Health Tips: ಆಲಿವ್ ಎಣ್ಣೆಯನ್ನು ಹೊಕ್ಕುಳಕ್ಕೆ ಹಚ್ಚಿದರೆ ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ?
ಆಲಿವ್ ಎಣ್ಣೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿದ್ದು, ಹಲವು ಆರೋಗ್ಯ ಪ್ರಯೋಜನಗಳಿವೆ. ಈ ಎಣ್ಣೆ ಸ್ವತಂತ್ರ ರಾಡಿಕಲ್ ಹಾನಿಯ ವಿರುದ್ಧ ಹೋರಾಡುತ್ತದೆ. ಮತ್ತು ಅಂಗಗಳ ಕಾರ್ಯವನ್ನು ಸುಧಾರಿಸುತ್ತದೆ. ಅಲ್ಲದೆ, ಈ ಆಲಿವ್ ಎಣ್ಣೆಯನ್ನು ಹೊಕ್ಕಳಿಗೆ ಹಚ್ಚುವುದರಿಂದ ಹಲವು ಪ್ರಯೋಜನಗಳಿವೆ. ಏನೆಲ್ಲಾ ಎಂಬುದು ಇಲ್ಲಿದೆ.
ಕೂದಲು ಮತ್ತು ಮುಖಕ್ಕೆ ಪ್ರಯೋಜನಕಾರಿ :
ಕೂದಲು ಮತ್ತು ಮುಖ ಸುಂದರವಾಗಿ ಕಾಣಬೇಕು ಅನ್ನೋದು ಪ್ರತಿಯೊಬ್ಬರ ಹಂಬಲ. ಅದಕ್ಕೆ ಈ ಆಲಿವ್ ಎಣ್ಣೆ ಸಹಕಾರಿಯಾಗಿದೆ. ಆಲಿವ್ ಎಣ್ಣೆಯಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಚರ್ಮದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರತಿದಿನ ಮಲಗುವ ಮುನ್ನ ಹೊಕ್ಕಳಿಗೆ ಈ ಆಲಿವ್ ಎಣ್ಣೆಯನ್ನು ಹಚ್ಚಿದರೆ ಮುಖದಲ್ಲಿ ಕಾಂತಿ ಬರುತ್ತದೆ, ಮುಖ ಸುಂದರವಾಗಿ ಹೊಳೆಯುತ್ತದೆ. ಜೊತೆಗೆ ತುಟಿ ಒಡೆಯುವುದನ್ನು ಕೂಡ ತಡೆಯುತ್ತದೆ. ಹಾಗೂ ಚರ್ಮ ಮತ್ತು ಕೂದಲಿನ ಶುಷ್ಕತೆ ಕಡಿಮೆಯಾಗುತ್ತದೆ.
ಗ್ಯಾಸ್ ಸಮಸ್ಯೆಯಿಂದ ಮುಕ್ತಿ :
ಇಂದಿನ ದಿನಗಳಲ್ಲಿ ಜನರು ಬಾಯಿಗೆ ರುಚಿ ಎನಿಸುವ, ಆರೋಗ್ಯಕ್ಕೆ ಕಹಿ ಎನಿಸುವ ಆಹಾರವನ್ನು ಸೇವಿಸುತ್ತಾರೆ. ಹಾಗಾಗಿ ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಅತಿಯಾದ ಎಣ್ಣೆಯುಕ್ತ ಆಹಾರ ಇಂತವುಗಳಿಂದ ಹೊಟ್ಟೆಯಲ್ಲಿ ಗ್ಯಾಸ್ ನಿರ್ಮಾಣವಾಗಲು ಪ್ರಾರಂಭಿಸುತ್ತದೆ ಮತ್ತು ಮಲಬದ್ಧತೆಗೆ ಗುರಿಯಾಗುತ್ತೀರಿ. ಆದರೆ ಇದಕ್ಕೆ ಪರಿಹಾರವಿದೆ. ಏನೆಂದರೆ, ಇದನ್ನು ತಪ್ಪಿಸಲು ಹೊಕ್ಕುಳಿಗೆ ಆಲಿವ್ ಎಣ್ಣೆಯನ್ನು ಹಚ್ಚಿದರೆ ಈ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ.
ಹೃದಯ ಸಂಬಂಧಿ ಕಾಯಿಲೆಗೆ ಪರಿಹಾರ :
ಆಲಿವ್ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚುವುದರಿಂದ ಹೃದ್ರೋಗಿಗಳಿಗೆ ಪ್ರಯೋಜನಕಾರಿ. ಇದು ಪಾರ್ಶ್ವವಾಯು ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ, ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ.
ಕೀಲು ನೋವಿನಿಂದ ಪರಿಹಾರ :
ಇನ್ನೂ, ಈ ಎಣ್ಣೆ ಕೀಲು ನೋವಿಗೂ ಪರಿಹಾರ ನೀಡುತ್ತದೆ. ವಯಸ್ಸಾದಂತೆ ಕೀಲು ನೋವಿನಂತಹ ಹಲವು ಸಮಸ್ಯೆಗಳು ಹೆಚ್ಚಾಗುತ್ತದೆ. ಈ ಕೀಲು ನೋವಿಗೆ, ರಾತ್ರಿ ನಿಮ್ಮ ಹೊಕ್ಕುಳಿಗೆ ಆಲಿವ್ ಎಣ್ಣೆಯನ್ನು ಹಚ್ಚಿ. ಇದನ್ನು ನಿಯಮಿತವಾಗಿ ಮಾಡಿದರೆ ಕೀಲು ನೋವಿನಿಂದ ಮುಕ್ತಿ ಪಡೆಯಬಹುದು. ಇನ್ನೂ, ಈ ಬಗ್ಗೆ ವೈದ್ಯಕೀಯ ಸಲಹೆ ಪಡೆಯುವುದು ಉತ್ತಮ.