FD Rates: ಗ್ರಾಹಕರಿಗೆ ಹೊಸ ವರ್ಷದ ಉಡುಗೊರೆ ನೀಡಿದ ಬ್ಯಾಂಕ್!

ಪ್ರತಿಯೊಬ್ಬರು ದುಡಿದ ಆದಾಯವನ್ನು ಭವಿಷ್ಯದಲ್ಲಿ ಎದುರಾಗುವ ಆರ್ಥಿಕ ಮುಗ್ಗಟ್ಟು ತಲೆ ದೋರದಂತೆ ಮುಂಜಾಗ್ರತ ಕ್ರಮವಾಗಿ ಉಳಿತಾಯ ಮಾಡುವುದು ಉತ್ತಮ ಹವ್ಯಾಸವಾಗಿದೆ. ಪ್ರತಿಯೊಬ್ಬರು ಕೂಡ ಭವಿಷ್ಯದ ಬಗ್ಗೆ ಚಿಂತನೆ ನಡೆಸುವುದು ಸಹಜ. ಹಾಗಾಗಿ, ಬ್ಯಾಂಕ್, ಪೋಸ್ಟ್ ಆಫೀಸ್, ಇಲ್ಲವೇ ಇನ್ನಿತರ ಹಣಕಾಸಿನ ವ್ಯವಹಾರ ದಲ್ಲಿ ಹೂಡಿಕೆ ಮಾಡುವುದು ವಾಡಿಕೆ.

 

ನೀವು ಬ್ಯಾಂಕ್‌ಗಳಲ್ಲಿ ನಿಶ್ಚಿತ ಠೇವಣಿ ಮಾಡಲು ಚಿಂತನೆ ನಡೆಸಿದ್ದರೆ ನಿಮಗೆ ಸಿಹಿ ಸುದ್ದಿಯೊಂದು ಕಾದಿದೆ. ಹೌದು!!!ಈಗ ಅನೇಕ ಬ್ಯಾಂಕುಗಳು ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರವನ್ನು ಏರಿಸಿದ್ದು, ಈ ಸಾಲಿಗೆ ಮತ್ತೊಂದು ಬ್ಯಾಂಕ್ ಸೇರಿಕೊಂಡಿದೆ.

ಹಣದುಬ್ಬರದಿಂದಾಗಿ ಆರ್‌ಬಿಐ ಪ್ರಮುಖ ರೆಪೊ ದರಗಳನ್ನು ಆಗಾಗ ಹೆಚ್ಚಿಸುತ್ತಿದ್ದು, ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಬ್ಯಾಂಕ್‌ಗಳು ಎಫ್‌ಡಿ ಮೇಲಿನ ಬಡ್ಡಿದರವನ್ನು ಏರಿಸುತ್ತಿವೆ. ಇದೀಗ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಮತ್ತೊಮ್ಮೆ ಎಫ್‌ಡಿ ದರಗಳನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಿಸಿದೆ.

ಈ ಹೆಚ್ಚಳವು ಆಯ್ದ ಅವಧಿಯ ಠೇವಣಿಗಳಿಗೆ ಮಾತ್ರ ಅನ್ವಯವಾಗಲಿದೆ. ಮೊದಲು ಶೇ.6.25 ರಷ್ಟಿದ್ದ ಒಂದರಿಂದ ಮೂರು ವರ್ಷಗಳ ಅವಧಿಯ ಠೇವಣಿಗಳ ಮೇಲಿನ ಬಡ್ಡಿ ದರ ಶೇ.6.75ಕ್ಕೆ ಏರಿಕೆ ಕಂಡಿದೆ. ಠೇವಣಿಗಳ ಹೆಚ್ಚಿದ ಬಡ್ಡಿದರಗಳು ಜನವರಿ 1 ರಿಂದ ಜಾರಿಗೆ ಬಂದಿವೆ ಎಂದು PNB ಬಹಿರಂಗಪಡಿಸಿದೆ.

ವಿವಿಧ ಅವಧಿಗಳ FD ಗಳ ಮೇಲೆ ಸಾಮಾನ್ಯ ಜನರಿಗೆ ಹೋಲಿಸಿದರೆ ಬ್ಯಾಂಕ್ ಹಿರಿಯ ನಾಗರಿಕರಿಗೆ ಹೆಚ್ಚುವರಿ 0.50% ಬಡ್ಡಿಯನ್ನು ನೀಡಲಾಗುತ್ತದೆ. PNB ಉತ್ತಮ್ ಯೋಜನೆಯಲ್ಲಿ ಪ್ರೀ-ಮೆಚ್ಯೂರ್ ವಿತ್ ಡ್ರಾವಲ್ ಆಯ್ಕೆಯಿಲ್ಲದೆ, ಬಡ್ಡಿ ದರವು 6.30 ಶೇಕಡಾದಿಂದ 6.80 ಕ್ಕೆ ಏರಿದೆ. ಪರಿಷ್ಕೃತ ಬಡ್ಡಿದರಗಳ ಜೊತೆಗೆ, 666-ದಿನಗಳ ನಿಶ್ಚಿತ ಠೇವಣಿಗೆ ವಾರ್ಷಿಕ 8.1 ರ ಆಕರ್ಷಕ ಬಡ್ಡಿ ದರವನ್ನು ಬ್ಯಾಂಕ್ ನೀಡುತ್ತಿದೆ.

PNB ಯ ಇತ್ತೀಚಿನ ಬಡ್ಡಿ ದರಗಳು 2 ಕೋಟಿ ರೂ. ಒಳಗಿನ ವಿವಿಧ ಅವಧಿಗಳೊಂದಿಗೆ ಟರ್ಮ್ ಡೆಪಾಸಿಟ್‌ಗಳು ಹೀಗಿವೆ: PNB 7 ದಿನಗಳಿಂದ 14 ದಿನಗಳ ಅವಧಿಯೊಂದಿಗೆ FD ಗಳಲ್ಲಿ ಸಾಮಾನ್ಯ ಜನರಿಗೆ 3.50 ಪ್ರತಿಶತ ಬಡ್ಡಿಯ ಸೌಲಭ್ಯ ಕಲ್ಪಿಸಿದೆ. 15 ದಿನಗಳಿಂದ 29 ದಿನಗಳು ಮತ್ತು 30 ದಿನಗಳಿಂದ 45 ದಿನಗಳ ಎಫ್‌ಡಿಗಳು ಸಹ 3.50 ಪ್ರತಿಶತ ಬಡ್ಡಿಯನ್ನು ನೀಡುತ್ತಿವೆ. 46 ದಿನಗಳಿಂದ 90 ದಿನಗಳ ಎಫ್‌ಡಿಗಳಿಗೆ ಮತ್ತು 91 ದಿನಗಳಿಂದ 179 ದಿನಗಳ ಎಫ್‌ಡಿಗಳಿಗೆ ಶೇಕಡಾ 4.50 ಬಡ್ಡಿಯನ್ನು ಪಾವತಿ ಮಾಡಲಾಗುತ್ತಿದೆ.

PNB 666 ದಿನಗಳ FD ಗಳ ಮೇಲೆ ಗರಿಷ್ಠ 7.25 ಶೇಕಡಾ ಬಡ್ಡಿ ದರವನ್ನು ಪಾವತಿ ಮಾಡುತ್ತಿದೆ. 667 ಎರಡು ವರ್ಷ ಮತ್ತು ಎರಡರಿಂದ ಮೂರು ವರ್ಷಗಳವರೆಗಿನ FD ಗಳ ಮೇಲೆ 6.75 ಶೇಕಡಾ ಬಡ್ಡಿಯನ್ನು ಪಾವತಿಸಲಾಗುತ್ತಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರು ಮೂರರಿಂದ ಐದು ವರ್ಷಗಳವರೆಗೆ ಮತ್ತು ಐದರಿಂದ ಹತ್ತು ವರ್ಷಗಳವರೆಗೆ ಎಫ್‌ಡಿಗಳ ಮೇಲೆ ಶೇಕಡಾ 6.50 ಬಡ್ಡಿಯನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.

PNB 180 ದಿನಗಳಿಂದ 270 ದಿನಗಳವರೆಗೆ ಮತ್ತು 271 ದಿನಗಳಿಂದ ಒಂದು ವರ್ಷಕ್ಕಿಂತ ಕಡಿಮೆ FD ಗಳ ಮೇಲೆ 5.50 ಪ್ರತಿಶತ ಬಡ್ಡಿಯನ್ನು ಪಾವತಿಸುತ್ತಿದೆ. ಅದೇ ರೀತಿ, ಒಂದು ವರ್ಷದಿಂದ 665 ದಿನಗಳ ಅವಧಿಯ FD ಗಳ ಮೇಲೆ 6.75 ಪ್ರತಿಶತ ಬಡ್ಡಿಯನ್ನು ಪಾವತಿ ಮಾಡಲಾಗುತ್ತಿದೆ.

Leave A Reply

Your email address will not be published.