ಹೊಸ ವರುಷಕ್ಕೆ ಬಿಎಂಟಿಸಿಯಿಂದ ಪ್ರಯಾಣಿಕರಿಗೆ ಶಾಕಿಂಗ್ ನ್ಯೂಸ್!

ಬಿಎಂಟಿಸಿ ಪ್ರಯಾಣಿಕರಿಗೆ ಹೊಸ ವರ್ಷಕ್ಕೆ ಶಾಕಿಂಗ್ ನ್ಯೂಸ್ ದೊರಕಿದ್ದು, ಮಾಸಿಕ ಪಾಸ್, ದಿನದ ಪಾಸ್ ಹಾಗೂ ದಿನದ ಟಿಕೆಟ್ ದರ ಹೆಚ್ಚಿಸಿ ಆದೇಶ ಹೊರಡಿಸಿದೆ.

ಹೌದು. ಇಂಧನ ಬೆಲೆಯ ನಿರಂತರ ಏರಿಕೆ ಹಿನ್ನೆಲೆಯಲ್ಲಿ ಬಿಎಂಟಿಸಿ ನಿಗಮದ ಆರ್ಥಿಕ ನಷ್ಟ ಸರಿದೂಗಿಸುವ ಸಲುವಾಗಿ  ಹೊಸವರ್ಷ ಆರಭವಾಗುತ್ತಿದ್ದಂತೆಯೇ ಬಿಎಂಟಿಸಿ ಪ್ರಯಾಣ ದರ ಏರಿಕೆಯಾಗಲಿದೆ. ಜೊತೆಗೆ ವೋಲ್ವೋ ಬಸ್ ಪಾಸ್ ದರ ಕೂಡ ಹೆಚ್ಚಿಸಿ ಬಿಎಂಟಿಸಿ ಆದೇಶ ಹೊರಡಿಸಿದೆ.

ಅಂತೆಯೇ ಸಾಮಾನ್ಯ ಪಾಸ್ ಹಾಗೂ ಹಿರಿಯ ನಾಗರಿಕರ ಪಾಸ್ ಪಡೆದವರು ಭಾನುವಾರ ಪಾಸ್ ಬಳಸಿ ಓಡಾಡುವ ಹಾಗಿಲ್ಲ. ಭಾನುವಾರ ಸಾಮಾನ್ಯ ಪಾಸ್ ಹಾಗೂ ಹಿರಿಯ ನಾಗರಿಕರ ಪಾಸ್ ಬಳಕೆಗೆ ಬ್ರೇಕ್ ಹಾಕಲಾಗಿದೆ.

ವಜ್ರ ( ವೋಲ್ವೋ) ಮಾಸಿಕ ದರ:
ಪ್ರಸ್ತುತ ವಜ್ರ ಮಾಸಿಕ ದರ 1428+ ಜಿಎಸ್ಟಿ 72= ಒಟ್ಟು 1500 ರೂಪಾಯಿ
ಪರಿಷ್ಕೃತ ದರ 1714.29 ಪೈಸೆ + ಜಿಎಸ್ಟಿ 85.71= ಒಟ್ಟು 1800 ರೂಪಾಯಿ ಆಗಿರಲಿದೆ.

ವಜ್ರ ವೋಲ್ವೋ ದಿನದ ಪಾಸ್ ದರ :
ಪ್ರಸ್ತುತ ವಜ್ರ ದೈನಿಕ ಪಾಸಿನ ದರ 95 + ಜಿಎಸ್ಟಿ 5 = 100 ರೂಪಾಯಿ
ಪರಿಷ್ಕೃತ ದರ 114.29+ 5.21= 120 ರೂಪಾಯಿ

Leave A Reply

Your email address will not be published.