ಪಂಚಮಸಾಲಿ, ಒಕ್ಕಲಿಗರಿಗೆ ಮೀಸಲಾತಿ ನೀಡಲು ಅಸ್ತು ಎಂದ ಸಂಪುಟ ಸಭೆ- ಯಾವ ಸಮುದಾಯಗಳಿಗೆ ಎಷ್ಟು ಮೀಸಲಾತಿ ಇಲ್ಲಿದೆ ನೋಡಿ

ಕರ್ನಾಟಕದಲ್ಲಿ ಚುನಾವಣೆಯ ಕಾವು ಏರುತ್ತಿರುವಂತೆ ಹಲವಾರು ಸಮುದಾಯಗಳ ಮೀಸಲಾತಿ ಬೇಡಿಕೆಯ ಕೂಗೂ ಹೆಚ್ಚಾಗುತ್ತಿತ್ತು. ಕೆಲವು ಸಮುದಾಯಗಳು ಹೋರಾಟಗಳ ಮೂಲಕ ಸರ್ಕಾರದ ಮನವೊಲಿಸಿ ಮೀಸಲಾತಿಯನ್ನು ಪಡೆಯಲು ಯಶಸ್ವಿಯಾಗಿದ್ದವು. ಇದರ ಬೆನ್ನಲ್ಲೇ ಪಂಚಮಸಾಲಿ ಸಮುದಾಯವೂ 2 ಎ ಮೀಸಲಾತಿ ಕಲ್ಪಿಸಬೇಕೆಂದು ವರುಷದಿಂದಲೂ ಹೋರಾಟ ಮಾಡಿಕೊಂಡು ಬಂದಿತ್ತು

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಹೋರಾಟಕ್ಕೆ ಕೊನೆಗೂ ಸರ್ಕಾರ ಅಸ್ತು ಎಂದಿದೆ . ಮೀಸಲಾತಿಯ ವರ್ಗದಲ್ಲಿ ಹಲವು ಬದಲಾವಣೆಯೊಂದಿಗೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. 2C ಮತ್ತು 2D ಎಂಬ ಎರಡು ಪ್ರತ್ಯೇಕ ಪ್ರವರ್ಗ ರಚನೆಗೆ ಸಂಪುಟದಲ್ಲಿ ನಿರ್ಧಾರಿಸಲಾಗಿದೆ. ಅದರಲ್ಲಿ 2D ಪ್ರವರ್ಗಕ್ಕೆ ಪಂಚಮಸಾಲಿ ಸಮುದಾಯವನ್ನು ಸೇರಿಸಲಾಗುವುದು. ಆದರೆ ಮೀಸಲಾತಿ ಪ್ರಮಾಣ ಇನ್ನೂ ನಿಗದಿ ಮಾಡಿಲ್ಲ.

ಪ್ರಸ್ತುತ ಲಿಂಗಾಯತರಿಗೆ 3B, ಒಕ್ಕಲಿಗರಿಗೆ 3ಎ ಮೀಸಲಾತಿ ಇದೆ. 3ಎ ಮತ್ತು 3ಬಿಯಲ್ಲಿರುವ ಸಮುದಾಯಗಳನ್ನು 2C ಮತ್ತು 2Dಗೆ ಸೇರ್ಪಡೆ ಮಾಡಲಾಗಿದೆ. ಹೀಗಾಗಿ ಇನ್ಮುಂದೆ 3ಎ ಮತ್ತು 3ಬಿ ಪ್ರವರ್ಗಗಳು ಇರುವುದಿಲ್ಲ. 3A ಮತ್ತು 3Bನಲ್ಲಿ ಈವರೆಗೆ ನೀಡಲಾಗುತ್ತಿದ್ದ ಎಲ್ಲಾ ಸೌಲಭ್ಯ, ಸವಲತ್ತುಗಳನ್ನು, ಈಗ ಹೊಸದಾಗಿ ಸೃಷ್ಟಿಸಿರುವ 2C ಮತ್ತು 2D ಪ್ರವರ್ಗಕ್ಕೆ ಮುಂದುವರಿಸಿಕೊಂಡು ಹೋಗಲಾಗುವುದು. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗುವುದು. ಆದರೆ ರಾಜಕೀಯ ಮೀಸಲಾತಿ ಇರುವುದಿಲ್ಲ ಎಂದು ತಿಳಿಸಿದ್ದಾರೆ.

3 ಪ್ರವರ್ಗದಲ್ಲಿ ಇರುವವರನ್ನ 2 ಪ್ರವರ್ಗಕ್ಕೆ ತರಲು ಅನುಮೋದನೆ ಕೊಟ್ಟಿದ್ದೇವೆ. 3A ನಲ್ಲಿದ್ದ ಒಕ್ಕಲಿಗರು ಮತ್ತು ಇತರರನ್ನು ಇನ್ಮುಂದೆ 2C ಅಂತ ಮಾಡಿ ಅಲ್ಲಿಗೆ ಸೇರಿಸುತ್ತೇವೆ. ಹಾಗೆಯೇ 3B ನಲ್ಲಿದ್ದ ಲಿಂಗಾಯತ ಮತ್ತು ಇತರರನ್ನು 2Dಗೆ ಸೇರಿಸುತ್ತೇವೆ. ಇದರಿಂದ 2A ಮತ್ತು 2B ಪ್ರವರ್ಗದವರಿಗೆ ಯಾವುದೇ ಸಮಸ್ಯೆ ಆಗಲ್ಲ. ಅವರಿಗೆ ನಿಗದಿಪಡಿಸಿರುವ ಮೀಸಲಾತಿಗೆ ಇದರಿಂದ ತೊಂದೆರೆ ಆಗುವುದಿಲ್ಲ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಮಾಧುಸ್ವಾಮಿಯವರು ಸ್ಪಷ್ಟಪಡಿಸಿದ್ದಾರೆ.

Leave A Reply

Your email address will not be published.