Indian Railways : ಇಲ್ಲಿ ಮಹಿಳಾ ಉದ್ಯೋಗಿಗಳು ಮಾತ್ರವೇ ಇರೋದು | ಯಾವ ರೈಲು ನಿಲ್ದಾಣ ಗೊತ್ತಾ?

ರಾಜಸ್ಥಾನದ ಗಾಂಧಿ ನಗರದಲ್ಲಿ ಮಹಿಳೆಯರು ಮಾತ್ರ ಕೆಲಸ ಮಾಡುವ ರೈಲು ನಿಲ್ದಾಣವಿದೆ. ಇದು ದೇಶದ ಮೊದಲ ಸಂಪೂರ್ಣ ಮಹಿಳಾ ರೈಲು ನಿಲ್ದಾಣವಾಗಿದೆ. ಮಹಿಳಾ ಸಬಲೀಕರಣದ ಉದ್ದೇಶವನ್ನು ವಿಶ್ವಸಂಸ್ಥೆ ಭಾರತೀಯ ರೈಲ್ವೆಯನ್ನು ಶ್ಲಾಘಿಸಿದೆ.

ಮಹಿಳಾ ರೈಲ್ವೆ ಉದ್ಯೋಗಿಗಳನ್ನು ಜೈಪುರ ಜಿಲ್ಲೆಯ ಗಾಂಧಿ ನಗರ ರೈಲು ನಿಲ್ದಾಣಕ್ಕೆ ಭಾರತೀಯ ರೈಲ್ವೇ ನಿಯೋಜಿಸಿದೆ. ಈ ರೈಲು ನಿಲ್ದಾಣ ಸಂಪೂರ್ಣವಾಗಿ ಮಹಿಳೆಯರು ಕೆಲಸ ಮಾಡುವಂತದ್ದಾಗಿದೆ. ಇದು ಮಹಿಳೆಯರು ಸಂಪೂರ್ಣ ಕಾರ್ಯಾಚರಣೆ ಮತ್ತು ನಿರ್ವಹಣೆಯನ್ನು ಮಾಡುವ ಮೊದಲ ರೈಲ್ವೇ ನಿಲ್ದಾಣವಾಗಿದೆ.

ಈ ರೈಲು ನಿಲ್ದಾಣವು ಒಟ್ಟು 40 ಮಹಿಳಾ ಉದ್ಯೋಗಿಗಳನ್ನು ಹೊಂದಿದ್ದು, ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಈ ರೈಲು ನಿಲ್ದಾಣದ ಮೂಲಕ ದಿನದಲ್ಲಿ 50 ರೈಲುಗಳು ಹಾದು ಹೋಗುತ್ತವೆ. ಪ್ರತಿದಿನ ಸುಮಾರು 7000 ಪ್ರಯಾಣಿಕರು ಈ ನಿಲ್ದಾಣವನ್ನು ಬಳಸುತ್ತಾರೆ.

ಈ ನಿಲ್ದಾಣದಲ್ಲಿ ವೇಗದ ಸೇವೆಗಳು, ಉತ್ತಮ ಶುಚಿತ್ವ ಸೇರಿದಂತೆ ಹಲವು ವಿಷಯಗಳಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಅಲ್ಲದೆ, ಮಹಿಳಾ ಪ್ರಯಾಣಿಕರ ಅನುಕೂಲಕ್ಕಾಗಿ ಇಲ್ಲಿ ಮಹಿಳಾ ಪೊಲೀಸ್ ಠಾಣೆ ಉದ್ಘಾಟನೆ ಹಾಗೂ ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಷಿನ್ ಅಳವಡಿಸಲಾಗಿದೆ.

ಮಹಿಳಾ ಸಬಲೀಕರಣದ ಉದ್ದೇಶದಿಂದ, ಭಾರತೀಯ ರೈಲ್ವೇ ಮಹಿಳಾ ಉದ್ಯೋಗಿಗಳನ್ನು ಆಯೋಜಿಸಿದೆ. ಇತರರಿಗೂ ಮಾದರಿಯಾಗಲಿದ್ದು, ಮಹಿಳೆಯರು ಸಂಪೂರ್ಣ ರೈಲ್ವೇ ನಿಲ್ದಾಣವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂಬುದನ್ನು ಸಾರುತ್ತದೆ. ಅಲ್ಲದೆ, ಭಾರತದಂತಹ ದೇಶಗಳಲ್ಲಿ ಮಹಿಳಾ ಉದ್ಯೋಗಿಗಳು ಕೇವಲ 27% ಮಾತ್ರವೇ ಇದ್ದಾರೆ.

ಮುಂಬೈ ವಲಯದಲ್ಲಿನ ಮಾಟುಂಗಾ ರೈಲು ನಿಲ್ದಾಣವು ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದ ಒಳಗೊಂಡಿದ್ದು, ಇದು ಉಪ-ನಗರ ವಿಭಾಗದಲ್ಲಿದೆ. ಆದರೆ ಈ ಗಾಂಧಿ ನಗರ ರೈಲು ನಿಲ್ದಾಣ ಮುಖ್ಯ ಮಾರ್ಗ ವಿಭಾಗದಲ್ಲಿನ ಸಂಪೂರ್ಣ ಮಹಿಳಾ ಸಿಬ್ಬಂದಿಯಿರುವ ದೇಶದ ಮೊದಲ ರೈಲ್ವೇ ಆಗಿದೆ.

Leave A Reply

Your email address will not be published.