ರೈಲು ಪ್ರಯಾಣಿಕರೇ ಗಮನಿಸಿ | ಇಂದು ಈ 349 ರೈಲುಗಳ ಸಂಚಾರ ರದ್ದು

ರೈಲ್ವೆ ಪ್ರಯಾಣಿಕರು ಗಮನಿಸಬೇಕಾದ ಮುಖ್ಯ ಮಾಹಿತಿ ನೀಡಲಾಗಿದೆ. ಈಗಾಗಲೇ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಅನೇಕ ರೈಲ್ವೆ ನಿಲ್ದಾಣಗಳಲ್ಲಿ ವೈ-ಫೈ ವ್ಯವಸ್ಥೆ, ಎಸ್ಕಲೇಟರ್ ಗಳು ಸೇರಿದಂತೆ ಅನೇಕ ಸೌಲಭ್ಯಗಳನ್ನು ಆರಂಭಿಸಿದೆ. ಇದೀಗ,  ರೈಲ್ವೆ ಪ್ರಯಾಣಿಕರು ಹಬ್ಬದ ಸಂಭ್ರಮದಲ್ಲಿ ಹೆಚ್ಚು ಓಡಾಟ ನಡೆಸುತ್ತಿದ್ದು ಜನದಟ್ಟಣೆ ಕೂಡ ಹೆಚ್ಚಿರಲಿದೆ. ಈ ನಡುವೆ ರೈಲ್ವೇ ಪ್ರಯಾಣಿಕರಿಗೆ ಕಹಿ ಸುದ್ದಿ ಹೊರ ಬಿದ್ದಿದೆ.

ರೈಲ್ವೆ ನಿರ್ವಹಣೆ ಹಾಗೂ ಕಾರ್ಯಾಚರಣೆಯ ಸಂಬಂಧಿತ ಕೆಲಸಗಳ ಕಾರಣದ ನಿಮಿತ್ತ ಭಾರತೀಯ ರೈಲ್ವೆ ಸೋಮವಾರ 349 ರೈಲುಗಳನ್ನು ರದ್ದುಗೊಳಿಸಲಾಗಿದೆ. ಈ  ಅಧಿಸೂಚನೆಯನ್ನು ಹೊರಡಿಸಿದ ರೈಲ್ವೆ ಇಲಾಖೆ, 283 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿರುವ ಜೊತೆಗೆ ಡಿಸೆಂಬರ್ 26 ರಂದು ಹೊರಡಬೇಕಿದ್ದ 66 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿರುವ ಕುರಿತು ಮಾಹಿತಿ ನೀಡಿದೆ.

ಇಂದು ರದ್ದುಗೊಂಡ ರೈಲುಗಳ ಪಟ್ಟಿ ಹೀಗಿದೆ

01513, 01605, 01606, 01607, 01608, 01609, 01610, 01620, 01623, 01625, 01626, 01823, 01825 04029, 04030, 04041, 04042, 04148, 04149, 04319, 04335, 04336, 04353, 04354, 04356, 04379, 04353, 04568, 04577, 04601, 04602, 04647

04648, 0495 04974, 04975, 04977, 04978, 04987, 04988, 04999, 05000, 05035, 05036, 05039, 05040, 05091, 05092, 05093, 05039, 05039, 05040 . 12369, 12370, 12397, 12529, 12530, 12537, 12538, 12572, 12595, 12871, 12873, 13309, 13310, 13345, 13346, 13349, 13350 14232, 14235, 14236

14265, 14266, 14307, 14308, 14505, 14506, 14523, 14617, 14618, 14673, 15026, 15081, 15082, 15083, 15083, 15083, 1503, 15084 15620, 15903, 17003, 17004, 17011, 17012, 17035, 17036, 17233, 17234, 18103, 18413, 18414, 18632, 18635, 20948, 20949, 37338, 37343, 37348, 37411, 37412, 37415, 37416, 52539

ನಿಮ್ಮ ರೈಲು ರದ್ದುಗೊಂಡಿದೆಯೇ ಎಂಬ ಮಾಹಿತಿ ತಿಳಿಯುವುದು ಹೇಗೆ??

ನಿಮ್ಮ ರೈಲು ರದ್ದುಗೊಂಡಿದೆಯೇ ಎಂದು ಪರಿಶೀಲನೆ ನಡೆಸಲು  indianrail.gov.in/mntes ಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಬೇಕು. ಮುಂದೆ, ಪರದೆಯ ಮೇಲಿನ ಪ್ಯಾನೆಲ್‌ನಲ್ಲಿ ಅಸಾಧಾರಣ ರೈಲುಗಳನ್ನು ಆಯ್ಕೆಮಾಡಬೇಕು. ರದ್ದುಗೊಂಡ ರೈಲುಗಳ ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು
ಅಗತ್ಯತೆಯ ಅನುಸಾರ ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು ಸಂಪೂರ್ಣವಾಗಿ ಅಥವಾ ಭಾಗಶಃ ಆಯ್ಕೆಗಳು ಲಭ್ಯವಾಗಲಿದೆ.

ಈ ಮೂಲಕ ಆಯ್ಕೆಯನ್ನು ಒತ್ತಬೇಕು. IRCTC ವೆಬ್‌ಸೈಟ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದು ಮಾಡಲಾಗುತ್ತದೆ. ಇದರ ಜೊತೆಗೆ  ಬಳಕೆದಾರರ ಖಾತೆಗಳಲ್ಲಿ ಮರುಪಾವತಿಯನ್ನು ಆರಂಭಿಸಲಾಗುತ್ತದೆ. ಹೀಗಾಗಿ,  ಕೌಂಟರ್‌ಗಳ ಮುಖಾಂತರ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರು ಮರುಪಾವತಿಯನ್ನು ಪಡೆಯಲು ಮೀಸಲಾತಿ ಕೌಂಟರ್‌ಗೆ ಭೇಟಿ ನೀಡಬೇಕಾಗುತ್ತದೆ.

ಹಾಗಾದ್ರೆ, ಚಾಲನೆಯಲ್ಲಿರುವ ರೈಲುಗಳ ಬಗ್ಗೆ ಮಾಹಿತಿ ಕಲೆ ಹಾಕುವುದು  ಹೇಗೆ?

ಅಧಿಕೃತ ವೆಬ್‌ಸೈಟ್ https://www.irctchelp.in/live-train-running-status/ ಗೆ ಭೇಟಿ ನೀಡಬೇಕು. ಒದಗಿಸಿದ ಪಠ್ಯ ಪೆಟ್ಟಿಗೆಯಲ್ಲಿ ರೈಲು ಸಂಖ್ಯೆಯನ್ನು ನಮೂದು ಮಾಡಬೇಕು. DD-MM-YYYY ಫಾರ್ಮ್ಯಾಟ್‌ನಲ್ಲಿ ದಿನಾಂಕವನ್ನು ಆಯ್ಕೆಮಾಡಿ ಇಲ್ಲವೇ ನಮೂದಿಸಿದ ಬಳಿಕ ಫಲಿತಾಂಶವನ್ನು ಕೋಷ್ಟಕ ರೂಪದಲ್ಲಿ ಪಡೆಯಲು ಹುಡುಕಾಟ ಬಟನ್ ಒತ್ತಬೇಕು. SMS ಮುಖಾಂತರ ಪರಿಶೀಲಿಸಲು – 139 ಗೆ ‘AD’ ಎಂದು SMS ಕಳುಹಿಸಬೇಕು. ಇದಲ್ಲದೆ   ಭಾರತೀಯ ರೈಲ್ವೇ ವಿಚಾರಣೆ ಸಂಖ್ಯೆಯನ್ನು ಸಂಪರ್ಕಿಸಲು 139 ಕರೆ ಮಾಡಬೇಕು.

ನಿಮ್ಮ ಸ್ಟೇಷನ್ ಕೋಡ್ ಅನ್ನು ಹೇಗೆ ಪರಿಶೀಲಿಸುವುದು?

ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ – irctchelp.in ನಿಲ್ದಾಣದ ಕೋಡ್ ವಿರುದ್ಧ ನಿಲ್ದಾಣದ ಹೆಸರಿನ ಮೇಲೆ ಕ್ಲಿಕ್ ಮಾಡಬೇಕು. ಈ ಬಳಿಕ ನಿಮಗೆ ನಿಮ್ಮ  ನಿಲ್ದಾಣದ ಕೋಡ್ ದೊರೆಯಲಿದ್ದು, ಹೆಚ್ಚಿನ ನವೀಕರಣಗಳಿಗಾಗಿ ವಿವರಗಳನ್ನು ಉಳಿಸಿಕೊಳ್ಳಬಹುದು.

Leave A Reply

Your email address will not be published.