1986ರ ಬುಲೆಟ್ 350cc ಬೆಲೆ ಎಷ್ಟಿತ್ತು? ಇಲ್ಲಿದೆ ಅಸಲಿ ಬಿಲ್ !

ಕೆಲವರಿಗೆ ಹಿಂದಿನ ಕಾಲದ ವಸ್ತುಗಳು ಅಂದ್ರೆ ಅದೇನೋ ನಂಟು. ಹಾಗಾಗಿ ಅದನ್ನ ಜೋಪಾನ ಮಾಡಿಕೊಂಡು ಬಂದಿರುತ್ತಾರೆ. ಹಾಗೇ ಇದೀಗ ಹಳೆಯ ಕಾಲದ ಬುಲೆಟ್ ನ ಬಿಲ್ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಬುಲೆಟ್ ಅಂದ್ರೆ ಕೇಳ್ಬೇಕಿಲ್ಲ, ಕಣ್ಣ ಮುಂದೆ ಇದೆ ಅಂದ್ರೆ ಸಾಕು ನೋಟ ಕದಡೋದಿಲ್ಲ. ಅದರಲ್ಲೂ ಹುಡುಗಿಯರಿಗಂತೂ ಪಂಚಪ್ರಾಣ ಎಂದರೆ ತಪ್ಪಾಗಲಾರದು. ಇನ್ನೂ, ಆಗಿನ ಕಾಲದಲ್ಲಿ ಬುಲೆಟ್ ಬೆಲೆ ಎಷ್ಟಿದ್ದಿರಬಹುದು ಎಂದು ನೋಡೋಣ.

ಇಂದಿನ ಕಾಲದಲ್ಲಿ ಬುಲೆಟ್ ಬೆಲೆ ಎಷ್ಟಿರಬಹುದು? ಲಕ್ಷವೇ ಇದೆ ಅಲ್ವಾ!! ಕೆಲವರಿಗೆ ಇದನ್ನ ಕೊಳ್ಳೋದು ಕನಸಿನ ಮಾತೇ ಸರಿ. ಆದರೆ ಇದೀಗ ವೈರಲ್ ಆಗಿರುವ ಫೋಟೋದಲ್ಲಿ 1986ರಲ್ಲಿ ಬುಲೆಟ್ 350cc ಯ ಬೆಲೆ ಕೇವಲ 18ರಿಂದ 19 ಸಾವಿರ ಅಷ್ಟೇ!! ಆಶ್ಚರ್ಯವಾಗಿದೆ ಅಲ್ವಾ!! ಆದರೆ ಹಿಂದೆ ಕೈಯಲ್ಲಿ ದುಡ್ಡಿರಲಿಲ್ಲ ಬೆಲೆ ಕಡಿಮೆ ಇತ್ತು, ಈಗ ದುಡ್ಡಿದೆ ಬೆಲೆನೂ ಜಾಸ್ತಿ ಇದೆ.

ವ್ಯಕ್ತಿಯೊಬ್ಬ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಈ ಪೋಸ್ಟ್​ನಲ್ಲಿ ಬುಲೆಟ್ 350 ಸಿಸಿ ಬೆಲೆ ಕೇವಲ 18,700 ರೂ ಎಂದು ಬರೆಯಲಾಗಿದೆ. ಸದ್ಯ ಬುಲೆಟ್ 350 ಸಿಸಿ ಬೈಕ್‌ನ ಆರಂಭಿಕ ಬೆಲೆ 1.60 ಲಕ್ಷ ರೂಪಾಯಿ ಇದೆ. ಈ ಬಿಲ್​ ಜನವರಿ 23, 1986ರಂದು ಎಂದು ತಿಳಿದುಬಂದಿದೆ. ಇದು ಪ್ರಸ್ತುತ ಜಾರ್ಖಂಡ್‌ನ ಕೊಥಾರಿ ಮಾರ್ಕೆಟ್‌ನಲ್ಲಿರುವ ಅಧಿಕೃತ ಡೀಲರ್‌ಗೆ ತಿಳಿಸಲಾಗಿದೆ. ಆ ಸಮಯದಲ್ಲಿ 350 ಸಿಸಿ ಬುಲೆಟ್ ಮೋಟಾರ್‌ಸೈಕಲ್‌ನ ಆನ್-ರೋಡ್ ಬೆಲೆ ರೂ 18,800 ಆಗಿತ್ತು, ರಿಯಾಯಿತಿಯಲ್ಲಿ ರೂ 18,700 ಕ್ಕೆ ಮಾರಾಟ ಮಾಡಲಾಯಿತು ಎಂದು ಹೇಳಲಾಗಿದೆ.

ಈ ಫೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ, ರಾಯಲ್ ಇನ್ ಫೀಲ್ಡ್ ಪೇಜ್​ನಲ್ಲಿ ಪೋಸ್ಟ್ ಮಾಡಲಾಗಿದ್ದು, 1986 ರಲ್ಲಿ ರಾಯಲ್ ಇನ್ ಫೀಲ್ಡ್ 350ಸಿಸಿ ಎಂಬ ಕ್ಯಾಷ್ಟನ್ ನೀಡಿದ್ದು, ಸದ್ಯ ಈ ಪೋಸ್ಟ್ ಸಾವಿರಕ್ಕೂ ಅಧಿಕ ಲೈಕ್ಸ್ ಗಹಿಸಿದೆ. ಹಾಗೂ ಸಾಕಷ್ಟು ಕಾಮೆಂಟ್ ಕೂಡ ಬಂದಿದೆ.

https://www.instagram.com/p/CmHG5pHpvYn/?igshid=Yzg5MTU1MDY=
Leave A Reply

Your email address will not be published.