KPSC Recruitment 2023: ಕೆಪಿಎಸ್‌ಸಿ ಇಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಲೋಕಸೇವಾ ಆಯೋಗವು ಇದೀಗ ವಿವಿಧ ಟೆಕ್ನಿಕಲ್ ಪೋಸ್ಟ್ಗಳ ಭರ್ತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ  03 ವರ್ಷದ ಅವಧಿಗೆ ಭರ್ತಿ ಮಾಡಿಕೊಳ್ಳುವುದಾಗಿ ಪ್ರಕಟಣೆ ಮೂಲಕ ಮಾಹಿತಿ ನೀಡಿದೆ.  ಈ ಹುದ್ದೆಗಳ ವಿವರ, ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನದ ಬಗ್ಗೆ ಮಾಹಿತಿ ಪಡೆದುಕೊಂಡು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ
ಸೀನಿಯರ್ ಪ್ರೋಗ್ರಾಮರ್ : 01
ಜೂನಿಯರ್ ಪ್ರೋಗ್ರಾಮರ್ : 2
ಡಾಟಾ ಬೇಸ್ ಅಡ್ಮಿನ್ : 01
ನೆಟ್ವರ್ಕ್ ಅಡ್ಮಿನ್ : 01
ಒಟ್ಟು ಹುದ್ದೆಗಳು : 05
ಅರ್ಜಿ ಸಲ್ಲಿಸಲು  10-01-2023 ಕೊನೆಯ ದಿನವಾಗಿದೆ.

ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೀಗಿವೆ:
ನಿಗದಿತ ವಿದ್ಯಾರ್ಹತೆಯ ಜೊತೆಗೆ ಅಗತ್ಯ ಸೇವಾನುಭವ ಹೊಂದಿರುವ ಅಭ್ಯರ್ಥಿಗಳ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತರು ಅರ್ಜಿಯೊಂದಿಗೆ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ವಿದ್ಯಾರ್ಹತೆ, ಸೇವಾ ವಿವರಗಳ ಜೊತೆಗೆ  ಸಂಪೂರ್ಣ ಮಾಹಿತಿಯ ರೆಸ್ಯೂಮ್ ಮತ್ತು ಅಗತ್ಯ ದಾಖಲೆಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಮುಚ್ಚಿದ ಲಕೋಟೆಯಲ್ಲಿ ಅರ್ಜಿ ತಲುಪಿಸಬೇಕಾಗುತ್ತದೆ.

ನಿಬಂಧನೆ ಹಾಗೂ ಷರತ್ತುಗಳು :
-03 ವರ್ಷ ಸೇವೆ ಅವಧಿ ಇರಲಿದ್ದು,  ಆದರೆ ಅಭ್ಯರ್ಥಿಯ 01 ವರ್ಷದ ಕಾರ್ಯನಿರ್ವಹಣೆಯನ್ನು ಅವಲಿಂಬಿಸಿ ಉದ್ಯೋಗಿಯ ಕಾರ್ಯದ ಆಧಾರದ ಅನುಸಾರ ಅವಧಿಯ ಬಗ್ಗೆ ನಿರ್ಣಯ ಕೈಗೊಳ್ಳಲಾಗುತ್ತದೆ.ಇದರ ಜೊತೆಗೆ ಎಲ್ಲಾ ಹುದ್ದೆಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ಕೆಪಿಎಸ್ಸಿ ನಡೆಸುವ ಸ್ಕಿಲ್ ಟೆಸ್ಟ್ ಅನ್ನು ಪಾಸ್ ಮಾಡಬೇಕಾಗಿದೆ.

ಹುದ್ದೆಯ ಅನುಸಾರ ವಿದ್ಯಾರ್ಹತೆ ವಿವರ ಹೀಗಿದೆ:

ಸೀನಿಯರ್ ಪ್ರೋಗ್ರಾಮರ್ : ಸಿಎಸ್ / ಸಿಎ / ಐಟಿ / ಮಾಹಿತಿ ತಂತ್ರಜ್ಞಾನ/ ಇಲೆಕ್ಟ್ರಾನಿಕ್ಸ್ / ಕಂಮ್ಯುನಿಕೇಷನ್ ವಿಷಯಗಳಲ್ಲಿ ಇಂಜಿನಿಯರಿಂಗ್ ಅಥವಾ ಪಿಜಿ ಅಥವಾ ಎಂಎಸ್ ಪಾಸ್ ಆಗಿದ್ದು ಇದರ ಜೊತೆಗೆ  ಕನಿಷ್ಠ 5 ವರ್ಷ ಈ ಕ್ಷೇತ್ರದಲ್ಲಿ ಕಾರ್ಯ ಮಾಡಿದ ಅನುಭವ ಇರಬೇಕು.

ಡಾಟಾ ಬೇಸ್ ಅಡ್ಮಿನ್  ಆಗಲು ಸಿಎಸ್ / ಸಿಎ / ಐಟಿ / ಮಾಹಿತಿ ತಂತ್ರಜ್ಞಾನ / ಇಲೆಕ್ಟ್ರಾನಿಕ್ಸ್ / ಕಂಮ್ಯುನಿಕೇಷನ್ ವಿಷಯಗಳಲ್ಲಿ ಇಂಜಿನಿಯರಿಂಗ್ ಅಥವಾ ಪಿಜಿ ಅಥವಾ ಎಂಎಸ್ ಪಾಸ್ ಆಗಿದ್ದು ಇದರ ಜೊತೆಗೆ ಕನಿಷ್ಠ 3 ವರ್ಷ ಕಾರ್ಯಾನುಭವ ಬೇಕಾಗುತ್ತದೆ.

ಜೂನಿಯರ್ ಪ್ರೋಗ್ರಾಮರ್  ಹುದ್ದೆಗೆ ವಿದ್ಯಾರ್ಹತೆ ಸಿಎಸ್ / ಸಿಎ / ಐಟಿ / ಮಾಹಿತಿ ತಂತ್ರಜ್ಞಾನ /ಇಲೆಕ್ಟ್ರಾನಿಕ್ಸ್ / ಕಂಮ್ಯುನಿಕೇಷನ್ ವಿಷಯಗಳಲ್ಲಿ ಇಂಜಿನಿಯರಿಂಗ್ ಅಥವಾ ಪಿಜಿ ಅಥವಾ ಎಂಎಸ್ ಪಾಸ್ ಆಗಿದ್ದು, ಇದರ ಜೊತೆಗೆ  ಕನಿಷ್ಠ 3 ವರ್ಷ ಈ ಕಾರ್ಯದಲ್ಲಿ ಅನುಭವ ಇರಬೇಕು.

ನೆಟ್ವರ್ಕ್ ಅಡ್ಮಿನ್ ಆಗಲು ಸಿಎಸ್ / ಸಿಎ / ಐಟಿ / ಮಾಹಿತಿ ತಂತ್ರಜ್ಞಾನ / ಇಲೆಕ್ಟ್ರಾನಿಕ್ಸ್ / ಕಂಮ್ಯುನಿಕೇಷನ್ ವಿಷಯಗಳಲ್ಲಿ ಇಂಜಿನಿಯರಿಂಗ್ ಅಥವಾ ಪಿಜಿ ಅಥವಾ ಎಂಎಸ್ ಪಾಸ್. ಸಿಸಿಎನ್ಎ / ಎಂಸಿಎಸ್ಇ ಸರ್ಟಿಫಿಕೇಟ್ ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.

ಅರ್ಜಿ ಸಲ್ಲಿಸಬೇಕಾದ ವಿಳಾಸ

ಶ್ರೀ ಸುರಳ್ಕರ್ ವಿಕಾಸ್ ಕಿಶೋರ್, ಭಾ.ಆ.ಸೇ, ಕಾರ್ಯದರ್ಶಿಗಳು, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು – 560001.ಅರ್ಜಿ ಲಕೋಟೆ ಮೇಲೆ ‘To be opened by Secretary only’ ಎಂದು ಬರೆದಿರಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Leave A Reply

Your email address will not be published.