ಬೆಂಗಳೂರಿನ ಚರ್ಚ್ ಸ್ಟ್ರೀಟ್ ಅಲ್ಲಿ ಯುವತಿಯ ‘ಅಪ್ಪಿಕೋ ಅಭಿಯಾನ’- ಹಗ್ ಮಾಡಲು ಮುಗಿಬಿದ್ದ ಯುವಕರು !
ಹೊಸ ವರುಷದ ಸ್ವಾಗತಕ್ಕೆ ಇದೀಗ ಕ್ಷಣಗಣನೆ ಆರಂಭವಾಗಿದೆ. ಅದರಲ್ಲೂ ವಾರಾಂತ್ಯದಲ್ಲಿ ನ್ಯೂ ಇಯರ್ ನ ಆಗಮನ ಆಗುತ್ತಿರುವ ಹಿನ್ನಲೆಯಲ್ಲಿ ಯಂಗ್ ಸ್ಟಾರ್ಸ್ ಎಲ್ಲರೂ ಹೊಸ ವರ್ಷದ ಆಚರಣೆಗೆ ಸಕ್ಕತ್ ಎಂಜಾಯ್ ಮಾಡಲು ಕಾತುರದಿಂದ ಕಾಯುತ್ತಿದ್ದಾರೆ.
ಹೊಸ ವರುಷವನ್ನು ಸಂಭ್ರಮಿಸಲು ಬೆಂಗಳೂರು ನಗರ ತನ್ನ ಹಳೆಯ ಹುರುಪನ್ನು ತೊರೆದು, ಹೊಸ ಹುರುಪನ್ನು ಗಳಿಸಲು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಬ್ರೀ ಗೇಡ್ ರೋಡ್, ಎಂ ಜಿ ರೋಡ್, ಚರ್ಚ್ ಸ್ಟ್ರೀಟ್ ಮುಂತಾದ ನಗರಗಳಲ್ಲಂತೂ ಪಾರ್ಟಿ ಸದ್ದು ತುಂಬಾ ಜೋರಾಗಿಯೇ ಇದೆ. ವಾರಂತ್ಯ ಆದಕಾರಣ ಇವೆಲ್ಲವನ್ನೂ ನಿಯಂತ್ರಣ ಮಾಡಲು ಪೋಲೀಸರಂತೂ ಹರಸಾಹಸ ಪಡಬೇಕಾಗಬಹುದು.
ಆದರೆ ಇವೆಲ್ಲದರ ನಡುವೆ ಚರ್ಚ್ ಸ್ಟ್ರೀಟ್ ಅಲ್ಲಿ ಹುಡುಗಿಯೊಬ್ಬಳು ಹೊಸ ವರುಷದ ಹಿನ್ನೆಲೆಯಲ್ಲಿ ಫ್ರೀ ಹಗ್ ಎಂದು ಬೋರ್ಡ್ ಹಿಡಿದುಕೊಂಡು ಅಭಿಮಾನ ನಡೆಸಿ, ಸಾಕಷ್ಟು ಸುದ್ದಿಯಾಗಿ ಎಲ್ಲರೂ ಅಚ್ಚರಿ ಪಡುವಂತೆ ಮಾಡಿದ್ದಾಳೆ. ಈ ವೇಳೆ ಬೋರ್ಡ್ ನೋಡಿದ ಕೆಲವು ಹುಡುಗ ಹುಡುಗಿಯರು ತ್ರಿಲ್ ಆಗಿ ಬಂದು ಆಕೆಯನ್ನು ತಬ್ಬಿಕೊಂಡಿದ್ದಾರೆ. ಮೊದಲೇ ಎಂಜಾಯ್ ಮಾಡುವ, ಪಾರ್ಟಿ ಮಾಡುವ ಮೂಡ್ ನಲ್ಲಿರುವ ಹುಡುಗರಂತೂ ಬೋರ್ಡ್ ನೋಡಿದ ಕೂಡಲೇ ಮುಗಿಬಿದ್ದಿದ್ದಾರೆ. ಇನ್ನೂ ಕೆಲವರು ನಾಚಿಕೆಯಿಂದ ಬಂದು ಆಕೆಯನ್ನು ತಬ್ಬಿಕೊಳ್ಳುತ್ತಿದ್ದಾರೆ.
ಇದನ್ನು ಗಮನಿಸಿದ ಪೋಲೀಸರು ಕೂಡಲೇ ಬಂದು ಆಕೆಯನ್ನು ನಿಂತಲ್ಲಿಂದ ಕಳಿಸುವ ಪ್ರಯತ್ನ ಮಾಡಿದ್ದಾರೆ. ಬೋರ್ಡ್ ಹಿಡಿದ ಯುವತಿಗೆ ಇನ್ಸ್ಪೆಕ್ಟರ್ ವಾರ್ನಿಂಗ್ ನೀಡಿದ್ದು, ಹೋಗ್ತಿಯೋ ಇಲ್ಲ ಕೇಸ್ ಹಾಕ್ಲಾ ಅಂತ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಾಗಾಗಿ ಯುವತಿ ಸೈಲೆಂಟ್ ಆಗಿ ಜಾಗ ಖಾಲಿ ಮಾಡಿದ್ದಾರೆ.
ಕೆಲವು ಹಿಂದು ಸಂಘಟನೆಗಳು, ವಿದೇಶಗಳಲ್ಲಿ ಈ ರೀತಿಯ ಪೋಸ್ಟರ್ ಅಭಿಯಾನಗಳು ಸಾಕಷ್ಟು ನಡೆಯುತ್ತವೆ. ಆದರೆ ಇದು ಭಾರತೀಯ ಸಂಸ್ಕೃತಿ ಅಲ್ಲ. ನಮ್ಮದೇ ಆದ ಸಂಸ್ಕೃತಿಗಳನ್ನು ನಾವು ಆಚರಿಸಬೇಕು. ಯುವತಿ ಮಾಡಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.