ಈ ಬಾರಿ ಹಜ್ ಯಾತ್ರೆ ಸುಗಮ
ಹಜ್ ಮುಸ್ಲಿಂರಿಗೆ ತುಂಬಾ ಪವಿತ್ರವಾದ ಸ್ಥಳ, ಇಲ್ಲಿಗೆ ಪ್ರತೀವರ್ಷ ಲಕ್ಷಾಂತರ ಜನರು ಭೇಟಿಕೊಡುತ್ತಾರೆ. ಹಜ್ ಯಾತ್ರೆ ಮಾಡುವುದು ಮುಸ್ಲಿಂ ಸಮುದಾಯದಲ್ಲಿ ತುಂಬಾ ಪವಿತ್ರವಾದ ಕಾರ್ಯವಾಗಿದೆ. ಇಸ್ಲಾಂ ಧರ್ಮದ ಹಜ್ ಯಾತ್ರೆಗೆ ಈ ಬಾರಿ ಯಾವುದೇ ನಿರ್ಬಂಧ ಇಲ್ಲ ಎಂದು ತಿಳಿದು ಬಂದಿದೆ. ಕೊರೊನಾ ಸೋಂಕಿನ ಲಕ್ಷಣಗಳು ದಟ್ಟವಾಗಿದ್ದ ಹಿನ್ನೆಲೆ ಸೌದಿ ಅರೇಬಿಯಾದ ವಾರ್ಷಿಕ ಹಜ್ ಯಾತ್ರೆಗೆ ಅನೇಕ ನಿರ್ಬಂಧಗಳನ್ನೂ ಮಾಡಲಾಗಿತ್ತು. ಇದೀಗ, ಈ ಬಾರಿಯ ಹಜ್ ಯಾತ್ರೆಗೆ ಯಾವುದೇ ನಿರ್ಬಂಧ ವಿಲ್ಲದೆ ಸರಾಗವಾಗಿ ನಡೆಯಲಿದ್ದು, ಕೊರೊನಾಪೂರ್ವ ಸ್ಥಿತಿಗೆ ತಲುಪಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
2019ರಲ್ಲಿ 24 ಲಕ್ಷ ಮಂದಿ ಹಜ್ ಯಾತ್ರೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದ್ದು, 2020ರಲ್ಲಿ ಲಾಕ್‌ಡೌನ್‌ನಿಂದಾಗಿ ಸೌದಿ ಅರೇಬಿಯಾ ಸರಕಾರವು ಹಲವು ನಿರ್ಬಂಧಗಳನ್ನು ಹೇರಿದ್ದಲ್ಲದೆ ,ತನ್ನ 1,000 ನಿವಾಸಿಗಳಿಗಷ್ಟೇ ಯಾತ್ರೆ ಮಾಡಲು ಅನುವು ಮಾಡಿ ಅನುಮತಿ ನೀಡುವುದಾಗಿ ಘೋಷಣೆ ಮಾಡಲಾಗಿತ್ತು.
ಕೊರೊನಾ ಮಹಾಮಾರಿಯ ಅಟ್ಟಹಾಸ ಮೆರೆಯುವ ಮೊದಲು ಪ್ರತೀ ವರ್ಷ ಇಸ್ಲಾಂನ ಪವಿತ್ರ ಮೆಕ್ಕಾ ನಗರಕ್ಕೆ ಲಕ್ಷಾಂತರ ಮಂದಿ ಯಾತ್ರಿಗಳು ಆಗಮಿಸುತ್ತಿದ್ದರು. ಆದರೆ, ಕೊರೊನಾ ವೈರಸ್ ಎಲ್ಲೆಡೆ ಹರಡಿ ಅನೇಕ ಮಂದಿಯ ಮಾರಣಹೋಮ ಮಾಡಿದ ಬಳಿಕ ಹೆಚ್ಚಿನ ಕಡೆಗಳಿಗೆ ನಿರ್ಬಂಧ ಹೇರಲಾಗಿತ್ತು.
2021ರಲ್ಲಿ ಸೌದಿ ಅರೇಬಿಯಾದ 60 ಸಾವಿರ ನಿವಾಸಿಗಳು ಯಾತ್ರೆ ಮಾಡಿದ್ದು, ಕಳೆದ ವರ್ಷ 10 ಲಕ್ಷ ಮಂದಿ ಮೆಕ್ಕಾಗೆ ಭೇಟಿ ನೀಡಿದ್ದಾರೆ. ಈ ಬಾರಿ ಎಲ್ಲ ನಿರ್ಬಂಧಗಳನ್ನೂ ತೆರವುಗೊಳಿಸಲಾಗಿದ್ದು ಅಲ್ಲದೆ ವಯಸ್ಸಿನ ಮಿತಿಯಿಲ್ಲದೇ ಕೊರೊನಾ ಪೂರ್ವದಂತೆಯೇ ಈ ವರ್ಷ ಹಜ್ ಯಾತ್ರೆ ಜರಗಲಿದೆ ಎಂದು ಉಮ್ರಾ ಸಚಿವ ತೌಫೀಕ್ ಅಲ್ ರಬಿಯಾ ಮಾಹಿತಿ ನೀಡಿದ್ದಾರೆ. ಇದಲ್ಲದೆ ಯಾತ್ರಾತ್ರಿಗಳ ಅಗತ್ಯತೆಗಳನ್ನು ಪೂರೈಸುವ ಪರವಾನಿಗೆ ಇರುವ ಜಗತ್ತಿನ ಯಾವುದೇ ಕಂಪೆನಿಗೂ ಹಜ್ ಯಾತ್ರೆಯ ಆಯೋಜನೆಗೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.