ಗಮನಿಸಿ : ಈ ಫೋನ್‌ಗಳಲ್ಲಿ ಜನವರಿ 1 ರಿಂದ ವಾಟ್ಸಪ್‌ ವರ್ಕ್‌ ಆಗಲ್ಲ | ಯಾಕೆ ಗೊತ್ತಾ?

ವಾಟ್ಸಪ್ ಅನ್ನೋದು ಎಲ್ಲರಿಗೂ ಇಷ್ಟವಾದ ಆ್ಯಪ್ ಆಗಿದೆ. ಯಾಕೆಂದರೆ ಜನರು ಒಬ್ಬರಿಗೊಬ್ಬರು ನೇರವಾಗಿ ಮಾತನಾಡುವುದಕ್ಕಿಂತ ಹೆಚ್ಚಾಗಿ ವಾಟ್ಸಪ್ ಗ್ರೂಪ್ ಚಾಟ್ ನಲ್ಲಿ ಮಾತನಾಡುವುದು ಹೆಚ್ಚು. ಇನ್ನೂ ಹೆಚ್ಚಿನವರು ವಾಟ್ಸಪ್ ಮೂಲಕವೇ ಕೆಲವೊಂದು ಮುಖ್ಯ ಮಾಹಿತಿ ಶೇರ್ ಮಾಡೋದು, ವ್ಯವಹಾರ ನಡೆಸೋದು, ಒಟ್ಟಿನಲ್ಲಿ ವಾಟ್ಸಾಪ್ ಒಂದು ಉತ್ತಮ ಸಂಪರ್ಕ ಮಾಧ್ಯಮ ಎಂದರೆ ತಪ್ಪಾಗಲಾರದು. ವಾಟ್ಸಪ್​ ಪ್ರಪಂಚದಾದ್ಯಂತ ಬಹಳಷ್ಟು ಜನಪ್ರಿಯತೆಯನ್ನು ಪಡೆದಿದೆ ಎಂದರೆ ತಪ್ಪಾಗಲ್ಲ. ಹಾಗೆ ಇದು ವಿಶ್ವದಾದ್ಯಂತ ಅಧಿಕ ಬಳಕೆದಾರರನ್ನು ಹೊಂದಿರುವಂತಹ ಮೆಸೇಜಿಂಗ್ ಅಪ್ಲಿಕೇಶನ್ ಇದಾಗಿದೆ. ಇನ್ನು ಭಾರತದಲ್ಲಿಯೇ 500 ಬಿಲಿಯನ್​ ಬಳಕೆದಾರರನ್ನು ಇದು ಹೊಂದಿದೆ.

ಇದೀಗ ಮೆಟಾ ಒಡೆತನದಲ್ಲಿರುವಂತಹ ವಾಟ್ಸಪ್​ ಈ ಬಾರಿ ಸಾಕಷ್ಟು ಅಪ್ಡೇಟ್ಸ್​ ಅನ್ನು ನೀಡಿದೆ. ಯಾವುದೇ ವ್ಯವಹಾರ ನಡೆಸಬೇಕಿದ್ದರೂ ಬ್ಯಾಂಕ್​ ವಹಿವಾಟುಗಳನ್ನು ಮಾಡಬೇಕಾದರೂ ಈಗ ವಾಟ್ಸಪ್ ಮೂಲಕವೇ ಮಾಡಬಹುದು. ಇದಲ್ಲದೆ ಒಂದು ವಿಷಯವನ್ನು ಕ್ಷಣಮಾತ್ರದಲ್ಲಿ ಇನ್ನಬ್ಬರಿಗೆ ತಿಳಿಸುವ ಒಂದು ಸಾಧನವಿದ್ದರೆ ಅದು ವಾಟ್ಸಪ್ ಆಗಿದೆ.

ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿರುವ ವಾಟ್ಸಪ್​ ತನ್ನ ಬಳಕೆದಾರರಿಗೆ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಹೊಸ ವರ್ಷದಿಂದ ಕೆಲ ಸ್ಮಾರ್ಟ್​​ಫೋನ್​ಗಳಲ್ಲಿ ವಾಟ್ಸಪ್​ ಬಳಕೆ ಮಾಡಲಾಗುವುದಿಲ್ಲ ಎಂದು ಹೇಳಿದೆ. ಇದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ ಉತ್ತರ ಈ ಲೇಖನದಲ್ಲಿದೆ. ಇನ್ನು ಈ ವಾಟ್ಸಪ್​ ಐಫೋನ್ ಮತ್ತು ಆಂಡ್ರಾಯ್ಡ್​ ಎರಡೂ ಸ್ಮಾರ್ಟ್​ಫೋನ್​ಗಳಲ್ಲು ಕಾರ್ಯನಿರ್ವಹಿಸುವುದಿಲ್ಲ

ವಾಟ್ಸಪ್​ ಬಿಡುಗಡೆ ಮಾಡುವಂತಹ ಫೀಚರ್ಸ್ಗಳೆಲ್ಲವೂ ಬಹಳ ಗುಣಮಟ್ಟದ್ದಾಗಿರುತ್ತದೆ. ಆದರೆ ಮುಂಬರುವಂತಹ ಫೀಚರ್ಸ್​ಗಳು ಮತ್ತು ಮೊಬೈಲ್​ನ ಕಾರ್ಯಚಟುವಟಿಕೆಗಳೊಂದಿಗೆ ಸಮಸ್ಯೆ ಉಂಟಾಗುವುದರಿಂದ ಇನ್ಮುಂದೆ ವಾಟ್ಸಪ್​ ಫೀಚರ್ಸ್ ಅನ್ನು ಬೆಂಬಲ ನೀಡದ ಸ್ಮಾರ್ಟ್​​ಫೋನ್​ಗಳಿಂದ ಹಂತ ಹಂತವಾಗಿ ಅಪ್ಲಿಕೇಶನ್ ಅನ್ನು ತೆಗೆದು ಹಾಕಲಾಗುವುದು ಎಂದು ಕಂಪನಿ ಹೇಳಿದೆ. ಇದಲ್ಲದೆ ವಾಟ್ಸಪ್ ಐಓಎಸ್​​ 12 ಮತ್ತು ಇನ್ನೂ ಹೆಚ್ಚಿನ ಡಿವೈಸ್​ಗಳೊಂದಿಗೆ ಹೊಂದಿಕೊಳ್ಳುತ್ತದೆ. ಆದರೆ ಆ್ಯಪಲ್​ನ ಆಪರೇಟಿಂಗ್​ ಸಿಸ್ಟಮ್​ನ ಇತ್ತೀಚಿನ ವರ್ಷನ್​ಗೆ ಅಪ್ಡೇಟ್​ ಮಾಡಲು ವಾಟ್ಸಪ್​ ಬಳಕೆದಾರರಿಗೆ ಸಲಹೆ ನೀಡುತ್ತಿದೆ.

ಮುಖ್ಯವಾಗಿ ಹಳೆಯ ಫೋನ್​ಗಳನ್ನು ಈಗಲೂ ಬಳಸುವವರಿದ್ದಾರೆ. ಏಕೆಂದರೆ ಈಗಿನ ಸ್ಮಾರ್ಟ್​ಫೋನ್​ಗಳ ವಿಶೇಷತೆಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟಪಡುವ ಜನರು ಹಳೆಯ ಫೋನ್​ಗಳಿಗೆ- ಹೊಂದಿಕೊಂಡಿದ್ದಾರೆ. ಆದರೆ ಇನ್ಮುಂದೆ ಆ ಸಾಧನಗಳ ಕಾರ್ಯಚಟುವಟಿಕೆಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಮತ್ತು ಅದರಲ್ಲಿ ವಾಟ್ಸಪ್ ಅನ್ನು ಕೂಡ ಬಳಕೆ ಮಾಡಲು ಆಪರೇಟಿಂಗ್ ಸಿಸ್ಟಮ್​ ಕಾರ್ಯನಿರ್ವಹಿಸುವುದಿಲ್ಲ ಎಂದು ವಾಟ್ಸಪ್ ತಿಳಿಸಿದೆ.

ಆದರೆ ಇದೀಗ ಅಂತಹ ಸಮಸ್ಯೆಯನ್ನು ಈಗಲೇ ಪರಿಹರಿಸಿಕೊಳ್ಳುವ ನಿಟ್ಟಿನಿಂದ ಈಗಲೇ ಹಳೆಯ ಆಪರೇಟಿಂಗ್ ಸಿಸ್ಟಮ್​ ಅನ್ನು ಈಗಿನ ಸಿಸ್ಟಮ್​ಗೆ ಅಪ್ಡೇಟ್​ ಮಾಡಿಕೊಳ್ಳಿ ಎಂದು ವಾಟ್ಸಪ್​ ಸಲಹೆ ನೀಡಿದೆ. ಈ ಮೂಲಕ ನಿಮ್ಮ ಹಳೇ ಸ್ಮಾರ್ಟ್​ಫೋನ್​ನಲ್ಲೇ ವಾಟ್ಸಪ್​ ಬಳಸಬಹುದಾಗಿದೆ.

2023 ರ ನಂತರ ಸಾಕಷ್ಟು ಐಫೋನ್​ಗಳಲ್ಲಿ ವಾಟ್ಸಪ್​ ಕಾರ್ಯನಿರ್ವಹಿಸುವುದಿಲ್ಲವೆಂದು ತಿಳಿಸಿದೆ. ಅವುಗಳ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ.

  • ಐಫೋನ್ 5,
  • ಐಫೋನ್ 5c,
  • ಆ್ಯಪಲ್​ ಐಫೋನ್ SE (16GB),
  • ಆ್ಯಪಲ್ ಐಫೋನ್ SE (32GB),
  • ಆ್ಯಪಲ್ ಐಫೋನ್ 6S (64GB),
  • ಆ್ಯಪಲ್ ಐಫೋನ್6S ಪ್ಲಸ್‌ (128 GB,)
  • ಆ್ಯಪಲ್ ಐಫೋನ್ 6S ಪ್ಲಸ್‌ (16GB,)
  • ಆ್ಯಪಲ್ ಐಫೋನ್ 6S ಪ್ಲಸ್‌ (32GB),
  • ಆ್ಯಪಲ್ ಐಫೋನ್ 6S ಪ್ಲಸ್‌ (64GB),
  • ಆ್ಯಪಲ್ ಐಫೋನ್ SE (64GB),
  • ಆ್ಯಪಲ್ ಐಫೋನ್6S (128 GB),
  • ಆ್ಯಪಲ್ ಐಫೋನ್6s (16gb),
  • ಆ್ಯಪಲ್ ಐಫೋನ್ 6S (32GB). ಇದಿಷ್ಟು ಆ್ಯಪಲ್​ ಕಂಪನಿಯ ಸಾಧನಗಳಲ್ಲಿ ವಾಟ್ಸಪ್​ ಕಾರ್ಯನಿರ್ವಹಿಸುವುದಿಲ್ಲ.

4.1 ಕ್ಕಿಂತ ಹಳೆಯ ಆಂಡ್ರಾಯ್ಡ್‌ ವರ್ಷನ್​ನಲ್ಲಿ ಕಾರ್ಯನಿರ್ವಹಿಸುವಂತಹ ಸ್ಮಾರ್ಟ್‌ಫೋನ್‌ಗಳು ವಾಟ್ಸಪ್‌ಗೆ ಬೆಂಬಲ ನೀಡುವುದಿಲ್ಲ. ಹಾಗೆ ಇನ್ನು ಕೆಲವು ಫೋನ್‌ಗಳಲ್ಲಿ ಓಎಸ್‌ ವರ್ಷನ್​ಗೆ ನವೀಕರಿಸುವ ಆಯ್ಕೆಯನ್ನು ನೀಡಲಾಗಿದೆ. ಈ ಮೂಲಕ ವಾಟ್ಸಪ್‌ ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುವ ಮೊದಲೇ ಅಪ್‌ಡೇಟ್ ಮಾಡಿಕೊಳ್ಳಬಹುದು. ಅಂತೆಯೇ ಯಾವೆಲ್ಲಾ ಫೋನ್‌ನಲ್ಲಿ ವಾಟ್ಸಪ್‌ ಲಭ್ಯ ಇರುವುದಿಲ್ಲ ಎಂಬುದನ್ನು ಇಲ್ಲಿ ಉಲ್ಲೇಖಿಸಲಾಗಿದೆ.

  • LG ಆಪ್ಟಿಮಸ್ F7,
  • LG ಆಪ್ಟಿಮಸ್ L3 II,
  • LG ಆಪ್ಟಿಮಸ್ F5,
  • LG ಆಪ್ಟಿಮಸ್ L5 II,
  • LG ಆಪ್ಟಿಮಸ್ L5 II,
  • LG ಆಪ್ಟಿಮಸ್ L3 II,
  • LG ಆಪ್ಟಿಮಸ್ L7 II,
  • LG ಆಪ್ಟಿಮಸ್ L7 II,
  • LG ಆಪ್ಟಿಮಸ್ F6,
  • LG ಆಪ್ಟಿಮಸ್ L4 II,
  • LG ಆಪ್ಟಿಮಸ್ F3,
  • LG ಆಪ್ಟಿಮಸ್ L4 II,
  • LG ಆಪ್ಟಿಮಸ್ L2 II,
  • LG ಆಪ್ಟಿಮಸ್ F3Q,
  • vico ಸಿಂಕ್ 5,
  • ವಿಕೊ ಡಾರ್ಕ್ನೈಟ್,
  • ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಕ್ಸ್ ಕವರ್ 2,
  • ಹುವಾವೇ ಅಸೆಂಡ್G740 ZTE ಗ್ರಾಂಡ್ ಎಸ್ ಫ್ಲೆಕ್ಸ್,
  • ಲೆನೊವೊ A820,
  • ಹುವಾವೇ ಅಸೆಂಡ್ ಮೇಟ್‌,
  • ಹುವಾವೇ ಅಸೆಂಡ್ D2,
  • ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಕೋರ್, ಹೀಗೆ ಇನ್ನೂ ಹಲವಾರು ಸ್ಮಾರ್ಟ್​ಫೋನ್​ಗಳಲ್ಲಿ 2023 ರಿಂದ ವಾಟ್ಸಪ್​ ಕಾರ್ಯನಿರ್ವಹಿಸುವುದಿಲ್ಲವೆಂದು ಕಂಪನಿ ಮಾಹಿತಿ ನೀಡಿದೆ.
Leave A Reply

Your email address will not be published.