ಬಟ್ಟೆ ಧರಿಸದೇ ಮಲಗುವುದು ಆರೋಗ್ಯಕ್ಕೆ ಒಳ್ಳೆಯದಾ ಕೆಟ್ಟದಾ? ಅಧ್ಯಯನ ಬಿಚ್ಚಿಟ್ಟಿತು ಇಂಟೆರೆಸ್ಟಿಂಗ್‌ ಸಂಗತಿ

ದಿನನಿತ್ಯ ಚಟುವಟಿಕೆಯಲ್ಲಿ ತೊಡಗಿರುವ ನಮಗೆ ರಾತ್ರಿ ಹೊತ್ತು ಕನಿಷ್ಠ ಸಮಯವಾದರೂ ನಿದ್ದೆ ಬೇಕೇ ಬೇಕು. ನಿದ್ದೆ ಮಾಡಿದರೆ ಮಾತ್ರ ದೇಹದ ಸುಸ್ತು ಕಡಿಮೆ ಆಗಿ ಮರುದಿನ ಮತ್ತೆ ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಆದರೆ ಕೆಲವರಿಗೆ ರಾತ್ರಿ ಹೊತ್ತು ನಿದ್ದೆ ಕೊರತೆ ಇರುತ್ತದೆ. ಯಾಕೆಂದರೆ ಮಲಗುವ ವಾತಾವರಣ ಅಥವಾ ಮಲಗುವ ರೀತಿ ಸಹ ಆಗಿರಬಹದು. ಆದರೆ ಕೆಲವರು ಬಟ್ಟೆ ಧರಿಸದೆ ಮಲಗುವ ಅಭ್ಯಾಸ ಹೊಂದಿರುತ್ತಾರೆ. ಇದರಿಂದ ಏನಾದರು ಪ್ರಯೋಜನ ಇದೆಯೇ ಎಂದು ತಿಳಿದುಕೊಳ್ಳೋಣ ಬನ್ನಿ.

ಹೌದು ಬೆತ್ತಲಾಗಿ ಕೆಲವರು ಮಲಗುವ ಅಭ್ಯಾಸ ಹೊಂದಿದ್ದಾರೆ. ಇದರಿಂದ ಕೆಲವು ಪ್ರಯೋಜನಗಳು ಸಹ ಇವೆ. ಸದ್ಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ನಡೆಸಿರುವ ಅಧ್ಯಯನದಲ್ಲಿ ನಿದ್ರೆಯ ಕುರಿತು ಸ್ವಾರಸ್ಯಕರ ಸಂಗತಿಯೊಂದು ಬಹಿರಂಗವಾಗಿದೆ. ಏನನ್ನೂ ಧರಿಸದೆ ಅರ್ಥಾತ್ ಬೆತ್ತಲಾಗಿ ಮಲಗುವುದರಿಂದ ಸಾಕಷ್ಟು ಪ್ರಯೋಜನಗಳು ಇವೆ ಎಂಬುದು ಈ ಅಧ್ಯಯನದಲ್ಲಿ ಕಂಡುಬಂದಿದೆ. ನಿದ್ರೆಯ ಗುಣಮಟ್ಟ ಉಷ್ಣಾಂಶದ ಮೇಲೂ ಅವಲಂಬಿಸಿರುವುದರಿಂದ ಈ ಸಂದರ್ಭದಲ್ಲಿ ಮಲಗುವ ಕೋಣೆಯಲ್ಲಿನ ತಾಪಮಾನ 15ರಿಂದ 19 ಡಿ.ಸೆ. ಇರಬೇಕು ಎಂದೂ ಈ ಅಧ್ಯಯನದಲ್ಲಿ ಹೇಳಲಾಗಿದೆ. ಈ ತಾಪಮಾನದಲ್ಲಿರುವ ಮಲಗುವ ಕೋಣೆಯಲ್ಲಿ ಪೈಜಾಮಾ ಇಲ್ಲದೆ ಅಥವಾ ಯಾವುದೇ ಬಟ್ಟೆ ಧರಿಸದೆ ಮಲಗುವುದು ಅತ್ಯುತ್ತಮ ಎಂಬುದು ಅಧ್ಯಯನದಲ್ಲಿ ಕಂಡುಬಂದಿದೆ.

2012 ರಲ್ಲಿ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಹೆಲ್ತ್ ವತಿಯ ಅಧ್ಯಯನ ಪ್ರಕಾರ ಬಟ್ಟೆ ಧರಿಸದೆ ಮಲಗುವುದು ದಾಂಪತ್ಯ ಜೀವನವನ್ನೂ ಉತ್ತಮಗೊಳಿಸುತ್ತದೆ. ಪತಿ-ಪತ್ನಿಯ ನಡುವೆ ತ್ವಚೆ ನೇರ ಸಂಪರ್ಕಕ್ಕೆ ಬರುವುರದರಿಂದ ದಂಪತಿಯ ಮಧ್ಯೆ ಪರಿಣಾಮ ಬೀರುವಂಥ ಆಕ್ಸಿಟೋಸಿನ್ ಸ್ರವಿಕೆ ಕೂಡ ಉದ್ದೀಪನಗೊಳ್ಳುತ್ತದೆ ಎಂದು ಈ ಅಧ್ಯಯನ ತಿಳಿಸಿದೆ.

ಅದಲ್ಲದೆ ಬಟ್ಟೆ ಧರಿಸದೆ ಮಲಗುವುದು ನಿದ್ರೆಯ ಗುಣಮಟ್ಟ ವೃದ್ಧಿಸುವುದಷ್ಟೇ ಅಲ್ಲದೆ, ತ್ವಚೆಯ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಮಾತ್ರವಲ್ಲ, ಈ ರೀತಿಯ ಮಲಗುವಿಕೆಯಿಂದ ತ್ವಚೆಯಲ್ಲಿನ ಸಣ್ಣಪುಟ್ಟ ಗಾಯಗಳೂ ಬೇಗ ಗುಣವಾಗುತ್ತದೆ. ಬೆತ್ತಲಾಗಿ ಮಲಗುವುದರಿಂದ ಆತಂಕ ಹಾಗೂ ಒತ್ತಡದ ಮನಸ್ಥಿತಿ ದೂರವಾಗುತ್ತದೆ. ಪರಿಣಾಮವಾಗಿ ಉತ್ತಮ ನಿದ್ರೆ ಬರುತ್ತದೆ ಎಂದು ಈ ಅಧ್ಯಯನ ತಿಳಿಸಿದೆ.

ಒಟ್ಟಿನಲ್ಲಿ ನೀವು ಬಟ್ಟೆ ಇಲ್ಲದೆ ಬೆತ್ತಲಾಗಿ ಮಲಗುವ ಅಭ್ಯಾಸ ಹೊಂದಿದ್ದರೆ ಒಳ್ಳೆಯದೇ ಎಂದು ಅಧ್ಯಯನ ಮೂಲಕ ಸಾಬೀತಾಗಿದೆ.

Leave A Reply

Your email address will not be published.