ಬೇಷರಮ್ ರಂಗ್ ಹಾಡಿಗೆ ಕ್ಯಾಟ್ ವಾಕ್ ಮಾಡಿದ ಉರ್ಫಿ!

ಉರ್ಫಿ ಒಂದಲ್ಲ ಒಂದು ರೀತಿಯಾಗಿ ಬಟ್ಟೆಗಳ ವಿಷಯಕ್ಕೆ ಸದ್ಧನ್ನು ಮಾಡ್ತಾನೆ ಇರುತ್ತಾಳೆ. ಆಕೆ ಹಾಕುವಂತ ಬಟ್ಟೆಗಳನ್ನು ಇನ್ನೊಬ್ಬರು ಕೊಂಡುಕೊಳ್ಳಲು ಸಾಧ್ಯವಿಲ್ಲ. ಪಿನ್, ಪ್ಲಾಸ್ಟಿಕ್ ಹೀಗೆ ಸಿಕ್ಕಿದ ವಸ್ತುಗಳಿಂದ ತನ್ನ ಉಡುಗೆಯನ್ನು ರೆಡಿ ಮಾಡಿಕೊಳ್ಳುತ್ತಾಳೆ ಉರ್ಫಿ.

ಈ ಎರಡು ದಿನಗಳ ಹಿಂದೆ ಮೇಕಪ್ ಇಲ್ಲದೆ, ಮೈ ತುಂಬಾ ಬಟ್ಟೆಯನ್ನು ಹಾಕಿಕೊಂಡು ರೆಸ್ಟೋರೆಂಟ್ ಗೆ ಬಂದ ಉರ್ಫಿ ಸಖತ್ ವೈರಲ್ ಆಗಿದ್ಲು. ಇದೀಗ ಬಾಲಿವುಡ್ ನ ಒಂದು ಹಾಡಿಗೆ ಹಾಟ್ ಹೆಜ್ಜೆ ಹಾಕಿದ್ದಾಳೆ.

ಭಾರೀ ವಿವಾದವನ್ನು ಸೃಷ್ಠಿಸಿದ ಪಠಾಣ್ ಸಿನಿಮಾದ ಬೇಷರಮ್ ರಂಗ್ ಹಾಡು ಸಾಮಾನ್ಯವಾಗಿ ಎಲ್ಲರಿಗು ಗೊತ್ತಿರಬಹುದು. ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕನಿ ಧರಿಸಿದ್ದಕ್ಕೆ ಸಾಕಷ್ಟು ಟೀಕೆಗಳು ಬಂದಿತ್ತು.

ಇದಾದ ಮೇಲೆ ಈ ಹಾಡಿಗೆ ಹಲವಾರು ಜನರು ವಿಡಿಯೋಗಳನ್ನು ಕೂಡ ಮಾಡಿದ್ದರು. ಇದೀಗ ಉರ್ಫಿ ಕೇಸರಿ ಹೇಲ್ಡ್ಸ್, ಕೇಸರಿ ಬಟ್ಟೆಯನ್ನು ತೊಟ್ಟು, ತನ್ನ ಸೆಕ್ಷಿ ಲುಕ್ ನಿಂದ ಸಖತ್ ಆಗಿ ವಾಕ್ ಮಾಡಿದ್ದಾರೆ. ಆ ಬಟ್ಟೆಯ ವಿನ್ಯಾಸವು ಕೂಡ ವಿಭಿನ್ನವಾಗಿದೆ. ನೀವು ಕೂಡ ವಿಡಿಯೋ ನೋಡಿ.

Leave A Reply

Your email address will not be published.