾಗಿ ತೀವ್ರ ಶೋಧ ನಡೆಸಿದರು ಕೂಡ ಪ್ರಯೋಜನವಾಗಿರಲಿಲ್ಲ. ರಾಜ್ಯದ ಮೂಲೆ ಮೂಲೆಗೆ ತೆರಳಿ ವಿಚಾರಣೆ ನಡೆಸಿದ ಬಳಿಕ ರಾಜ್ಯದಿಂದ ಪರಾರಿಯಾಗಿ ಗುಜರಾತ್‌ನಲ್ಲಿ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಕೊನೆಗೂ ಪೋಲಿಸ್ ಬಲೆಗೆ ಬಿದಿದ್ದಾನೆ ಎನ್ನಲಾಗಿದೆ.
ಕಳೆದ ಒಂದು ವಾರದಿಂದ ರಾಜ್ಯ ರಾಜಕೀಯದಲ್ಲಿ ಈತನ ಹೆಸರು ಎಲ್ಲ ಕಡೆ ರಾರಾಜಿಸುತ್ತಿತ್ತು. ತನ್ನ ಫೋನನ್ನು ಬಳಸದೇ ಪೊಲೀಸರನ್ನೆ ಯಾಮಾರಿಸುವ ಪ್ರಯತ್ನ ನಡೆಸಿದ್ದ ಸ್ಯಾಂಟ್ರೋ ರವಿಯ ಚಲನವಲನಗಳನ್ನು ಪತ್ತೆ ಮಾಡಲು ಪೊಲೀಸರು ಸೈಬರ್ ತಾಂತ್ರಿಕ ನೆರವನ್ನು ಬಳಸಿಕೊಂಡಿದ್ದು , ರವಿ ಫೋನ್ ಹಾಗೂ ಸ್ಯಾಟಲೈಟ್ ಮಾಹಿತಿ ಆಧಾರದ ಮೇಲೆ ಮೈಸೂರು ಪೊಲೀಸರು ಉಡುಪಿ ಸೇರಿದಂತೆ ರಾಜ್ಯದ ಹಲವು ಭಾಗಗಳಿಗೆ ತೆರಳಿ ವಿಚಾರಣೆ ನಡೆಸಿದ್ದರು ಏನು ಮಾಹಿತಿ ಲಭ್ಯವಾಗಿರಲಿಲ್ಲ.
ಈ ನಡುವೆ ಸ್ಯಾಂಟ್ರೋ ರವಿ ವರ್ಗಾವಣೆ ದಂಧೆಯಲ್ಲಿ ಕೂಡ ಭಾಗಿಯಾಗಿದ್ದು, ಈತ ಹುಡುಗಿಯರನ್ನು ಮಾಂಸದ ದಂಧೆಗೆ ಬಳಸಿಕೊಂಡು ವರ್ಗಾವಣೆಯನ್ನು ಮಾಡಿಸಿಕೊಳ್ಳುತ್ತಿದ್ದ ಎನ್ನಲಾಗಿದೆ.ಇನ್ನೂ ಗಣ್ಯ ವ್ಯಕ್ತಿಗಳಿಗೆ ಹುಡುಗಿಯರನ್ನ ಸಪ್ಲೈ ಮಾಡುವ ಕೆಲಸ ಮಾಡುತ್ತಿದ್ದ ಎನ್ನುವ ಆರೋಪ ಕೂಡ ಕೇಳಿ ಬರುತ್ತಿವೆ. ಇಷ್ಟೇ ಅಲ್ಲದೆ, ಅಕ್ರಮ ದಂಧೆಗಳಿಂದ ಕೋಟ್ಯಂತರ ರೂ. ಆಸ್ತಿ ಕೂಡ ಸಂಪಾದಿಸಿದ್ದ ಎನ್ನಲಾಗಿದ್ದು, ಮೈಸೂರು ಪೋಲಿಸರು ಇಂದು ಸಂಜೆ ನಗರಕ್ಕೆ ಕರೆ ತರಲಿದ್ದು, ಇಂದು ಆತನನ್ನು ನ್ಯಾ ಯಾಧೀಶರ ಮುಂದೆ ಹಾಜರು ಪಡಿಸಿ ತಮ್ಮ ಕಸ್ಟಡಿಗೆ ಪಡೆದುಕೊಳ್ಳುವ ಸಂಭವವಿದೆ ಎನ್ನಲಾಗಿದೆ.