ರಾಖಿ ಸಾವಂತ್ ಮೈಸೂರು ಹುಡುಗ ಮದುವೆ ಫೋಟೋ ವೈರಲ್ | ಅಷ್ಟಕ್ಕೂ ಗುಟ್ಟಾಗಿ ಮದುವೆ ಆಗಿದ್ಯಾಕೆ?

ಬಾಲಿವುಡ್ ವಿವಾದಿತ ತಾರೆ ರಾಖಿ ಸಾವಂತ್ ಭಾರೀ ಗುಟ್ಟಾಗಿ ಎರಡನೇ ಮದುವೆ ಮಾಡಿಕೊಂಡಿದ್ದಾರೆ ಎಂಬ ರಹಸ್ಯ ಮಾಹಿತಿಯೊಂದು ಬಹಿರಂಗವಾಗಿದ್ದು, ಈ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ. ಅರೇ ಅಷ್ಟೋಂದು ಹೆಸರು ವಾಸಿಯಾಗಿದ್ದ ರಾಖಿ ಸಾವಂತ್ ಯಾಕಿಂತಾ ಆಯ್ಕೆ ಮಾಡಿಕೊಂಡಿದ್ದಾರೆ. ಅದರಲ್ಲೂ ಮೈಸೂರಿನ ಯುವಕನ್ಯಾರು ಅನ್ನೋದರ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಓದಿ ಉತ್ತರ.

 

ಇತ್ತೀಚಿನ ದಿನಗಳಲ್ಲಿ ಬಾಯ್ ಫ್ರೆಂಡ್ ಆದಿಲ್ ದುರ್ರಾನಿ ಜೊತೆ ರಾಖಿ ಸಾವಂತ್ ಸಾಕಷ್ಟು ಊರುಗಳನ್ನು ಸುತ್ತಿದ್ದು, ವಿದೇಶ ಪ್ರವಾಸಗಳನ್ನು ಮುಗಿಸಿ ಬಂದಿದ್ದಾರೆ. ಹುಡುಗನ ಊರಾದ ಮೈಸೂರಿಗೂ ಬಂದು ಹೋಗಿದ್ದಾರೆ. ಆದಿಲ್ ಕುಟುಂಬವನ್ನು ಭೇಟಿ ಮಾಡಿದ್ದ ಅವರು, ಆದಿಲ್ ಕುಟುಂಬಕ್ಕಾಗಿ ನಾನು ಬದಲಾಗುತ್ತೇನೆ ಎಂದು ಕೂಡ ಹೇಳಿದ್ದಾರೆ. ಆ ಕುಟುಂಬಕ್ಕೆ ಅರೆಬರೆ ಬಟ್ಟೆ ಹಾಕುವುದು ಇಷ್ಟವಿಲ್ಲ ಎಂದು ಹೇಳಿದ್ದರು. ಮೈಸೂರು ಮೂಲದ ಹುಡುಗ ಆದಿಲ್ ಜೊತೆ ಸುತ್ತುತ್ತಿದ್ದ ಅವರು, ಅದೇ ಆದಿಲ್ ಜೊತೆ ಸಿಂಪಲ್ ಆಗಿ ಮದುವೆಯಾಗಿದ್ದಾರೆ. ಸುದ್ದಿಗೆ ಪೂರಕ ಆದಿಲ್ ಮತ್ತು ರಾಖಿ ಸಾವಂತ್ ಮದುವೆಯನ್ನು ರಿಜಿಸ್ಟರ್ ಮಾಡಿಸುತ್ತಿರುವ ಫೋಟೋಗಳು ಹರಿದಾಡುತ್ತಿವೆ.
ಈ ಮದುವೆ ಕುರಿತಾಗಿ ಆದಿಲ್ ಆಗಲಿ ಅಥವಾ ರಾಖಿ ಸಾವಂತ್ ಆಗಲಿ ಎಲ್ಲಿಯೂ ಬಹಿರಂಗ ಪಡಿಸಿಲ್ಲ. ಆದರೆ, ರಿಜಿಸ್ಟಾರ್ ಮದುವೆ ಆಗಿರುವ ಕುರಿತು, ಅವರು ಸಹಿ ಮಾಡುತ್ತಿರುವ ಮತ್ತು ಆ ಪತ್ರವನ್ನು ಹಿಡಿದು ನಿಂತಿರುವ ಫೋಟೋಗಳು ಮಾತ್ರ ವೈರಲ್ ಆಗಿವೆ.

https://www.instagram.com/p/CnRp2-GBjiy/?utm_source=ig_embed&ig_rid=92b71cdb-7437-44d5-a812-599a28c9a491

ಮರಾಠಿ ಬಿಗ್ ಬಾಸ್ ಮನೆಯಲ್ಲಿ ಇದ್ದ ರಾಖಿ, ತಾಯಿಯ ಅನಾರೋಗ್ಯದ ಕಾರಣಕ್ಕಾಗಿಯೇ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದರು. ಇದೀಗ ದಿಢೀರ್ ಅಂತ ಮದುವೆ ಪತ್ರವನ್ನು ಹಿಡಿದು ನಿಂತ ಫೋಟೋ ಭಾರೀ ವೈರಲ್‌ ಆಗುತ್ತಿದೆ. ಬಳಿಕ ತಮ್ಮ ತಾಯಿಗೆ ಕ್ಯಾನ್ಸರ್ ಆಗಿರುವ ಕುರಿತು ನಿನ್ನೆ ಅವರ ಸೋಷಿಯಲ್‌ ಮಿಡಿಯಾ ಮೂಲಕ ಹಂಚಿಕೊಂಡಿದ್ದಾರೆ. ತಾಯಿಗೆ ಹುಷಾರಿಲ್ಲದ ಕಾರಣದಿಂದಾಗಿ ಅವರು ಇಂಥದ್ದೊಂದು ದೃಢ ನಿರ್ಧಾರಕ್ಕೆ ಮುಂದಾಗಿದ್ದಾರೆಂದು ಎಂದು ಹೇಳಲಾಗುತ್ತಿದೆ.

ರಿತೇಶ್ ಸಿಂಗ್ ಜೊತೆ ಮುರಿದುಬಿದ್ದ ಕೂಡಲೇ ಆದಿಲ್ ಅವರನ್ನು ಭೇಟಿಯಾಗಿದ್ದಾಗಿ ಆಕೆ ಬಹಿರಂಗಪಡಿಸಿದ್ದಾಳೆ. ರಿತೇಶ್ ನನ್ನು ಮದುವೆಯಾಗಿದ್ದು ತಪ್ಪು ಎಂದಿದ್ದಾಳೆ. ತಾನು ಬಿಗ್ ಬಾಸ್ 15 ರಲ್ಲಿ ಇರದೇ ಇದ್ದಿದ್ದರೆ ರಿತೇಶ್ ಅವರ ಮೊದಲ ಮದುವೆಯ ಬಗ್ಗೆ ನನಗೆ ತಿಳಿಯುತ್ತಿರಲಿಲ್ಲ ಎಂದು ಆಕೆ ಹೇಳಿದ್ದಾಳೆ.

ರಿತೇಶ್‌ನೊಂದಿಗಿನ ತನ್ನ ಮದುವೆ ಕಾನೂನುಬಾಹಿರವಾಗಿದೆ, ಏಕೆಂದರೆ ಅವನು ಇನ್ನೂ ತನ್ನ ಮೊದಲ ಹೆಂಡತಿಯನ್ನು ಡೈವೋರ್ಸ್ ಮಾಡದ ಕಾರಣ ನಾನು ಆತನನ್ನು ತೊರೆಯಬೇಕಾಯಿತು. ಆ ಸಮಯದಲ್ಲಿ ಆದಿಲ್ ನನ್ನ ಜೀವನದಲ್ಲಿ ಬಂದು ಮದುವೆಗೆ ಪ್ರಸ್ತಾಪಿಸಿದನು. ತಾನು ತಾಯಿಯಾಗಲು ಬಯಸಿದ್ದರಿಂದ ಕಾಯಲು ಬಯಸುವುದಿಲ್ಲ, ಆದರೆ ಆದಿಲ್ ಕುಟುಂಬ ಇನ್ನೂ ಆಕೆಯನ್ನು ಒಪ್ಪಿಕೊಂಡಿಲ್ಲ ಎಂದು ಸಾವಂತ್ ಹೇಳಿದ್ದಾಳೆ.

Leave A Reply

Your email address will not be published.