ದಾಳಿಂಬೆಯ ಪ್ರಯೋಜನ ನಿಮಗೆ ತಿಳಿದಿದೆಯೇ?

ಪ್ರತಿಯೊಂದು ಹಣ್ಣು ತನ್ನದೇ ಆದ ವಿಟಮಿನ್‌ಗಳಿಂದ ಸಮೃದ್ಧವಾಗಿದ್ದು, ನಮ್ಮ ಆರೋಗ್ಯವನ್ನು ಕಾಪಾಡುತ್ತಿವೆ. ಆ ಪಟ್ಟಿಯಲ್ಲಿ ಕೆಂಪು ಬಣ್ಣದ ದಾಳಿಂಬೆ ಹಣ್ಣು ಕೂಡ ಒಂದು. ದಾಳಿಂಬೆ ಹಣ್ಣು ಆಂಟಿ ಆಕ್ಸಿಡೆಂಟ್, ಅಂಟಿ ವೈರಲ್ ಮತ್ತು ಆಂಟಿ ಟ್ಯೂಮರ್ ಗುಣಲಕ್ಷಣಗಳನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ ಮತ್ತು ವಿಟಮಿನ್ ಇ ಮತ್ತು ಫೋಲಿಕ್ ಆಮ್ಲ ಕೂಡ ಇದೆ.

ಪ್ರತಿನಿತ್ಯ ದಾಳಿಂಬೆಯನ್ನು ತಿನ್ನುವುದು ಅಥವಾ ಜ್ಯೂಸ್ ಕುಡಿಯುವುದು ನಿಮ್ಮ ರೋಗ ನಿರೋಧಕ ಶಕ್ತಿಗೆ ಅತ್ಯುತ್ತಮವಾಗಿ ಸಹಾಯ ಮಾಡುತ್ತದೆ. ಮಧುಮೇಹ, ರಕ್ತದೊತ್ತಡವನ್ನು ಸುಧಾರಿಸುವುದರ ಜೊತೆ ಜೊತೆಗೆ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಹಾಗಾದರೆ ದಾಳಿಂಬೆ ಮಾಡುವ ಚಮತ್ಕಾರಗಳ ಬಗ್ಗೆ ಮತ್ತಷ್ಟು ತಿಳಿಯೋಣ ಬನ್ನಿ.

ರಕ್ತಹೀನತೆ:- ರಕ್ತಹೀನತೆಯ ಸಮಸ್ಯೆಗೆ ಅತ್ಯುತ್ತಮ ಮನೆಮದ್ದು ಈ ದಾಳಿಂಬೆ ಹಣ್ಣು. ದೇಹದಲ್ಲಿ ರಕ್ತ ಕೊರತೆಯಿದ್ದರೆ ದಾಳಿಂಬೆ ಹಣ್ಣನನ್ನು ತಿನ್ನುವುದು ಅಥವಾ ಜ್ಯೂಸ್ ಮಾಡಿ ಕುಡಿಯುವುದು ಉತ್ತಮ. ಇದಲ್ಲದೆ ದಾಳಿಂಬೆ ಸೇವನೆಯಿಂದ ದೇಹದಲ್ಲಿ ರಕ್ತ ಸಂಚಲನ ಉತ್ತಮಗೊಳ್ಳುತ್ತದೆ. ಹಾಗೆಯೇ ದೇಹದಲ್ಲಿ ಐರನ್ ಅಂಶವನ್ನು ಹೆಚ್ಚಿಸಿ ಎನಿಮಿಯಾ ಸಮಸ್ಯೆಯಿಂದ ರಕ್ಷಿಸುತ್ತದೆ. ಅಲ್ಲದೆ ರಕ್ತ ಶುದ್ದೀಕರಿಸುವ ಕೆಲಸ ಮಾಡುತ್ತದೆ.

ಅಜೀರ್ಣ:- ಅಜೀರ್ಣ ಸಮಸ್ಯೆ ಇರುವವರು ದಾಳಿಂಬೆ ಹಣ್ಣನ್ನು ತಿನ್ನುವುದರಿಂದ ಸಮಸ್ಯೆಯಿಂದ ಪಾರಾಗಬಹುದು. ಹೀಗಾಗಿ ಆಹಾರದ ಸೇವಿಸಿದ ಬಳಿಕ ದಾಳಿಂಬೆ ಹಣ್ಣು ತಿನ್ನುವುದು ಉತ್ತಮ.

ಹಲ್ಲುಗಳ ಸಮಸ್ಯೆ:- ದಾಳಿಂಬೆ ಹಣ್ಣನ್ನು ಜಗಿದು ತಿನ್ನುವುದರಿಂದ ಹಲ್ಲುಗಳ ಆರೋಗ್ಯ ಹೆಚ್ಚುತ್ತದೆ. ಅಲ್ಲದೆ ದಂತಕ್ಷಯ ಸಮಸ್ಯೆಯಿಂದ ಪಾರಾಗಬಹುದು.

ಗರ್ಭಿಣಿಯರಿಗೆ ಒಳ್ಳೆಯದು:- ಗರ್ಭಿಣಿಯರು ಗರ್ಭಾವಸ್ಥೆಯಲ್ಲಿದ್ದಾಗ ಯಾವುದೇ ಕಾರಣಕ್ಕೂ ಕೆಲವು ಹಣ್ಣುಗಳನ್ನು ಸೇವನೆ ಮಾಡುವುಂತಿಲ್ಲ. ಅವುಗಳಲ್ಲಿ ನೇರಳೆ ಹಣ್ಣು, ಅನಾನಸ್ ಇನ್ನು ಅನೇಕ. ದಾಳಿಂಬೆ, ಸೇಬು, ಸ್ಟ್ರಾಬೆರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡುವುದರಿಂದ ಮಗುವು ಆರೋಗ್ಯಕರವಾಗಿ ಬೆಳೆಯುತ್ತದೆ.
ದಾಳಿಂಬೆಯಲ್ಲಿ ಕಬ್ಬಿಣದ ಅಂಶವು ಸಮೃದ್ಧವಾಗಿದೆ. ಇದು ಕಬ್ಬಿಣದ ಕೊರತೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೆ, ಆರೋಗ್ಯಕರವಾದ ಮೂಳೆಗಳನ್ನು ಕಾಪಾಡಿಕೊಳ್ಳಲು ವಿಟಮಿನ್ ಕೆ ನೆರವಾಗುತ್ತದೆ.

ಋತುಚಕ್ರ:- ದಾಳಿಂಬೆ ಹಣ್ಣಲ್ಲದೆ ಅದರ ಸಿಪ್ಪೆ ಕೂಡ ಪ್ರಯೋಜನಕಾರಿ. ಸಾಮಾನ್ಯವಾಗಿ ಮಹಿಳೆಯರಲ್ಲಿ ಋತುಸ್ರಾವದ ವೇಳೆ ಅಸಹನೀಯ ನೋವು ಕಂಡು ಬರುತ್ತದೆ. ಇಂತಹ ಸಮಯದಲ್ಲಿ ದಾಳಿಂಬೆಯ ಒಣ ಸಿಪ್ಪೆಯನ್ನು ಪುಡಿ ಮಾಡಿ ಮತ್ತು ಒಂದು ಚಮಚ ನೀರಿನಲ್ಲಿ ಹಾಕಿ ಕುಡಿಯಿರಿ. ಇದು ರಕ್ತಸ್ರಾವವನ್ನು ಕಡಿಮೆ ಮಾಡುತ್ತದೆ, ಹಾಗೆಯೇ ಹೊಟ್ಟೆ ನೋವಿಗೂ ಪರಿಹಾರ ನೀಡುತ್ತದೆ.

ಪೈಲ್ಸ್ ಸಂಬಂಧಿ ತೊಂದರೆಗಳಿದ್ದರೆ ದಾಳಿಂಬೆ ಸಿಪ್ಪೆ ಮತ್ತು ಬೆಲ್ಲವನ್ನು ಪುಡಿ ಮಾಡಿ, ಸಣ್ಣ ಮಾತ್ರೆಗಳನ್ನಾಗಿ ತಯಾರಿಸಿ. ಇದನ್ನು ಪ್ರತಿದಿನ ಸೇವಿಸುವುದರಿಂದ ಪೈಲ್ಸ್ ರೋಗದಿಂದ ಮುಕ್ತಿ ಪಡೆಯಬಹುದು. ಇನ್ನು ಹಿರಿಯ ವಯಸ್ಕರಲ್ಲಿ ಕಂಡು ಬರುವ ಆಲ್‌ಮ‌ ಎಂಬ ಮರೆಯುವಿಕೆ ಕಾಯಿಲೆಯನ್ನು ದಾಳಿಂಬೆ ಸೇವನೆಯಿಂದ ತಡೆಯಬಹುದು.

Leave A Reply

Your email address will not be published.