Tourism: ಮಹಿಳೆಯರೇ ನಿಮಗೊಂದು ಹೊಸ ವರ್ಷಕ್ಕೆ ಹೊಸ ಪ್ಯಾಕೇಜ್
ಇತ್ತೀಚೆಗೆ ಕೆಎಸ್ ಆರ್ ಟಿಸಿ ಯಿಂದ ಟೂರ್ ಪ್ಯಾಕೇಜ್ ಬಿಡುಗಡೆಯಾಗುತ್ತಲೇ ಇದೆ. ಹಾಗೇ ಇದೀಗ ಪ್ರವಾಸೋದ್ಯಮ ಇಲಾಖೆಯಿಂದ ಮಹಿಳೆಯರಿಗೆ ಹೊಸ ವರ್ಷಕ್ಕೆ ಹೊಸ ಪ್ಯಾಕೇಜ್ ನೀಡಲಾಗಿದೆ.
ಪ್ರವಾಸೋದ್ಯಮ ಇಲಾಖೆಯಿಂದ ಹೊಸ ವರ್ಷದ ಕೊಡುಗೆಯಾಗಿ ಕೇರಳ ರಾಜ್ಯದಲ್ಲಿನ 32 ಪ್ರವಾಸಿ ತಾಣಗಳಲ್ಲಿ ಮಹಿಳೆಯರಿಗೆ ವಿಶೇಷವಾದ ಟೂರ್ ಪ್ಯಾಕೇಜ್ ಅನ್ನು ನೀಡಲಾಗಿದೆ. ಕೇರಳ ಅಧಿಕ ಸಂಖ್ಯೆಯ ಪ್ರವಾಸಿಗರನ್ನು ಆಕರ್ಷಿತಗೊಳಿಸಲು ಹೊರಟಿದೆ. ಹಾಗಾಗಿ ಮಹಿಳಾ ಸ್ನೇಹಿ ಪ್ರವಾಸಿ ತಾಣವಾಗಿಸಲು ಕೆಲವು ಪ್ರದೇಶಗಳನ್ನು ಆಯ್ಕೆ ಮಾಡಿದ್ದು, ಎಲ್ಲಾ ಕಡೆಯೂ ಮಹಿಳೆಯರು ಪಾಲ್ಗೊಳ್ಳಬೇಕು ಎಂಬ ಉದ್ದೇಶವಾಗಿದೆ. ಇನ್ನೂ, ಈ ವ್ಯವಸ್ಥೆ ಕೇವಲ ಮಹಿಳೆಯರಿಗೆ ಮಾತ್ರ ಇರುವುದಾಗಿದೆ.
ಈ ಪ್ರವಾಸದಲ್ಲಿ ಮಹಿಳೆಯರು ಸುರಕ್ಷಿತವಾಗಿ, ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಬಹುದಾಗಿದೆ. ಈ ಟೂರ್ ಪ್ಯಾಕೇಜ್ ಈ ತಿಂಗಳಿನಿಂದಲೇ(ಜನವರಿ) ಜಾರಿಯಾಗಲಿದೆ. ಕರ್ನಾಟಕದ ಪ್ರವಾಸಿಗರು ಕೂಡ ಇಲ್ಲಿ ಭೇಟಿ ನೀಡಬಹುದಾಗಿದೆ. ಹಾಗೇ ಹೋಮ್ ಸ್ಟೇ, ಟೂರ್ ಗೈಡ್, ಟೂರ್ ಆಪರೇಟರ್, ಟ್ಯಾಕ್ಸಿ, ರೆಸ್ಟೊರೆಂಟ್ ಮತ್ತು ಇತರೆ ವಲಯಗಳಿಗೆ ಸಂಬಂಧಿಸಿದ 1000 ಮಹಿಳಾ ಉದ್ಯಮಗಳು ರಾಜ್ಯದಲ್ಲಿ ನೋಂದಣಿಯಾಗಿವೆ.
ಈ ಮಹಿಳಾ ಉದ್ಯಮಿಗಳಿಗೆ ಜನವರಿಯಲ್ಲಿ ತರಬೇತಿ ಆರಂಭವಾಗಲಿದ್ದು, ಉದ್ದಿಮೆಗಳನ್ನು ಆರಂಭಿಸಲು ಇಚ್ಚಿಸುವವರಿಗೆ ವಿವಿಧ ಇಲಾಖೆಗಳ ನೆರವಿನ ಜೊತೆಗೆ ಸಾಲದ ಸೌಲಭ್ಯಗಳನ್ನು ಕೂಡ ಒದಗಿಸಲಾಗುವುದು ಎಂದು ಪ್ರವಾಸೋದ್ಯಮ ತಿಳಿಸಿದೆ. ಇಲ್ಲಿ ವಸತಿ, ಆಹಾರ, ಪ್ರಯಾಣ, ಮಾರ್ಗದರ್ಶಿ ಘಟಕ ಇವೆಲ್ಲವನ್ನೂ ಮಹಿಳೆಯರೇ ನಿರ್ವಹಿಸುತ್ತಾರೆ. ನಿವೇನಾದರೂ ಪ್ರವಾಸ ಕೈಗೊಳ್ಳುವುದಾದರೆ ಉತ್ತಮ ಪ್ಯಾಕೇಜ್ಗಳನ್ನು ಬುಕ್ ಮಾಡಬಹುದಾಗಿದೆ.