Recharge Plans: ಈ ಮೂರು ಟೆಲಿಕಾಂ ಕಂಪೆನಿಗಳಲ್ಲಿ ಯಾವುದು ದಿ ಬೆಸ್ಟ್? ಗೊತ್ತಾ?

ಟೆಲಿಕಾಂ ಕಂಪೆನಿಗಳು ಹಲವಾರು ಇವೆ. ಅವುಗಳಲ್ಲಿ ಇದೀಗ ಜಿಯೋ, ಏರ್​ಟೆಲ್​, ವೊಡಫೋನ್ ಐಡಿಯಾ ಟೆಲಿಕಾಂ ಕಂಪೆನಿಗಳು ಒಂದೇ ರೀತಿಯ ಪ್ರೀಪೇಯ್ಡ್​ ರೀಚಾರ್ಜ್ ಪ್ಲ್ಯಾನ್​ ಅನ್ನು ಒಳಗೊಂಡಿದೆ. ಅದು ಯಾವುದೆಂದರೆ 719 ರೂಪಾಯಿಯ ಪ್ಲ್ಯಾನ್​ ಆಗಿದೆ. ಆದರೆ ಒಂದೊಂದು ಕಂಪನಿಗಳು ಬೇರೆ ಬೇರೆ ರೀತಿಯ ಪ್ರಯೋಜನಗಳನ್ನು ಹೊಂದಿದೆ.

ಹೌದು ಜಿಯೋ, ಏರ್‌ಟೆಲ್ ಮತ್ತು ವೊಡಫೋನ್ ಐಡಿಯಾ ಈ ಮೂರು ಟೆಲಿಕಾಂ ಕಂಪೆನಿಗಳು 719 ರೂಪಾಯಿ ಪ್ರೀಪೇಯ್ಡ್‌ ಪ್ಲ್ಯಾನ್ ನಲ್ಲಿ ಆಕರ್ಷಕ ಸೌಲಭ್ಯಗಳನ್ನು ನೀಡಿವೆ. ಈ ಕಂಪೆನಿಗಳು ಬಿಡುಗಡೆ ಮಾಡಿದ ಯೋಜನೆ ಬಹುತೇಕ ಒಂದೇ ರೀತಿಯದ್ದಾಗಿದೆ. ಜೊತೆಗೆ ವ್ಯಾಲಿಡಿಟಿ ಸಹ ಒಂದೇ ರೀತಿಯಲ್ಲಿದೆ. ಆದರೆ ಡೇಟಾ ಪ್ರಯೋಜನವನ್ನು ನೋಡುವುದಾದರೆ ಮೂರೂ ಕಂಪೆನಿಗಳು ಬೇರೆ ಬೇರೆ ರೀತಿಯಲ್ಲಿದೆ . ಹಾಗಿದ್ದರೆ ಯಾವುದು ಬೆಸ್ಟ್ ರೀಚಾರ್ಜ್​ ಪ್ಲ್ಯಾನ್ ಎಂದು ನೋಡೋಣ ಬನ್ನಿ.

ಏರ್​​ಟೆಲ್​ನ 719 ರೂಪಾಯಿಯ ರೀಚಾರ್ಜ್​ ಪ್ಲ್ಯಾನ್ ಪ್ರಯೋಜನಗಳು:

ಏರ್‌ಟೆಲ್‌ ಕಂಪೆನಿಯ 719 ರೂಪಾಯಿಯ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿರುತ್ತದೆ. ಈ ರೀಚಾರ್ಜ್​​ನಲ್ಲಿ ಮಾತ್ರ ಗ್ರಾಹಕರು ಪ್ರತಿದಿನ 1.5 ಜಿಬಿ ಡೇಟಾವನ್ನು ಮಾತ್ರ ಪಡೆಯುತ್ತಾರೆ. ಹಾಗೆಯೇ ಪ್ರತಿದಿನ 100 ಎಸ್ಎಮ್ಎಸ್ ಅನ್ನು ಉಚಿತವಾಗಿ ಮಾಡಬಹುದಾಗಿದೆ. ಇದರ ಜೊತೆಗೆ ಅನ್ಲಿಮಿಟೆಡ್ ಕಾಲ್​ ಮಾಡುವ ಸೌಲಭ್ಯ ಕೂಡ ಇದು ಒಳಗೊಂಡಿದೆ. ಈ ರೀಚಾರ್ಜ್​​ ಪ್ಲ್ಯಾನ್​ನಲ್ಲಿ ಒಟ್ಟು 126 ಜಿಬಿ ಡೇಟಾವನ್ನು ಪಡೆಯುತ್ತಾರೆ. ಹೆಚ್ಚುವರಿಯಾಗಿ ಏರ್‌ಟೆಲ್‌ ವಿಂಕ್ ಮ್ಯೂಸಿಕ್, ಫಾಸ್ಟ್‌ಟ್ಯಾಗ್ ಕ್ಯಾಶ್‌ಬ್ಯಾಕ್, ಉಚಿತ ಹೆಲೋ ಟ್ಯೂನ್‌ ಸೌಲಭ್ಯ ದೊರೆಯುತ್ತದೆ.

ಜಿಯೋನ 719 ರೂಪಾಯಿಯ ರೀಚಾರ್ಜ್​ ಪ್ಲ್ಯಾನ್ ಪ್ರಯೋಜನಗಳು:

ಜಿಯೋ ಟೆಲಿಕಾಂನ 719 ರಆಯಿಯ ಪ್ರೀಪೇಯ್ಡ್‌ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿಯನ್ನು ಒಳಗೊಂಡಿದೆ. ಈ ರೀಚಾರ್ಜ್ ಪ್ಲ್ಯಾನ್​ನಲ್ಲಿ ಗ್ರಾಹಕರು ಪ್ರತಿದಿನ 2 ಜಿಬಿ ಡೇಟಾ ಸೌಲಭ್ಯವನ್ನು ಬಳಸಬಹುದಾಗಿದೆ. ಹಾಗೆಯೇ ಪ್ರತಿದಿನ 100 ಎಸ್ಎಮ್ಎಸ್ ಅನ್ನು ಉಚಿತವಾಗಿ ಮಾಡುವ ಸೌಲಭ್ಯವನ್ನು ಒಳಗೊಂಡಿದ್ದು, ಇದರೊಂದಿಗೆ ಜಿಯೋ ಸೇರಿದಂತೆ ಇತರೆ ಸಿಮ್​ಗಳಿಗೂ ಅನ್ಲಿಮಿಟೆಡ್ ಉಚಿತವಾಗಿ ಕಾಲ್ ಮಾಡುವ ಸೌಲಭ್ಯ ಸಿಗಲಿದೆ. ಈ ರೀಚಾರ್ಜ್ ಪ್ಲ್ಯಾನ್​ನಲ್ಲಿ 84 ದಿನಗಳಲ್ಲಿ ಒಟ್ಟು 168 ಜಿಬಿ ಡೇಟಾ ಲಭ್ಯ ಆಗುತ್ತದೆ. ಹೆಚ್ಚುವರಿಯಾಗಿ ಜಿಯೋ ಆ್ಯಪ್​ಗಳ ಚಂದಾದಾರಿಕೆ ಸೌಲಭ್ಯ ದೊರೆಯುತ್ತದೆ.

ವೊಡಫೋನ್ ಐಡಿಯಾದ 719 ರೂಪಾಯಿಯ ರೀಚಾರ್ಜ್​ ಪ್ಲ್ಯಾನ್ ಪ್ರಯೋಜನಗಳು:

ವೊಡಫೋನ್ ಐಡಿಯಾದ ಈ ರೀಚಾರ್ಜ್ ಪ್ಲ್ಯಾನ್​​ನಲ್ಲಿ ಬಳಕೆದಾರರು ಪ್ರತಿದಿನ 1.5 ಜಿಬಿ ಡೇಟಾ ಪ್ರಯೋಜನವನ್ನು ಪಡೆಯುತ್ತಾರೆ. ಈ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿರುತ್ತದೆ. ಈ ರೀಚಾರ್ಜ್ ಹಾಕಿಕೊಂಡರೆ ಯಾವುದೇ ಇತರೆ ನೆಟ್​​ವರ್ಕ್​ಗಳಿಗೂ ಅನ್ಲಿಮಿಟೆಡ್​ ಉಚಿತವಾಗಿ ಕಾಲ್ ಸಹ ಮಾಡಬಹುದು. ಜೊತೆಗೆ ಪ್ರತಿದಿನ 100 ಎಸ್ಎಮ್ಎಸ್‌ ಅನ್ನು ಉಚಿತವಾಗಿ ಮಾಡುವ ಅವಕಾಶ ಕೂಡ ಇದರಲ್ಲಿದೆ. ಹೆಚ್ಚುವರಿಯಾಗಿ ವಿಐ ಆ್ಯಪ್ಸ್​​ಗಳ ಸೇವೆಗಳನ್ನೂ ಉಚಿತವಾಗಿ ಪಡೆಯಬಹುದು.

ಈ ಮೇಲಿನ ಜಿಯೋ, ಏರ್‌ಟೆಲ್ ಮತ್ತು ವೊಡಫೋನ್ ಐಡಿಯಾ ಈ ಮೂರು ಟೆಲಿಕಾಂ ಕಂಪೆನಿಗಳಲ್ಲಿ ಡೇಟಾ ಸೌಲಭ್ಯ ಯಾರಿಗೆ ಅಗತ್ಯವಿದೆ ಅವುಗಳನ್ನು ನೋಡಿಕೊಂಡು ರೀಚಾರ್ಜ್ ಮಾಡಬಹುದಾಗಿದೆ.

Leave A Reply

Your email address will not be published.