Ghol fish : ಉಡುಪಿಯಲ್ಲಿ ಮೀನುಗಾರರ ಬಲೆಗೆ ಬಿತ್ತು ಲಕ್ಷ ಲಕ್ಷ ಬೆಲೆಬಾಳುವ ವಿಶೇಷ ಮೀನು | ಈ ಮೀನಿನ ವೈಶಿಷ್ಟ್ಯತೆ ಏನು ?

ಮೀನುಗಳನ್ನು ಬೇಟೆಯಾಡುವುದು ಸಹ ಒಂದು ಸಾಹಸವೇ ಸರಿ. ಯಾಕೆಂದರೆ ಮೀನು ಹಿಡಿಯಲು ಸಹ ಕೆಲವೊಂದು ಚಾಕ ಚಕ್ಯತೆ ಗೊತ್ತಿರಲೇ ಬೇಕು. ನಿಜವಾಗಲೂ ಕೆಲವೊಮ್ಮೆ ಮೀನು ಹಿಡಿಯಲು ಹರಸಾಹಸ ಪಡಬೇಕಾಗುತ್ತದೆ. ಸದ್ಯ ಉಡುಪಿಯ ಮಲ್ಪೆ ಬಂದರಿನ ಮೀನುಗಾರರ ಬಲೆಗೆ ಲಕ್ಷಾಂತರ ರೂಪಾಯಿ ಮೌಲ್ಯದ ಮೀನು ಬಿದ್ದಿದೆ.

ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ಹೋದ ಆಳ ಸಮುದ್ರ ಮೀನುಗಾರರ ಬಲೆಗೆ ಲಕ್ಷ ಮೌಲ್ಯದ ಮತ್ಯ ಬಿದ್ದಿದೆ.’ಗೋಳಿ ಮೀನು’ ಎಂದು ಕರೆಯಲ್ಪಡುವ ಈ ಮೀನಿನ ಬೆಲೆ ಲಕ್ಷಾಂತರ ರೂಪಾಯಿಗಳಷ್ಟಿದೆ.

ಈಗಾಗಲೇ 22 ಕೆ.ಜಿ ತೂಗುವ ಒಂದು ಮೀನು 2,34,080 ರೂ.ಗಳಿಗೆ ಮಾರಾಟವಾಗಿದೆ. ಮಲ್ಪೆ ಬಂದರಿನಲ್ಲಿ ನಡೆದ ಹರಾಜಿನಲ್ಲಿ ಈ ಮೀನನ್ನು ದುಬಾರಿ ದರ ಕೊಟ್ಟು ಖರೀದಿಸಲಾಗಿದೆ. ಈ ಗೋಳಿ ಮೀನಿನಲ್ಲಿ ಔಷಧೀಯ ಗುಣಗಳಿರುವ ಕಾರಣ ಅದಕ್ಕೆ ಇಷ್ಟೊಂದು ಮೌಲ್ಯ ಎನ್ನಲಾಗಿದೆ.

ಪ್ರಸ್ತುತ ಈ ಮೀನಿಗೆ ಸ್ಥಳೀಯವಾಗಿ ‘ಗೋಳಿ’ ಎನ್ನುತ್ತಾರೆ. ಈ ಮೀನಿನ ವೈಜ್ಞಾನಿಕ ಹೆಸರು ಘೋಲ್ ಫಿಶ್. ಘೋಲ್ ಫಿಶ್‌ನ ವಾಯು ಚೀಲವನ್ನು ಸೌಂದರ್ಯ ವರ್ಧಕಗಳಲ್ಲಿ ಬಳಸುವುದರಿಂದ ವಿದೇಶಗಳಲ್ಲಿ ಹೆಚ್ಚು ಬೇಡಿಕೆಯಿದೆ. ಈ ಮೀನು ಸುಮಾರು ಒಂದು ಮೀಟರ್‌ವರೆಗೂ ಬೆಳೆಯುತ್ತದೆ.

ಅದಲ್ಲದೆ 30 ಕೆಜಿ ತೂಕದ ಘೋಲ್ ಫಿಶ್‌ಗೆ 5 ಲಕ್ಷ ರೂ.ವರೆಗೂ ಬೆಲೆ ಇದೆ ಎಂದು ಅಂದಾಜಿಸಲಾಗಿದೆ.
ಸದ್ಯ ಮೀನುಗಾರರಿಗೆ ಇದೊಂದು ಬಂಪರ್ ಆಫರ್ ಕೂಡ ಹೌದು. ಈ ಮೀನನ್ನು ನೋಡಲು ಹಲವಾರು ಮಂದಿ ಮಲ್ಪೆ ಬಂದರಿನಲ್ಲಿ ಕೂಡಿದ್ದು ಕೊನೆಗೂ ಉತ್ತಮ ಬೆಲೆಗೆ ಗೋಲ್ ಫಿಶ್ ಹರಾಜು ಆಗಿದೆ.

Leave A Reply

Your email address will not be published.