ವಿಕೃತಿ ಮೆರೆದ ಕಾಮುಕ ವೈದ್ಯ! ಮಹಿಳೆಗೆ ಅಪರೇಶನ್ ಮಾಡುವಾಗ ಈತ ಮಾಡಿದ್ದೇನು ಗೊತ್ತಾ?

ವೈದ್ಯೋ ನಾರಾಯಣ ಹರಿ ಎಂದು ವೈದ್ಯರಲ್ಲಿ ದೇವರನ್ನು ಕಾಣುತ್ತೇವೆ. ನಾವು ಮನೆಯವರನ್ನೇ ನಂಬುತ್ತೇವೆ ಇಲ್ಲವೋ ಗೊತ್ತಿಲ್ಲ. ಆದರೆ ವೈದ್ಯರನ್ನು, ಅವರು ಹೇಳುವ ಪ್ರತಿಯೊಂದನ್ನೂ ನಂಬುತ್ತೇವೆ. ನಮಗೆ ಬಂದಂತಹ ಕಾಯಿಲೆಗಳನ್ನು, ಸಮಸ್ಯೆಗಳನ್ನು ಹೇಗಾದರೂ ಮಾಡಿ ಗುಣವಾಗುವಂತೆ ಮಾಡಿ ಮರುಜೀವವನ್ನು ಕರುಣಿಸುವುದು ವೈದ್ಯರೆ. ಒಟ್ಟಿನಲ್ಲಿ ಕಣ್ಣಿಗೆ ಕಾಣುವ ದೇವರು ಅವರೆಂದು ಭಾವಿಸುತ್ತೇವೆ.

 

ಆದರೆ ಇಲ್ಲೊಬ್ಬ ವೈದ್ಯ ತನ್ನ ವೃತ್ತಿಗೇ ಕಳಂಕ ತರುವಂತಹ ಕಾರ್ಯ ಮಾಡಿದ್ದಾನೆ. ತಾನೊಬ್ಬ ವೈದ್ಯ ಎಂಬುದನ್ನೇ ಮರೆತು ವಿಕೃತಿ ಮೆರೆದಿದ್ದಾನೆ. ಹಾಗಾದರೆ ಆ ವೈದ್ಯ ಮಾಡಿದ ಕೆಲಸವಾದರೂ ಏನು ಗೊತ್ತೇ? ತಿಳಿದರೆ ನೀವು ಕೂಡ ಆತನ ಬಗ್ಗೆ ಅಸಹ್ಯ ಭಾವನೆಯನ್ನು ತೋರ್ಪಡಿಸುತ್ತೀರಿ.

ಕಲ್ಕತ್ತಾದ ಫುಲ್ ಬಗಾನ್ನಲ್ಲಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯೊಂದರಲ್ಲಿ ವೈದ್ಯನೊಬ್ಬ ಮಹಿಳಾ ರೋಗಿಗೆ ಲೈಂಗಿಕವಾಗಿ ಕಿರುಕುಳ ನೀಡಿರುವ ಘಟನೆ ನಡೆದಿದೆ. ಹೌದು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಹಿಳೆಯೊಬ್ಬರಿಗೆ ಪಿತ್ತಕೋಶದ ಸಮಸ್ಯೆ ಇತ್ತು. ಹಾಗಾಗಿ ಕಳೆದ ಗುರುವಾರ ಬೆಳಗ್ಗೆ 9 ಗಂಟೆಗೆ ಸರಿಯಾಗಿ ಆ ಮಹಿಳಾ ರೋಗಿಗೆ ಪಿತ್ತಕೋಶದ ಶಸ್ತ್ರಚಿಕಿತ್ಸೆ ನಡೆಸಲು ಆಪರೇಷನ್ ವಿಭಾಗಕ್ಕೆ ಕರೆದುಕೊಂಡು ಹೋಗಲಾಗಿದೆ.

ಬಳಿಕ 11 ಗಂಟೆ ಹೊತ್ತಿಗೆ ಪಿತ್ತ ಕೋಶದ ಶಸ್ತ್ರಚಿಕಿತ್ಸೆಯನ್ನು ಮಾಡಿ ಮುಗಿಸಲಾಗಿತ್ತು. ನಂತರ ರೋಗಿಗೆ ಪ್ರಜ್ಞೆ ಸ್ವಲ್ಪವಾಗಿ ಬರಲು ಆರಂಭಿಸಿದಾಗ ಯಾರೋ ತನ್ನ ಮೇಲೆ ಬಿದ್ದು ತನಗೆ ದೈಹಿಕವಾಗಿ ಕಿರುಕುಳ ಕೊಡುತ್ತಿರುವಂತೆ ಭಾಸವಾಗಿದೆ. ಕೊನೆಗೆ ಸಂಪೂರ್ಣ ಎಚ್ಚೆತ್ತ ಆಕೆಗೆ ಆಪರೇಷನ್ ಆದ ಕಾರಣ ಜೋರಾಗಿ ಕಿರುಚಲು ಕೂಡ ಆಗಿಲ್ಲ. ಇಂತಹ ಪರಿಸ್ಥಿತಿಯಲ್ಲಿದ್ದಾಗ ವೈದ್ಯರು ಆಕೆಯನ್ನು ತಬ್ಬಿಕೊಂಡು ಅವಳಿಗೆ ನೋವಾಗುವಂತೆ ಅಸಭ್ಯವಾಗಿ ವರ್ತಿಸಿದ್ದಾರೆ.

ಕೊನೆಗೆ ಹೇಗೋ ಬಿಡಿಸಿಕೊಂಡ ಮಹಿಳೆ ಡಾಕ್ಟರ್ ನಿಂದ ಬಚಾವ್ ಆಗಿದ್ದಾಳೆ. ಚೇತರಿಸಿಕೊಂಡ ಬಳಿಕ ಡಾಕ್ಟರ್ ವಿರುದ್ಧ ಫುಲ್ ಬಗಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದೀಗ ಆರೋಪಿಗೆ ಸೆಕ್ಷ ನ್ 354ರ ಅಡಿಯಲ್ಲಿ ಶಿಕ್ಷೆ ವಿಧಿಸಲಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ನಮ್ಮ ಗತಿಯೇನು ಎಂಬುದು ಚಿಂತೆಗೀಡುಮಾಡುವುದು ಸತ್ಯ.

Leave A Reply

Your email address will not be published.