ʼಗಡಿನಾಡ ಕನ್ನಡಿಗʼ ಕುರಿತ ಮಾತಿಗೆ ಸ್ಪಷ್ಟನೆ ಕೊಟ್ಟ ಬಿಗ್‌ಬಾಸ್‌ ವಿನ್ನರ್‌ ರೂಪೇಶ್‌ ಶೆಟ್ಟಿ

ಮನರಂಜನೆಯ ಉಣಬಡಿಸುವ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ದೊಡ್ಮನೆಯ ಆಟದಲ್ಲಿ ರಾಕೇಶ್ ಅಡಿಗ ಹಾಗೂ ಕರಾವಳಿಯ ರೂಪೇಶ್ ಶೆಟ್ಟಿ ಕೊನೆ ಘಟ್ಟದ ವರೆಗೂ ಸ್ಥಿರತೆ ಕಾಯ್ದುಕೊಂಡು ಕುತೂಹಲ ಮೂಡಿಸುತ್ತಾ ಗೆಲುವಿನ ಪಟ್ಟ ಯಾರ ಪಾಲಾಗಲಿದೆಯೋ ಎಂಬ ಕಾತುರ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಕೊನೆಗೂ ‘ಬಿಗ್ ಬಾಸ್​ ಕನ್ನಡ ಸೀಸನ್ 9’ (BBK 9) ವಿಜೇತರ ಪಟ್ಟಿ ಹೊರ ಬಿದ್ದು, ದೊಡ್ದ ಅಭಿಮಾನಿ ಬಳಗ ಹೊಂದಿದ್ದ ರೂಪೇಶ್ ಶೆಟ್ಟಿ ಸೀಸನ್ 9 ರಲ್ಲಿ ವಿನ್ನರ್ ಆಗಿದ್ದು, ಗೊತ್ತಿರುವ ವಿಚಾರವೇ!!!

ಕರಾವಳಿ ಪ್ರತಿಭೆ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಬಿಗ್ ಬಾಸ್ ಸೀಸನ್ 9ರ ಗೆಲುವಿನ ನಗೆ ಬೀರಿ ಎಲ್ಲರ ಮನ ಗೆದ್ದಿದ್ದಾರೆ. ಈ ನಡುವೆ ರೂಪೇಶ್ ಶೆಟ್ಟಿ ‘ಗಡಿನಾಡ ಕನ್ನಡಿಗ’ ಎಂದು ಹೇಳಿದರ ಕುರಿತಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕನ್ನಡ ರಾಜ್ಯೋತ್ಸವದ ದಿನ ಮಾತನಾಡುತ್ತಾ, `ನಾನು ಗಡಿನಾಡ ಕನ್ನಡಿಗ’ ಎಂದು ಹೇಳಿಕೊಂಡಿದ್ದ ರೂಪಿ, ತಾನು ಹುಟ್ಟಿ ಬೆಳೆದ ಊರಿನ ಬಾಂಧವ್ಯದ ಬಗ್ಗೆ ಹೇಳಿಕೊಂಡಿದ್ದರು.

ತುಳುನಾಡಿನಲ್ಲಿ ಖ್ಯಾತಿ ಪಡೆದಿರುವ ರೂಪೇಶ್ ಶೆಟ್ಟಿ ‘ ಗಡಿನಾಡ ಕನ್ನಡಿಗ ‘ ಎಂಬ ಬಗ್ಗೆ ಹೇಳಿಕೆ ನೀಡಿದ್ದು ಕರಾವಳಿಯ ಜನರ ಮನದಲ್ಲಿ ಅಸಮಾಧಾನ ಹುಟ್ಟುಹಾಕಲು ಕಾರಣವಾಗಿ ಮಾರ್ಪಟ್ಟಿತ್ತು. ಹೀಗಾಗಿ, ರೂಪೇಶ್ ಶೆಟ್ಟಿಯವರನ್ನು ವಿರೋಧಿಸುವ ನಿಟ್ಟಿನಲ್ಲಿ ರೂಪೇಶ್ ಶೆಟ್ಟಿ ಕುಟುಂಬಕ್ಕೆ ಕೆಟ್ಟ ಮಾತುಗಳಿಂದ ಜರಿದು ಅವಾಚ್ಯ ಶಬ್ದ ಗಳ ಬಳಕೆ ಮಾಡಲಾಗಿತ್ತು. ಈ ಕುರಿತು ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ರೂಪೇಶ್ ಶೆಟ್ಟಿ ಈ ವಿಚಾರದ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಗಡಿನಾಡ ಕನ್ನಡಿಗ ಅಂದಿದ್ದು ಯಾಕೆ ರಾಂಗ್ ಆಯ್ತು ಎನ್ನುವುದು ನನಗೆ ತಿಳಿಯುತ್ತಿಲ್ಲ. ನಾನು ಕಾಸರಗೋಡಿನಲ್ಲಿ ಹುಟ್ಟಿದ್ದು, 10 ತರಗತಿ ನಂತರ ನಾನು ಮಂಗಳೂರಿಗೆ (Mangaluru) ಬಂದಿರುವ ಬಗ್ಗೆ ರೂಪಿ ಹೇಳಿದ್ದಾರೆ. ತಾನೊಬ್ಬ ಮಂಗಳೂರಿಗ ಜೊತೆಗೆ ತುಳುವ ಎಂಬ ಬಗ್ಗೆ ಯಾವಾಗಲೂ ಹೆಮ್ಮೆಯಿಂದ ಹೇಳುತ್ತೇನೆ. ಈ ಬಗ್ಗೆ ನನಗೆ ಖುಷಿಯಿದೆ ಎಂದು ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೇಳಿದ್ದಾರೆ.

ಕರ್ನಾಟಕ ಎಂದು ಬಂದಾಗ ತಲಪಾಡಿಯಿಂದ ಆಚೆಗೆ ಬಾರ್ಡರ್ ಆಗಿದ್ದು, ಕರ್ನಾಟಕ ಎನ್ನುವ ವಿಚಾರ ಬಂದ್ರೆ ತಲಪಾಡಿಯಿಂದ ನಮ್ಮ ಮನೆಗೆ ಕೇವಲ 30 ಕಿ.ಲೋ ಮೀಟರ್ ಅಂತರವಷ್ಟೆ. ಹೀಗಾಗಿ, ಕರ್ನಾಟಕ್ಕೆ ಸೇರಬೇಕು ಎಂಬ ಹೆಬ್ಬಯಕೆ ಇದ್ದವರು ಕನ್ನಡವನ್ನು ಕರಗತ ಮಾಡಿಕೊಳುತ್ತಾರೆ. ಕನ್ನಡವನ್ನು ಕಲಿಯಬೇಕು ಎನ್ನುವ ಅಭಿಲಾಷೆ ಇದ್ದವರಿಗೆ ಜೊತೆಗೆ ಕರ್ನಾಟಕಕ್ಕೆ ಸೇರಬೇಕು ಎನ್ನುವವರಿಗೆ ಗಡಿನಾಡ ಕನ್ನಡಿಗ ಎಂದು ಕರೆಯುವ ಕ್ರಮ ಊರಲ್ಲಿದೆ. ನಾನು ಎಲ್ಲಿ ಹುಟ್ಟಿದ್ದು ಎನ್ನುವ ವಿವರಣೆ ಕೊಟ್ಟ ಸಂದರ್ಭ ಗಡಿನಾಡ ಕನ್ನಡಿಗ ಎಂದು ಹೇಳಿಕೊಂಡಿರುವ ಬಗ್ಗೆ ರೂಪೇಶ್ ಶೆಟ್ಟಿ ಪ್ರತಿಕ್ರಿಯೆ ನೀಡಿದ್ದಾರೆ.

Leave A Reply

Your email address will not be published.