LPG Cylinder : ಕೇಂದ್ರದಿಂದ ಗ್ಯಾಸ್‌ ಸಿಲಿಂಡರ್‌ ಬಳಕೆದಾರರಿಗೆ ಗುಡ್ ನ್ಯೂಸ್, 2 ಪ್ರಮುಖ ನಿರ್ಧಾರ!

ಗ್ಯಾಸ್ ಸಿಲಿಂಡರ್ ಬಳಕೆದಾರರಿಗೆ ಸಿಹಿ ಸುದ್ದಿಯೊಂದು ಕಾದಿದೆ. ಕೇಂದ್ರದಿಂದ 2 ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ವರ್ಷದಲ್ಲಿ 2 ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮೋದಿ ಸರ್ಕಾರದ ಉಜ್ವಲ ಯೋಜನೆ ಫಲಾನುಭವಿಗಳಿಗೆ ನೆಮ್ಮದಿ ತರಲಿದೆ.

ಮೇ 2021 ರಲ್ಲಿ ಕೇಂದ್ರ ಸರ್ಕಾರವು ರೂ. 200 ಸಹಾಯಧನ ಘೋಷಿಸಿದ್ದು, ಈ ಪ್ರಯೋಜನವನ್ನು ಉಜ್ವಲ ಯೋಜನೆಯಡಿಯಲ್ಲಿ ಮಾಡಲಾಗಿದ್ದು ಉಜ್ವಲ ಯೋಜನೆಯಡಿ ಗ್ಯಾಸ್ ಸಿಲಿಂಡರ್ ಸಂಪರ್ಕ ಪಡೆದವರಿಗೆ ರೂ.200 ಸಬ್ಸಿಡಿ ಸಿಗಲಿದೆ ಎನ್ನಲಾಗಿದೆ.

ಪ್ರಸ್ತುತ ಉಜ್ವಲ ಯೋಜನೆಯಡಿ ಕೇಂದ್ರ ಸರ್ಕಾರವು ರೂ. 200 ಸಹಾಯಧನ ಯೋಜನೆ ರೂಪಿಸಲಾಗಿದೆ. ಈ ಮೂಲಕ ವರ್ಷದಲ್ಲಿ 12 ಸಿಲಿಂಡರ್‌ಗಳಿಗೆ ಸಬ್ಸಿಡಿ ದೊರೆಯಲಿದೆ.ಕೇಂದ್ರ ಸರ್ಕಾರ ಈ ಪ್ರಯೋಜನವನ್ನು ಇನ್ನೂ ಒಂದು ವರ್ಷ ವಿಸ್ತರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಈಶಾನ್ಯ ಭಾರತದಲ್ಲಿ LPG ಕವರೇಜ್ ಕಳಪೆ ಇದ್ದು, ಹೀಗಾಗಿ, ಕೇಂದ್ರವು ಈ ಯೋಜನೆಯನ್ನು ವಿಸ್ತರಿಸಬಹುದು ಎಂದು ಅಂದಾಜಿಸಲಾಗಿದೆ. 54.9 ಪ್ರತಿಶತ LPG ಕವರೇಜ್‌ನೊಂದಿಗೆ ಮೇಘಾಲಯವು ದೇಶದಲ್ಲಿ ಹಿಂದುಳಿದಿದ್ದು, ತ್ರಿಪುರಾ, ಜಾರ್ಖಂಡ್ ಮತ್ತು ಗುಜರಾತ್‌ನಂತಹ ರಾಜ್ಯಗಳು ಕಡಿಮೆ ಎಲ್‌ಪಿಜಿ ವ್ಯಾಪ್ತಿಯನ್ನು ಹೊಂದಿವೆ.

ಈ ಯೋಜನೆಯಡಿ ನೀವು ಉಚಿತ ಗ್ಯಾಸ್ ಸಂಪರ್ಕವನ್ನು ಪಡೆಯಬಹುದಾಗಿದ್ದು, ಬಡತನ ರೇಖೆಗಿಂತ ಕೆಳಗಿರುವವರಿಗೆ ಈ ಯೋಜನೆ ಅನ್ವಯಿಸುತ್ತದೆ. 18 ವರ್ಷ ವಯಸ್ಸಿನವರು ಈ ಯೋಜನೆಯಡಿ ಗ್ಯಾಸ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಪ್ರತಿ ಸಿಲಿಂಡರ್‌ಗೆ ರೂ. 200 ಸಬ್ಸಿಡಿ ಪ್ರಯೋಜನವನ್ನು ಕೇಂದ್ರವು ಮತ್ತೊಂದು ಆರ್ಥಿಕ ವರ್ಷಕ್ಕೆ ವಿಸ್ತರಿಸುವ ಕುರಿತಾಗಿ ಕೆಲ ಮಾಧ್ಯಮ ವರದಿಗಳು ಮಾಹಿತಿ ನೀಡಿದ್ದು, ಈ ಯೋಜನೆಯನ್ನು ಮುಂದುವರಿಸಲು ಅವಕಾಶ ಕಲ್ಪಿಸಿದ್ದರು ಕೂಡ ಕೆಲವು ರಾಜ್ಯಗಳು 100 ಪ್ರತಿಶತ LPG ವ್ಯಾಪ್ತಿ ತಲುಪಲು ಸಾಧ್ಯವಾಗಿಲ್ಲ.

Leave A Reply

Your email address will not be published.