ಟೀ ಮಾಡಿಲ್ಲವೆಂದು ಪತ್ನಿಯನ್ನೇ ಕೊಂದ ಪಾಪಿ ಗಂಡ | ಆಸ್ಪತ್ರೆಗೆ ಬಂದವ ಹೇಳಿದ್ದೇನು ?

ಮದುವೆ ಅಂದರೆ ಎರಡು ಕುಟುಂಬಗಳು ಸಂಬಂಧ ಬೆಸೆಯುವುದು ಮಾತ್ರವಲ್ಲದೆ. ಗಂಡು ಹೆಣ್ಣು ಇಬ್ಬರೂ ಯಾವುದೇ ಮುಚ್ಚು ಮರೆ ಇಲ್ಲದೆ ಜೀವನ ನಡೆಸಿಕೊಂಡು ಹೋಗಬೇಕು. ಅಲ್ಲದೆ ಸಾವಿರಾರು ಕನಸು ಹೊತ್ತು ಹೆಣ್ಣು ತನ್ನ ಹೆತ್ತವರನ್ನು ಬಿಟ್ಟು ಗಂಡನ ಜೊತೆಗೆ ಹೋಗುತ್ತಾಳೆ. ಆದರೆ ಜಗಳ ಎಂದು ಬಂದಾಗ ಯಾರ ತಪ್ಪು ಯಾರದು ಸರಿ ಎನ್ನುವುದು ಸಹ ಮುಖ್ಯ ಆಗುತ್ತದೆ. ಆದರೆ ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬ ಗಾದೆ ಇದೆ. ಆದರೆ ಟೀ ಮಾಡಲಿಲ್ಲವೆಂಬ ಕಾರಣಕ್ಕೆ ಪತ್ನಿಯ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಂದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು ಸದ್ಯ ಆರೋಪಿ ಪತಿ 40 ವರ್ಷದ ಪತ್ನಿಯ ಮೇಲೆ ಚಪಾತಿ ಲಟ್ಟಿಸುವ ರೋಲಿಂಗ್ ಬೋರ್ಡ್ ನಿಂದ ಹಲ್ಲೆ ನಡೆಸಿದ್ದಾನೆಂದು ತಿಳಿದುಬಂದಿದೆ.

ಟೀ ಮಾಡಿಕೊಡು ಎಂದು ಪತಿ ಕೇಳಿದಾಗ ಪತ್ನಿ ನಿರಾಕರಿಸಿದ್ದಳಂತೆ. ಇದರಿಂದ ಕೋಪಗೊಂಡ ಪತಿ ಗರ್ಭಿಣಿ ಪತ್ನಿಗೆ ಹೊಡೆದಿದ್ದಾನೆ. ಪರಿಣಾಮ ಆಕೆ ಸ್ಥಳದಲ್ಲಿಯೇ ಪ್ರಜ್ಞಾಹೀನಳಾಗಿ ಕುಸಿದುಬಿದ್ದು ಪ್ರಾಣಬಿಟ್ಟಿದ್ದಾಳೆಂದು ತಿಳುದುಬಂದಿದೆ. ಪತ್ನಿಯ ಈ ಸ್ಥಿತಿ ಕಂಡು ಗಾಬರಿಯಾದ ವ್ಯಕ್ತಿ ಆಕೆಯನ್ನು ತರಾತುರಿಯಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಬಳಿ ತನ್ನ ಪತ್ನಿಗೆ ವಿದ್ಯುತ್ ಸ್ಪರ್ಶವಾಗಿ ಪ್ರಜ್ಞೆ ತಪ್ಪಿದ್ದಾಳೆಂದು ನಾಟಕವಾಡಿದ್ದಾನೆ. ಆದರೆ ಮಹಿಳೆಯ ದೇಹದಲ್ಲಿ ವಿದ್ಯುತ್ ಸ್ಪರ್ಶದ ಯಾವುದೇ ಲಕ್ಷಣಗಳಿಲ್ಲವೆಂದು ವೈದ್ಯರಿಗೆ ಗೊತ್ತಾಗಿದೆ. ಮಹಿಳೆ ಅನುಮಾನಾಸ್ಪದ ಸಾವಿನ ಬಗ್ಗೆ ಅವರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿ ತನ್ನ ಪತ್ನಿಯ ಸಾವಿನ ನಂತರ ಆಸ್ಪತ್ರೆಯಿಂದ ತಲೆಮರೆಸಿಕೊಂಡಿದ್ದಾನೆ. ಬಳಿಕ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರಂಭದಲ್ಲಿ ಆರೋಪಿ ಪತಿ ಪೊಲೀಸರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ದಾನೆ. ಪೋಲೀಸರು ಮರಣೋತ್ತರ ಪರೀಕ್ಷೆಯ ವರದಿ ನೋಡಿದಾಗ ಅದರಲ್ಲಿ ಮಹಿಳೆಗೆ ಗಂಭೀರ ಪ್ರಮಾಣದ ಗಾಯಗಳಾಗಿರುವ ಬಗ್ಗೆ ತಿಳಿದುಬಂದಿದೆ.

ಇದಾದ ಬಳಿಕ ತನಿಖೆ ವೇಳೆ ಆರೋಪಿ ಆಸ್ಪತ್ರೆಯಿಂದ ಪರಾರಿಯಾಗಿದ್ದಾನೆ. ತಾನು ಸಿಕ್ಕಿಬೀಳಬಹುದೆಂಬ ಭಯದಲ್ಲಿದ್ದ ಆತನನ್ನು ಪೊಲೀಸರು ಬೆನ್ನಟ್ಟಿ ಹಿಡಿದು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ವ್ಯಕ್ತಿ ತಾನುಮಾಡಿದ ಅಪರಾಧ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ.

ಮಾಹಿತಿ ಪ್ರಕಾರ ಈ ಘಟನೆಯು ಝಾರ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಘಾಟಿಯಾ ಗ್ರಾಮದಲ್ಲಿ ಶನಿವಾರ ನಡೆದಿದ್ದು, ವ್ಯಕ್ತಿ ತನ್ನ ಹೆಂಡತಿಯನ್ನು ಮನಬಂದಂತೆ ಥಳಿಸಿ ಕೊಂದಿದ್ದಾನೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿಯು ತನ್ನ 40 ವರ್ಷದ ಪತ್ನಿಯ ಮೇಲೆ ಚಪಾತಿ ಲಟ್ಟಿಸುವ ರೋಲಿಂಗ್ ಬೋರ್ಡ್‌ನಿಂದ ಹಲ್ಲೆ ನಡೆಸಿದ್ದಾನೆಂದು ಜಾರ್ಡಾ ಪೊಲೀಸ್ ಠಾಣೆಯ ಉಸ್ತುವಾರಿ ವೀರೇಂದ್ರ ಸಿಂಗ್ ಹೇಳಿದ್ದಾರೆ. ಸದ್ಯ ಇನ್ನು ಹೆಚ್ಚಿನ ಮಾಹಿತಿ ವಿಚಾರಣೆ ನಂತರ ತಿಳಿದು ಬರಬೇಕಿದೆ.

Leave A Reply

Your email address will not be published.