ಮಾಲ್ ಗೆ ಹೋಗಬೇಡ ಅಂದಿದ್ದಕ್ಕೆ ಬಾಲಕಿ ಮಾಡಿದ್ದೇನು ಗೊತ್ತಾ?
ಇತ್ತೀಚೆಗಿನ ಕಾಲದಲ್ಲಿ ಮಕ್ಕಳ ಜೊತೆ ಹೇಗೆ ಮಾತನಾಡಬೇಕು ಎಂದು ಗೊತ್ತೇ ಆಗಲ್ಲ ಅಂತಾರೆ ಪೋಷಕರು ಮತ್ತು ಶಿಕ್ಷಕರು. ಒಂದು ಕಾಲದಲ್ಲಿ ಹೊಡೆದು, ಬಡಿದು ಮಕ್ಕಳಿಗೆ ಬುದ್ಧಿ ಹೇಳುತ್ತಾ ಇದ್ದರು. ಆದ್ರೆ ಕಾಲ ಬದಲಾದಂತೆ ಕಾನೂನುಗಳೂ ಬದಲಾಯ್ತು, ಮಕ್ಕಳು ಕೂಡ ಅಪ್ ಡೇಟ್ ಆದ್ರು ಅಲ್ವಾ?
ಇದೀಗ ಬೆಂಗಳೂರಿನಲ್ಲಿ ನಡೆದ ಘಟನೆಯನ್ನು ಕೇಳಿದ್ರೆ ನಿಜಕ್ಕೂ ನೀವು ಶಾಕ್ ಆಗ್ತೀರಾ! ಬೆಂಗಳೂರಿನ ವಿಜಯನಗರದ ಖಾಸಗಿ ಶಾಲೆಯಲ್ಲಿ 9ನೆಯ ತರಗತಿಯಲ್ಲಿ ಓರ್ವ ವಿಧ್ಯಾರ್ಥಿನಿ ಓದುತ್ತಾ ಇದ್ದಳು. ಪ್ರತಿ ನಿತ್ಯವೂ ಶಾಲೆಗೆ ಹೋಗಿ ಬೇಸತ್ತ ಈಕೆ ಒಂದು ದಿನ ಸ್ಕೂಟಿಯಲ್ಲಿ ಶಾಲೆಗೆ ಹೋಗಿದ್ದಾಳೆ. ಅಲ್ಲಿಂದ ಸೀದ ಒಬ್ಬಳೆ ಮಾಲ್ ಗೆ ತೆರಳಿದ್ದಾರೆ.
ನೋಡಿ, 9 ನೆಯ ತರಗತಿಯ ಬಾಲಕಿ ಸ್ಕೂಟಿಯಲ್ಲಿ ಹೋಗುತ್ತಿದ್ದಾಳೆ ಅಂದ್ರೆ ಯಾವ ರೇಂಜಿಗೆ ನಮ್ಮ ಸಮಾಜ ಬೇಳೆದಿರಬೇಕು ಎಂದು ನೀವೇ ಊಹೆ ಮಾಡಿ. ಆಕೆ ಶಾಲೆಯಲ್ಲಿ ಆದ ಗೈರು ಹಾಜರಿ ಶಿಕ್ಷಕರಿಗೆ ಅನುಮಾನ ತರಿಸಿತ್ತು. ಇದಾದ ನಂತರ ಈಕೆ ಮಾಲ್ ಗೆ ಹೋಗಿದ್ದು ಕೂಡ ತಿಳಿಯಿತು.
ವಿದ್ಯಾರ್ಥಿನಿಯ ಹಿತ ದೃಷ್ಟಯಿಂದ ಶಾಲಾ ಸಿಬ್ಬಂದಿ ವರ್ಗದವರು ಈಕೆಯ ಪೋಷಕರಲ್ಲಿ ಈ ವಿಷಯವನ್ನು ತಿಳಿಸಿದ್ದಾರೆ. ಅವರಿಗೆ ಕೋಪ ಬಂದು ಬೈದಿದ್ದಾರೆ. ಇದರಿಂದ ಬೇಸತ್ತ ಹುಡುಗಿ ಮನೆ ಬಿಟ್ಟು ಹೋಗಿದ್ದಾಳೆ.
ಶಾಲೆಗೆ ಹೋದ ಮಗಳು ಸಂಜೆ ಆದ್ರೂ ಮನೆಗೆ ಬರದಿರುವುದನ್ನು ಕಂಡ ಪೋಷಕರು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ದೂರನ್ನು ದಾಖಲಿಸಿದ್ದಾರೆ. ಇದಾಗಿಯು, ಬಾಲಕಿಯು ಗೊರಗೊಂಟೆಪಾಳ್ಯದ ಬಸ್ ನಿಲ್ದಾಣದಲ್ಲಿ ಒಬ್ಬಳೇ ನಿಂತಿದ್ದಳು. ಇದನ್ನು ಓರ್ವ ಆಟೋ ಡ್ರೈವರ್ ಕಂಡು ಪ್ರಶ್ನೆ ಮಾಡಿದ್ದಾನೆ. ಅನುಮಾನ ಬರುವ ಹಾಗೆ ವಿಧ್ಯಾರ್ಥಿನಿ ಉತ್ತರ ಕೊಟ್ಟಿದ್ದರಿಂದ ಕೂಡಲೇ ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದರಿಂದ ತಕ್ಷಣ ಸ್ಥಳಕ್ಕೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಆಗಮಿಸಿ ಹುಡುಗಿಯನ್ನು ರಕ್ಷಿಸಿದ್ದಾರೆ.