ಈ ಹುಡುಗಿಯ ಟ್ಯಾಲೆಂಟ್ ನೋಡಿ | ಕಪ್ಪೆಯಂತೆಯೇ ನಾಲಗೆ ಬಿಟ್ಟು ನೊಣ ಹಿಡಿಯೋ ರೀತಿ | ನೆಟ್ಟಿಗರು ಫುಲ್ ಶಾಕ್!

ಸಾಮಾಜಿಕ ಮಾಧ್ಯಮಗಳಲ್ಲಿ ಒಂದಲ್ಲಾ ಒಂದು ವಿಡಿಯೋ ವೈರಲ್ ಆಗುತ್ತಲೇ ಇರುತ್ತದೆ. ಕೆಲವೊಂದು ತೀರಾ ಗಂಭೀರವಾಗಿದ್ದರೆ, ಇನ್ನೂ ಕೆಲವು ಹಾಸ್ಯಸ್ಪದಕವಾಗಿರುತ್ತದೆ. ಪ್ರಪಂಚವು ವಿಚಿತ್ರವಾದ ಸಂಗತಿಗಳಿಂದ ತುಂಬಿದೆ ಎಂದರೆ ತಪ್ಪಾಗಲಾರದು. ಏಕೆ ಗೊತ್ತಾ? ಇದು ಸಂಭವಿಸಲು ಸಾಧ್ಯವಿಲ್ಲ ಎಂಬಂತಹ ವಿಡಿಯೋಗಳನ್ನು ಇಲ್ಲಿ ನಾವು ನೋಡುತ್ತೇವೆ. ಆದರೆ ಕೆಲವೊಮ್ಮೆ ಇಂತಹ ಸಂಗತಿಗಳು ಕಂಡು ಅಚ್ಚರಿಯ ಜೊತೆ ಜೊತೆಗೆ ನಗುವೂ ಬರುವುದುಂಟು. ಕಪ್ಪೆಗಳು ನೊಣಗಳನ್ನು ನಾಲಿಗೆ ಚಾಚಿ ತಿನ್ನುವುದನ್ನು ನೋಡಿದ್ದೀರಿ. ಆದರೆ ಇಲ್ಲೊಬ್ಬ ಮಹಿಳೆ ನೊಣ ತಿನ್ನುವ ವಿಡಿಯೋ ಭಾರಿ ವೈರಲ್ ಆಗುತ್ತಿದ್ದೂ ಕಮೆಂಟ್’ಗಳ ಸುರಿಮಳೆಯೇ ಸುರಿದಿದೆ.

ಈ ವಿಡಿಯೋದಲ್ಲಿ ಒಂದು ಹುಡುಗಿ ಹಾಯಾಗಿ ಮಲಗಿ ಕೊಂಡು ನಾಲಿಗೆ ಹೊರ ಹಾಕಿದ್ದಾಳೆ. ಆಗ ಒಂದು ನೊಣ ಬಂದು ಅವಳ ನಾಲಿಗೆ ಮೇಲೆ ಕುಳಿತುಕೊಂಡಿತು. ನಿಧಾನವಾಗಿ ತನ್ನ ನಾಲಿಗೆಯನ್ನು ಬಾಯಿಯೊಳಗೆ ಎಳೆಯಲು ಪ್ರಾರಂಭಿಸಿದಳು. ನೊಣ ನಾಲಿಗೆ ಮೇಲೆ ಇನ್ನೂ ಕುಳಿತಿದೆ.

https://www.instagram.com/reel/Cm03_jGgCfT/?utm_source=ig_web_copy_link

ಈಗ ಹುಡುಗಿ ಇಡೀ ನಾಲಿಗೆಯನ್ನು ಬಾಯಿಯೊಳಗೆ ಎಳೆದುಕೊಂಡಳು ಮತ್ತು ತಕ್ಷಣವೇ ಬಾಯಿಯನ್ನು ಮುಚ್ಚಿದಳು. ಆಶ್ಚರ್ಯವೆಂದರೆ ನೊಣ ಅವಳ ಬಾಯೊಳಗೆ ಹೋಗಿದೆ ಮತ್ತು ಅದನ್ನು ತಿಂದಿದ್ದಾಳೆ. ನೋಡಿದ್ರೆ ಒಮ್ಮೆ ಶಾಕ್ ಆಗುವ ಈ ದೃಶ್ಯ ಕಂಡ್ರೆ ತುಂಬಾ ನಗು ಬರುತ್ತೆ. ನೊಣಗಳನ್ನು ತಿನ್ನುವ ಹುಡುಗಿಯನ್ನು ನೋಡಿ ನೆಟಿಜನ್‌ಗಳು ಕೂಡ ಆಶ್ಚರ್ಯ ಪಡುತ್ತಿದ್ದು, ತೀವ್ರವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಈ ವಿಡಿಯೋ Funtop ಹೆಸರಿನ ಹ್ಯಾಂಡಲ್‌ನೊಂದಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ.

Leave A Reply

Your email address will not be published.