WhatsApp Update : ಬಂತು ನೋಡಿ ವಾಟ್ಸಪ್ ನಲ್ಲಿ ಅದ್ಭುತ ಫೀಚರ್

ಮೆಟಾ ಮಾಲೀಕತ್ವದ ಜನಪ್ರಿಯ ವಾಟ್ಸಪ್ ಸಂದೇಶ ರವಾನೆ ಮಾಡಲು ಅತೀ ಹೆಚ್ಚು ಬಳಕೆಯಾಗುವ ಫ್ಲಾಟ್’ಫಾರ್ಮ್ ಆಗಿದ್ದು, ವಾಟ್ಸಪ್ ಕಾಲ್, ಅಥವಾ ವಾಟ್ಸಪ್ ವಿಡಿಯೋ ಕಾಲ್, ವಾಟ್ಸಪ್ ಚಾಟ್ ಇತ್ತೀಚಿನ ದಿನಗಳಲ್ಲಿ ಭಾರಿ ಜನಪ್ರಿಯವಾಗಿದ್ದು, ಹೆಚ್ಚಿನ ಜನರು ಬಳಸುವ ಅಪ್ಲಿಕೇಶನ್ ಗಳಲ್ಲಿ ಒಂದಾಗಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಅಪ್ಡೇಟ್ ಗಳನ್ನು ನೀಡುವ ಮೂಲಕ ಜನರ ಮನಸ್ಸನ್ನು ಸೆಳೆದಿದೆ. ಈ ವರ್ಷ, 2023ರಲ್ಲಿ ಕೂಡಾ ವಾಟ್ಸಾಪ್​ ಇನ್ನೂ ಹಲವಾರು ಅಪ್ಡೇಟ್ಸ್​​ ಗಳನ್ನು ಮಾಡಲಿದೆ ಎಂದು ಹೇಳಿದೆ. ಈ ಮಧ್ಯೆ ಇದೀಗ ವಾಟ್ಸಾಪ್​ನಲ್ಲಿ ಮತ್ತೊಂದು ಫೀಚರ್ಸ್​ ಅನ್ನು ಬಿಡುಗಡೆ ಮಾಡಿದೆ.

 

ವಾಟ್ಸಪ್​ ಕೆಲದಿನಗಳ ಹಿಂದೆ ಅಷ್ಟೇ ಮೆಸೇಜ್​ ಅನ್ನು ಅಂಡೂ(undo) ಮಾಡುವ ಫೀಚರ್ಸ್​ ಅನ್ನು ಬಿಡುಗಡೆ ಮಾಡಿತ್ತು. ಈ ಮೂಲಕ ಬಳಕೆದಾರರು ಯಾರಿಗಾದರೂ ತಪ್ಪಿ ಮೆಸೇಜ್​ ಕಳುಹಿಸಿದ್ದರೆ, ಅದನ್ನು ರೀ ಎಡಿಟ್​ ಮಾಡಿ ಮತ್ತೆ ಸೆಂಡ್​ ಮಾಡುವ ಅವಕಾಶವಿದೆ. ಬಳಕೆದಾರರು ಡಿಲೀಟ್​ ಫಾರ್​ ಮಿ ಎಂದು ಕೊಟ್ಟಾಗ ಅದರಲ್ಲಿ ಅಂಡೂ ಎಂಬ ಆಯ್ಕೆ ಕಾಣುತ್ತದೆ. ಅದನ್ನು ಸೆಲೆಕ್ಟ್​ ಮಾಡಿ ಮತ್ತೆ ಮೆಸೇಜ್ ಎಡಿಟ್ ಮಾಡುವ ಮೂಲಕ ಆ್ಯಕ್ಸಿಡೆಂಟಲ್ ಫೀಚರ್​ ಅನ್ನು ಬಳಸಬಹುದಾಗಿದೆ.

ವಾಟ್ಸಾಪ್​ ಈ ಬಾರಿ ಬಿಡುಗಡೆ ಮಾಡಿರುವಂತಹ ಫೀಚರ್​ ಜನರಿಗೆ ಬಹಳಷ್ಟು ಉಪಯುಕ್ತವಾಗಿದೆ. ಏಕೆಂದರೆ ಇದುವರೆಗೆ ಏನಾದರು ಅಗತ್ಯ ಮೆಸೇಜ್​ಗಳನ್ನು ಶೇರ್ ಮಾಡಬೇಕಾದರೆ ಗರಿಷ್ಟ 3 ಮಂದಿಯನ್ನು ಮಾತ್ರ ಪಿನ್​ ಮಾಡಲಾಗುತ್ತಿತ್ತು. ಆದರೆ ಇದೀಗ ವಾಟ್ಸಾಪ್​ ಈ ಸಂಖ್ಯೆಯನ್ನು 5 ಜನರಿಗೆ ಏರಿಸಿದೆ. ಈ ಮೂಲಕ ವಾಟ್ಸಾಪ್ ಚಾಟ್​ನಲ್ಲಿ 5 ಮಂದಿಯನ್ನು ಪಿನ್​ ಮಾಡಿಟ್ಟುಕೊಳ್ಳಬಹುದಾಗಿದೆ.

ಇದರಿಂದ ನೀವು ಪ್ರಮುಖ ಎನ್ನುವ ಚಾಟ್‌ಗಳಿಗೆ ಮೆಸೇಜ್ ಮಾಡುವುದು ಇನ್ನಷ್ಟು ಸುಲಭವಾಗಿದೆ. ಸದ್ಯ ಈ ಹೊಸ ಫೀಚರ್ಸ್‌ ಬಗ್ಗೆ ವಾಬೇಟಾಇನ್ಫೋ ವೆಬ್‌ಸೈಟ್‌ ವರದಿಯನ್ನು ಮಾಡಿದೆ. ಈ ಪ್ರಕಾರ ಪ್ರಸ್ತುತ, ವಾಟ್ಸಾಪ್‌ ಬಳಕೆದಾರರು ತಮ್ಮ ಚಾಟ್‌ ವಿಂಡೋದ ಮೇಲೆ ಕೇವಲ ಮೂರು ಚಾಟ್‌ಗಳನ್ನು ಮಾತ್ರ ಪಿನ್ ಮಾಡಬಹುದು. ಆದರೆ ಹೊಸ ಫೀಚರ್​​ ಮೂಲಕ ನೀವು ಐದು ಚಾಟ್‌ಗಳನ್ನು ಪಿನ್‌ ಮಾಡುವ ಅವಕಾಶ ಸಿಗಲಿದೆ.

ಇದುವರೆಗೆ ಬಳಕೆದಾರರು ವಾಟ್ಸಾಪ್ ಸ್ಟೇಟಸ್ ಮೂಲಕ ತಮಗೆ ಬೇಕಾದ ವಿಡಿಯೋ, ಫೋಟೋವನ್ನು ಹಂಚಿಕೊಳ್ಳಬಹುದಿತ್ತು. ಆದರೆ ಇನ್ಮುಂದೆ ಸ್ಟೇಟಸ್ ಹಾಕುವಾಗ ಎಚ್ಚರವಹಿಸುವಂತೆ ವಾಟ್ಸಾಪ್​ ಫೀಚರ್ಸ್​ ಬಿಡುಗಡೆ ಮಾಡಿದೆ. ಒಂದು ವೇಳೆ ಬಳಕೆದಾರರು ವಾಟ್ಸಾಪ್​ನಲ್ಲಿ ಜನರಿಗೆ ವೀಕ್ಷಿಸಲಾಗದ, ಅಶ್ಲೀಲ ವಿಡಿಯೋ, ಫೋಟೋಗಳನ್ನು ಹಾಕಿದರೆ ಆ ಸ್ಟೇಟಸ್​ ಅನ್ನು ರಿಪೋರ್ಟ್​ ಮಾಡುವ ಅವಕಾಶ ನೋಡುಗರಿಗೆ ದೊರೆಯಲಿದೆ. ಇದು ವಾಟ್ಸಪ್​ ಈ ಬಾರಿ ತಂದ ಹೊಸ ಅಪ್ಡೇಟ್ಸ್​ ಆಗಿದೆ.

Leave A Reply

Your email address will not be published.