ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಸಂಚು : ನಾಳೆ ಸಾಗರದಲ್ಲಿ ಅಘೋಷಿತ ಬಂದ್‌ಗೆ ಕರೆ

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಅನ್ಯಕೋಮಿನ ಯುವಕನಿಂದ ಬಜರಂಗದಳ ಕಾರ್ಯಕರ್ತನ ಹತ್ಯೆಗೆ ಯತ್ನಿಸಿದ ಬೆನ್ನಲ್ಲೆ ನಾಳೆ ಅಘೋಷಿತ ಬಂದ್ ಘೋಷಣೆ ಮಾಡಲಾಗಿದೆ. ವಿಶ್ವ ಹಿಂದು ಪರಿಷತ್ ಮುಖಂಡ ರವೀಶ್ ಸುದ್ದಿಗಾರರೊಂದಿ ಮಾತನಾಡಿ, ಸಾಗರದಲ್ಲಿ ನಾಳೆ ಬೆಳಗ್ಗೆ ಯಿಂದ ಮಧ್ಯಾಹ್ನ 2ಗಂಟೆ ವರೆಗೆ ಅಘೋಷಿತ ಬಂದ್​ ಗೆ ಕರೆ ನೀಡಲಾಗಿದೆ. ಸಾಗರದ ಜನತೆ ನಾಳೆ ಸ್ವಯಂ ಪ್ರೇರಣೆಯಿಂದ ನಾಳಿನ ಬಂದ್​ಗೆ ಬೆಂಬಲಿಸಬೇಕು ಮನವಿ ಮಾಡಲಾಗಿದೆ.

 

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದಲ್ಲಿ ಸಮೀರ್‌ ಎಂಬಾತನಿಂದಸುನೀಲ್‌ ಮೇಲೆ ಸಮೀರ್‌ ಮಚ್ಚು ಬೀಸಿದ್ದು, ಕೂದಲೆಳೆ ಅಂತರದಲ್ಲಿ ಸುನೀಲ್‌ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ. ಈ ದುರಂತ ನಿನ್ನೆ ಸಾಗರದಲ್ಲಿ ಶೌರ್ಯ ಸಂಚಲನ ಯಾತ್ರೆ ನಡೆದಿತ್ತು. ಈ ಯಾತ್ರೆಯಲ್ಲಿ ಸುನೀಲ್‌ ಜತೆ ಸಮೀರ್‌ ತೆರಳಿದ್ದರು. ಈ ವೇಳೆ ಸುನೀಲ್‌ ಮೇಲೆ ಮಚ್ಚು ಬೀಸಿ ಸಮೀರ್‌ಎಸ್ಕೇಪ್‌ ಆಗಿದ್ದಾನೆ. ಈ ಸಂಬಂಧ ಸಾಗರ ಟೌನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ

Leave A Reply

Your email address will not be published.